ಅರಿವು ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಯಡಿ ಅರ್ಜಿ ಆಹ್ವಾನ.

ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ.        ಬೆಂಗಳೂರು ಗ್ರಾ. ಜಿಲ್ಲೆ, ಜೂನ್ 23

ಕರ್ಅನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ  ನಿಗಮ ನಿಯಮಿತ(ನಿ), ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವತಿಯಿಂದ 2023-24 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಹಾಗೂ ಪಾರ್ಸಿ ಜನಾಂಗದವರಿಗೆ ಅರಿವು ವಿದೇಶಿ (OVERSEAS) ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ವಿದೇಶಿ (OVERSEAS) ಸಾಲ ಯೋಜನೆಯಡಿಯಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಮತ್ತು ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವವಿದ್ಯಾಲಯದಿಂದ ಭಾರತ ದೇಶದ ಪ್ರತಿಷ್ಟಿತ IIT’S, IIM’S, ISC ಸಂಸ್ಥೆಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾಬ್ಯಾಸ (OVERSEAS EDUCATION) ಯೋಜನೆಯಡಿಯಲ್ಲಿ ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ನಿಗಮದ www.kmdconline.karnataka.gov.in ಮೂಲಕ ಆನ್‌ಲೈನ್‌ನಲ್ಲಿ 2023ರ ಜೂನ್ 13 ರಿಂದ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್‌ನಲ್ಲಿ ಭರ್ತಿ ಮಾಡಿದ ಕೊಡಲೇ ಅರ್ಜಿಯನ್ನು ಪ್ರಿಂಟ್‌ ಔಟ್ ಪಡೆದು ಕ್ಯೂಆರ್ ಕೋಡ್ ಹೊಂದಿದ ಆರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಸ್.ಎಸ್.ಎಲ್‌.ಸಿ., ಪಿ.ಯು.ಸಿ. ಅಂಕಪಟ್ಟಿ, ಆಧಾರ್ ಕಾರ್ಡ್‌, ಫೋಟೋ 5, (Parents and Student) ಎಸ್.ಎಸ್.ಎಲ್.ಸಿ ವರ್ಗಾವಣೆ ಪತ್ರ, ಪ್ರಸ್ತುತ ಅಧ್ಯಯನದ ಪ್ರಮಾಣ ಪತ್ರ, ಕಾಲೇಜು ಶುಲ್ಕ ರಚನೆ, ಪಾಸ್ಪೋರ್ಟ್ ನಕಲು, ವೀಸಾ ನಕಲು, ಫಲಾನುಭವಿಯ ಪ್ರಮಾಣ ಪತ್ರ, ಫಲಾನುಭವಿ ಮತ್ತು ಜಮೀನದಾರರ ಜಂಟಿ ಪ್ರಮಾಣ ಪತ್ರ, ಪ್ರಾಮಿಸರಿ ನೋಟ್ ಜೊತೆಗೆ ಡಿ.ಪಿ ನೋಟ್ ಡೆಲಿವರಿ ಲೇಟರ್, ಮಾರಾಟ ಪತ್ರಗಳು ಮತ್ತು ತಾಯಿಯ ಪತ್ರ ಖಾತಾಸಾರ ಮತ್ತು ಖಾತಾ ಪ್ರಮಾಣ ಪತ್ರ ಅಥವಾ ರೂಪಾಂತರ ನಮೂನೆ 15ರಲ್ಲಿ ನಿಲ್ ಎನ್ನಂಬರೆನ್ಸ್ ಪ್ರಮಾಣ ಪತ್ರ ನವೀಕೃತ ತೆರಿಗೆ ಪಾವತಿಸಿದ ರಶೀದಿ, ಸೂಕ್ತ ಪ್ರಾಧಿಕಾರದಿಂದ ಮಾರ್ಗದರ್ಶನ ದರ ಜಿಲ್ಲಾ ವ್ಯವಸ್ಥಾಪಕರಿಂದ ಆಸ್ತಿಯ ಸ್ಥಳ ಪರೀಶೀಲನೆ ವರದಿ ಹಾಗೂ ನೋಂದಾಯಿತ ಮೌಲ್ಯ ಮಾಪಕರಿಂದ ಮೌಲ್ಯಮಾಪನ ವರದಿ ಈ ಎಲ್ಲಾ ದಾಖಲೆಗಳನ್ನು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ವ್ಯವಸ್ಥಾಪಕರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಂ.59, ವೈ.ಎನ್.ಬಿಲ್ಡಿಂಗ್, ಹೊಸ ಬಸ್ ಸ್ಟಾಂಡ್ ಹಿಂಭಾಗ, ಯಲಹಂಕ ಬೀದಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-27681786, ಇಮೇಲ್ kmdcbrural@gmail.com, ಸಹಾಯವಾಣಿ ಸಂಖ್ಯೆ: 8277799990 ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.