--Ads--

ಮೇಲೂರಿನಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಸರ್ಜಾಪುರ ಜೈಭೀಮ್ ತಂಡ ಪ್ರಥಮ

On: May 14, 2026 4:48 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮೇಲೂರಿನಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಸರ್ಜಾಪುರ ಜೈಭೀಮ್ ತಂಡ ಪ್ರಥಮ

ಶಿಡ್ಲಘಟ್ಟ : ಕ್ರೀಡೆಗಳಲ್ಲಿ ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕಾರ ಮಾಡಿಕೊಳ್ಳಬೇಕು ,ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳು ಆಯೋಜನೆಗೊಳ್ಳುವ ಮೂಲಕ ಯುವ ಸಮೂಹದಲ್ಲಿ ಒಗ್ಗಟ್ಟಿನ ಜೊತೆಗೆ ಅವರನ್ನು ಸಂಘಟಿತರನ್ನಾಗಿ ಮಾಡಲು ಹೆಚ್ಚು ಸಹಕಾರಿಯಾಗಲಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ, ಜೈ ಕರ್ನಾಟಕ ವಾಲೀಬಾಲ್ ಸಂಸ್ಥೆಯಿಂದ ಹಿರಿಯ ಮತ್ತು ಕಿರಿಯ ವಾಲಿಬಾಲ್ ಆಟಗಾರರ ಜ್ಞಾಪಕಾರ್ಥವಾಗಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಮೆಂಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಕರು, ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುವುದರ ಜೊತೆಗೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದರು.
ಪ್ರಥಮ ಬಹುಮಾನವನ್ನು ಸರ್ಜಾಪುರದ ಜೈಭೀಮ್ ತಂಡವು ಪಡೆದುಕೊಂಡಿದ್ದು 1 ಲಕ್ಷ ರೂ.ಗಳ ನಗದು ಬಹುಮಾನ, ಆಕರ್ಷಕ ಟ್ರೋಫಿ ಪಡೆಯಿತು.

ಹಾಸನ ತಂಡವು ದ್ವಿತೀಯ ಬಹುಮಾನ 75 ಸಾವಿರ ರೂ.ಗಳು ನಗದು, ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ಮೇಲೂರು ರಿಪಬ್ಲಿಕ್ ತಂಡವು 50 ಸಾವಿರ ರೂ.ಗಳ ನಗದು, ಆಕರ್ಷಕ ಟ್ರೋಪಿ ಪಡೆದುಕೊಂಡರು ,ನಾಲ್ಕನೇ ಬಹುಮಾನ ಬೆಂಗಳೂರು ನಗರದ ರೆಡ್ಡಿ ತಂಡವು ಪಡೆದಿದ್ದು, 25 ಸಾವಿರ ರೂ.ಗಳ ನಗದು, ಆಕರ್ಷಕ ಟ್ರೋಪಿ ಪಡೆದುಕೊಂಡರು.

ಈ ವೇಳೆ ಗ್ರಾಮದ ಹಿರಿಯ ವಾಲಿಬಾಲ್ ಆಟಗಾರರನ್ನು ಸನ್ಮಾನಿಸಲಾಯಿತು,ಕ್ರೀಡಾ ಪಟುಗಳಿಗೆ ಮತ್ತು ಪಂದ್ಯಗಳ ವೀಕ್ಷಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀಗಂಗಾದೇವಿ ಟ್ರಸ್ಟ್ ನ ಧರ್ಮದರ್ಶಿ ರಾಮಕೃಷ್ಣಪ್ಪ, ಜೈ ಕರ್ನಾಟಕ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಸಿ.ಎನ್.ಸೂರೇಗೌಡ, ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಗ್ರಾ.ಪಂ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ವಹ್ನಿಕುಲ ರಾಜ್ಯ ಸಂಘದ ನಿರ್ದೇಶಕ ಶಿವರಾಜ್, ವಾಲ್ಮೀಕಿ ಸಂಘದ ಅಧ್ಯಕ್ಷ ಗಿರೀಶ್ ನಾಯಕ್, ಆಯೋಜಕರಾದ ಎಸ್.ಎನ್.ಪಾರ್ಥಸಾರಥಿ, ಟಿ.ವಿಜಯಕುಮಾರ್, ರಾಜು (ಕೆಜಿಎಪ್),ಡಿ.ಮುನಿಶಾಮಯ್ಯ ಆರ್.ಚಂದ್ರೇಗೌಡ, ಪ್ರದೀಪ್ (ಜೋಗಿ), ತಿಮ್ಮರಾಜು,ಅಣ್ಣಪ್ಪ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗು ಸುತ್ತ ಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now