ವಿಜಯ ದರ್ಪಣ ನ್ಯೂಸ್….
ಶಿಕ್ಷಕರಲ್ಲಿನ ವೃತ್ತಿಪರತೆ, ಸಮಯಪಾಲನೆಯು ವೃತ್ತಿಸಾಧನೆಗೆ ಪೂರಕ

ಶಿಡ್ಲಘಟ್ಟ : ಕಳೆದ ಮೂರು ವರ್ಷಕ್ಕಿಂತ ಹೆಚ್ಚು ತಾಲ್ಲೂಕಿನಲ್ಲಿನ ಶೈಕ್ಷಣಿಕ ಪ್ರಗತಿಗಾಗಿ ಶಾಲೆಗಳಿಗೆ ವಿಜ್ಞಾನ ಕಿಟ್‌ಗಳನ್ನು ದಾನಿ ಸಂಸ್ಥೆಗಳ ಮೂಲಕ ಸರಬರಾಜು ಮಾಡಿಸಿರುವುದು ಶಿಕ್ಷಕರಿಗೆ ಅಗತ್ಯತರಬೇತಿಗಳನ್ನು ಕೊಡಿಸಿರುವುದು ಶೈಕ್ಷಣಿಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ
ಎಂದು ನಿಕಟಪೂರ್ವ ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ವರ್ಗಾವಣೆಗೊಂಡು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ, ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದರು.
ಪ್ರತಿಯೊಬ್ಬ ಶಿಕ್ಷಕರಲ್ಲಿಯೂ ನಿರಂತರ ಪರಿಶ್ರಮ ಸಮಯಪಾಲನೆ, ಅಧ್ಯಯನಶೀಲ ತೆಯಂತಹ ಗುಣಗಳು ತನ್ನ ವೃತ್ತಿಸಾಧನೆಗೆ ಪೂರಕವಾಗುತ್ತದೆ ,ತನ್ನ ವೃತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಹ ಗುಣವಿರಬೇಕುಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ, ಅಧಿಕಾರಿಗಳು ತಮ್ಮ ಕೆಳಮಟ್ಟದ ನೌಕರರೊಂದಿಗೆ, ಎಲ್ಲಾ ಸಹವರ್ತಿಗಳೊಂದಿಗೂ ತೋರಬೇಕಾದ ವಿಶ್ವಾಸವು ಅನುಕರಣೀಯವಾದದು ಎಂದ ಅವರು ತಾಲ್ಲೂಕಿನಲ್ಲಿ ಗುರುಭವನ ನಿರ್ಮಾಣ ಕಾರ್ಯದಲ್ಲಿ ಬಂದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಹಕಾರ ನೀಡುವುದರೊಂದಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳಾಗಿ ಯಶಸ್ವಿಯಾಗಿದ್ದಾರೆ ಎಂದರು
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಧಿಕಾರಿಗಳು ಉತ್ತಮ ಶಿಕ್ಷಕಸ್ನೇಹಿಯೂ ಆಗಬೇಕಾದ್ದು ಅಗತ್ಯವಾಗಿದ್ದು, ಆ ಮೂಲಕ ಶೈಕ್ಷಣಿಕ ಬಲವರ್ಧನೆ ಸಾಧಿಸಬಹುದಾಗಿದೆ ಕಳೆದ ಮೂರು ವರ್ಷಗಳಲ್ಲಿ ಸಿ.ಎ.ನರೇಂದ್ರಕುಮಾರ್ ಅವರು ಶಿಕ್ಷಕಸ್ನೇಹಿಯಾಗಿದ್ದುಕೊಂಡು ತಾಲ್ಲೂಕಿನ ಶಿಕ್ಷಣಕೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ನುಡಿದರು.
ಇದೇ ವೇಳೆ ಪ್ರಬಾರಿ ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಚ್.ಪ್ರಸನ್ನಕುಮಾರ್, ಚಿಕ್ಕಬಳ್ಳಾಪುರ ಡಯಟ್‌ನ ಉಪನ್ಯಾಸಕ ಆಂಜನೇಯ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ,
ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರಾರೆಡ್ಡಿ, ಕಾರ್ಯದರ್ಶಿ ರೂಪಸಿರಮೇಶ್, ತಮೀಮ್ ಅನ್ಸಾರಿ ಇನ್ನೀತರರು ಬಿಇಒ ಅವರ ಕಾರ್ಯ ವೈಖರಿ ಕುರಿತು ಮಾತನಾಡಿದರು.
ವರ್ಗಾವಣೆಗೊಂಡ ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಅವರನ್ನು ವಿವಿಧ ಸಂಘಗಳ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಯು.ವೈ.ಮಂಜುನಾಥ್, ಪ್ರೌಢಶಾಲಾ ಮುಖ್ಯಶಿಕ್ಷಕ ಶಿವಶಂಕರ್, ಸತ್ಯನಾರಾಯಣ್,ಎಂ.ಶಿವಕುಮಾರ್ , ಎಂ.ಕೆ.ಸಿದ್ಧರಾಜು,ಒಲಿಶ, ಓಬಯ್ಯ, ಇಶ್ರತ್, ವಿವಿಧ ಶಾಲೆಗಳ ಮುಖ್ಯಶಿಕ್ಷಕರು ಶಿಕ್ಷಕರು ಹಾಗು ಶಿಕ್ಷಕಿಯರು ಭಾಗವಹಿಸಿದ್ದರು.









