ವಿಜಯ ದರ್ಪಣ ನ್ಯೂಸ್…..
ಸರ್ವರ್ ಭೂತದಕಾಟ-ತಪ್ಪದ ಹಳೇ ಪೇಪರ್ ಕಾಟ ಯಾರಿಗೇಳೋಣ ನಮ್ಮ ಪ್ರಾಬ್ಲಮ್…

ನೆಲಮಂಗಲ: ಬಹುತೇಕ ಎಲ್ಲ ಸೇವೆಗಳಿಗೂ ಜನರಿಂದ ತೆರಿಗೆ ಪಡೆಯುವ ಸರ್ಕಾರ ಸಮರ್ಪಕ ಸೌಲಭ್ಯ ಕಲ್ಪಿಸುವಲ್ಲಿ ಮಾತ್ರ ಎಡವಿಬಿಡುತ್ತದೆ. ಹೊಸ ಹೊಸ ಯೋಜನೆಗಳು, ಘೋಷಣೆಗಳು, ಕಾರ್ಯಕ್ರಮಗಳು ಜನರ ವಿಶ್ವಾಸ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ಇದೇ ಕಾರಣ. ಇತ್ತೀಚಿನ ವರ್ಷಗಳಲ್ಲಂತೂ ಎಲ್ಲ ಇಲಾಖೆಗಳಲ್ಲಿ ತಂತ್ರಜ್ಞಾನದ ಅಳವಡಿಕೆ ಆಗಿದೆ. ಕಡತ ಕಾಯ್ದಿರಿಸುವಿಕೆ, ಜನರಿಗೆ ಸೌಲಭ್ಯ ಒದಗಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪಾರದರ್ಶಕ ಹಾಗೂ ಪರಿಣಾಮ ಕಾರಿಯಾಗಿ ನಡೆಯಬೇಕು ಎಂಬುದು ಇದರ ಹಿಂದಿನ ಆಶಯ.
ಆದರೆ, ವಾಸ್ತವದಲ್ಲಿ ಅಂಥ ಸ್ಥಿತಿ ಹಲವು ಇಲಾಖೆಗಳಲ್ಲಿ ಇಲ್ಲವೇ ಇಲ್ಲ. ಯಾವುದೋ ನೆಪ ಹೇಳಿ ಜನರು ಕಚೇರಿಗಳಿಗೆ ಎಡತಾಕುವಂತೆ ಮಾಡುವುದು, ಲಂಚ ನೀಡಿದರೆ ಅಥವಾ ಪ್ರಭಾವ ಬಳಸಿ ಒತ್ತಡ ತಂದರೆ ಮಾತ್ರ ಕೆಲಸ ಮಾಡಿಕೊಡುವುದು ಸೇರಿದಂತೆ ಹಲವು ಧೋರಣೆಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಅಲುಗಾಡಿಸಿ ಬಿಡುತ್ತವೆ. ಭ್ರಷ್ಟಾಚಾರದ ವಿರುದ್ಧ ವೇದಿಕೆಗಳಿಂದ ದೊಡ್ಡ ದನಿಯಲ್ಲಿ ಘೋಷಣೆಗಳು ಮೊಳಗುತ್ತಿದ್ದರೂ, ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರದ ಹಾವಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ದುಡ್ಡು ನೀಡಿಲ್ಲ ಎಂಬ ಒಂದೇ ಕಾರಣಕ್ಕೆ ಶ್ರೀಸಾಮಾನ್ಯನ ಅರ್ಜಿಯನ್ನು ಕಸದಬುಟ್ಟಿಗೆ ಎಸೆಯುವಂಥ ನಿದರ್ಶನಗಳಿಗೆ ಕೊರತೆ ಇಲ್ಲ.ನೆಲಮಂಗಲ ತಹಶೀಲ್ದಾರ್ ಕಚೇರಿಯ ಇಂಥದ್ದೊಂದು ಲೋಪದ ಬಗ್ಗೆ ವರದಿ ಪ್ರಕಟಿಸಿ ಆಡಳಿತವನ್ನು ಎಚ್ಚರಿಸುವ ಇರಾದೆ ಪತ್ರಿಕೆಯದು ಈ ತಾಲ್ಲೂಕಿಗೆ ಸುಮಾರು ತ್ಯಾಮಗೊಂಡ್ಲು, ಸೋಂಪುರ, ಕಸಬಾ ಹೋಬಳಿಗಳು ಒಳಗೊಂಡoತ್ತೇ ನೂರಾರು ಹಳ್ಳಿಗಳು ಸೇರಿ ತಾಲ್ಲೂಕು ಕೇಂದ್ರವಾಗಿ ಗುರುತಿಸಿಕೊಂಡಿದೆ.
ಈ ತಾಲ್ಲೂಕಿನಲ್ಲಿ ಭೂಮಿಗೆ ಚಿನ್ನದ ಬೆಲೆಯಿದ್ದು ರಿಯಲ್ ಎಸ್ಟೇಟ್ ವ್ಯವಹಾರವು ಜೋರು, ಅದು ಒತ್ತಟ್ಟಿಗಿರಲಿ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬಂದ ನಂತರ ಕಂದಾಯ ಸಚಿವರಾಗಿ ಕೃಷ್ಣ ಬೈರೇಗೌಡರು ಅಧಿಕಾರ ವಹಿಸಿಕೊಂಡ ದಿನದಿಂದ ಒಂದಲ್ಲಾ ಒಂದು ತಾಲ್ಲೂಕು ಕಚೇರಿಗಳಿಗೆ ಉಪ ವಿಭಾಗಾದಿಕಾರಿಗಳ ಕಚೇರಿಗಳಿಗೆ ಎಡತಾಕಿ ಅಲ್ಲಿನ ಕಚೇರಿಗಳ ಲೋಪ ದೋಷಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕಾರ್ಯ ಮಾಡಿದ್ದಾರೆ.
ಅದು ಸಾರ್ವಜನಿಕರ ಹಿತ ದೃಷ್ಟಿಯಿಂದ ಒಳ್ಳೆಯದು ಅದಕ್ಕೆ ಅವರು ಅಭಿನಂದನಾರ್ಹರು ಕೂಡ ಅದಕ್ಕೆ ನಮ್ಮ ತಕರಾರು ಇಲ್ಲಾ ಇಲ್ಲಿನ ಹಾಗೂ ಬಹುತೇಕ ತಹಶೀಲ್ದಾರ್ ಕಚೇರಿಯಲ್ಲಿ ಸರಕಾರದ ಇಚ್ಛೆಯಂತೆ ಹಳೇ ದಾಖಲಾತಿಗಳಾದ ಕೈ ಬರಹದ ಪಹಣಿ, ಮ್ಯೂಟೇಷನ್, ಐಎಲ್ಆರ್ ಆರ್ ಕೇತುವಾರು, ಪ್ರಿಲಿಮಿನರಿ,ಇನ್ನೂ ಬಹುಮುಖ್ಯವಾದ ಕಡತಗಳು ಅಭಿಲೇಖಾಲಯದಲ್ಲಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅನುಕೂಲವಾಗಲೂ ಸರಕಾರ ಹರಿದು ಹಂಚಿ ಹೋಗುತ್ತಿರುವ ಹಾಗೂ ಹೋಗಿರುವ ಪೇಪರ್ ಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಿಸಿ ಅದನ್ನು ಆನ್ಲೈನ್ ಮು ಖಾಂತರ ಪಾರದರ್ಶಕವಾಗಿಜನರಿಗೆ ಸಿಗುವಂತಾಗಲಿ,ಎಂಬ ಉದ್ದೇಶದಿಂದ ಸರಕಾರ ಮಾಡಿರುವ ಕ್ರಮ ಸರಿಯಾಗಿರಬಹುದು ಎಂದು ಕೊಂಡರುಇಲ್ಲಿನ ರೆಕಾರ್ಡ್ (ರೂಮ್ ನಲ್ಲಿ) ಅಭಿಲೇಖಾಲಯದಲ್ಲಿಕೈ ಬರಹದ ಪಹಣಿ, ಐ ಎಲ್ ಆರ್ ಆರ್, ಕೇತುವಾರು, ಮ್ಯೂಟೇಷನ್, ಪ್ರಿಲಿಮಿನರಿ ಪ್ರತಿಗಳು ಸೇರಿದಂತೆಸಾಕಷ್ಟು ದಾಖಲೆಗಳು ರೈತರಿಗೆ ಸಮರ್ಪಕವಾಗಿಸಿಗುತ್ತಿಲ್ಲಾ ಎನ್ನಲಾಗಿದೆ.
ಜವಾಬ್ದಾರಿಯಾಗಿದಾಖಲೆಗಳ ಸ್ಕ್ಯಾನ್ ಮಾಡಬೇಕಾಗಿದ್ದ ಹೊರಗುತ್ತಿಗೆನೌಕರರು ಅಥವಾ ಸಿಬ್ಬಂದಿಗಳಕಣ್ಣು ತಪ್ಪಿನಿಂದಲೋ? ಅಥವಾ ಬೇಜವಾಬ್ದಾರಿಯಿಂದಲೋ? ಏನೋ ದಾಖಲೆಗಳು ಸರಿಯಾಗಿ ಸ್ಕ್ಯಾನ್ಆಗಿರುವುದಿಲ್ಲ ಮತ್ತು ಸ್ಕ್ಯಾನಿಂಗ್ ನಲ್ಲಿ ಅರ್ಧದಷ್ಟು ಪ್ರಗತಿ ಕಾಣದೆ ಸ್ಕ್ಯಾನಿಂಗ್ ಪ್ರಕ್ರಿಯೆ ಕುಂಟುತ್ತಾ ತೆವಳುತ್ತ ಸಾಗಿದೆ
ಇದರ ಜೊತೆ ಸರ್ವರ್ ಭೂತದ ಸಮಸ್ಯೆ ಯಿಂದ ಜನ ಸಾಮಾನ್ಯರಿಗೆ ಆನ್ಲೈನ್ನಲ್ಲೂ ದಾಖಲೆಗಳು ಸಿಗದೇ ಅತ್ತಾ ಆಫ್ ಲೈನ್ ನಲ್ಲೂ(ಮ್ಯಾನುಯಲ್) ದಾಖಲೆಗಳುಸಿಗದೇ ದಿನನಿತ್ಯ ಸಾರ್ವಜನಿಕರು ಪರಿತಪಿಸುವಂತಾಗಿದೆ ಇದರಿಂದ ಅಧಿಕಾರಿಗಳಿಗೆ ಇಡಿ ಶಾಪ ಹಾಕುತಿದ್ದಾರೆ.
ಬೇರೆಬೇರೆಊರುಗಳಿಂದರೈತರುಬಂಧುಅನ್ನ, ನೀರು ಇಲ್ಲದೇಬರೀ ಕೈಲಿ ದಾಖಲೆ ಗಳು ಸಿಗದೇ ಹಿಂತಿರುಗಬೇಕಾದಪರಿಸ್ಥಿತಿ ನಿರ್ಮಾಣವಾಗಿದೆ ಎಂದುಸಾರ್ವಜನಿಕರುಆರೋಪಿಸಿದ್ದಾರೆ. ಇದರ ಮದ್ಯೆಕೆಲವು ಹಣಬಲವಿರುವವರು ಮತ್ತು ಪ್ರಭಾವಶಾಲಿಗಳು ಅಧಿಕಾರಿಗಳಿಗೆ ಲಂಚ ಕೊಟ್ಟು ಅಥವಾ ಒತ್ತಡ ತಂದುದಾಖಲೆ ಪಡೆಯುತ್ತಿದ್ದಾರೆ ಎನ್ನುವ ಆರೋಪವು ಇದೆ ಎನ್ನಲಾಗಿದೆ
ಆದರೆ, ಕಂದಾಯ ಇಲಾಖೆಯಲ್ಲಿ ಇಂಥ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ಸರ್ವರ್ ಸರಿ ಇಲ್ಲ, ದಾಖಲೆಗಳು ಅಪ್ಲೋಡ್ ಆಗುತ್ತಿಲ್ಲ ಎಂಬ ಸಬೂಬು ಹೇಳುತ್ತ ಜನರ ಸಮಯ ವ್ಯರ್ಥಗೊಳಿಸಲಾಗುತ್ತಿದೆ. ದಾಖಲೆಗಳಿಗೆ ತಿಂಗಳುಗಳ ಕಾಲ ಕಾಯಬೇಕಿದೆ. ತಂತ್ರಜ್ಞಾನವನ್ನು ಸರಿಯಾಗಿ ಅನುಷ್ಠಾನಕ್ಕೆ ತರದ ಇಲಾಖೆಗಳು ಕೊರತೆಗಳನ್ನು ಸರಿಪಡಿಸಿಕೊಳ್ಳಬೇಕು.
ಮುಖ್ಯವಾಗಿ, ಜನರ ಸಮಸ್ಯೆ, ಅಹವಾಲಿಗೆ ಸಂಬಂಧಿಸಿದಂತೆ ಶೀಘ್ರವಾಗಿ ಸ್ಪಂದಿಸುವುದು ಅತ್ಯಗತ್ಯ.ಎನ್ನಲಾಗುತ್ತಿದೆ.
ನಾನು ಒಂದು ವಾರ ಗಳಿಂದ ಹಳೇ ದಾಖಲೆ ಗಳಿಗೆ ರೆಕಾರ್ಡ್ ರೂಮ್ ಗೆ ಅರ್ಜಿ ಸಲ್ಲಿಸಿ ದಿನ ನಿತ್ಯ ಬಂದು ದಾಖಲೆಗಳು ಸಿಗದೇ ವಾಪಾಸ್ ಹೋಗುತ್ತಿದ್ದೇನೆ ಅಧಿಕಾರಿಗಳು ಸರ್ವರ್ ಸಮಸ್ಯೆ ಹೇಳಿ ವಾಪಾಸ್ ಕಳಿಸುತ್ತಿದ್ದು ಆನ್ ಲೈನ್ ಕಾಪಿ ಸಿಗುವವರೆಗೂ ಜೆರಾಕ್ಸ್ ಮೂಲಕ ದಾಖಲೆ ಕೊಟ್ಟರೆ ರೈತರಿಗೆ ಅನುಕೂಲ ವಾಗಲಿದೆ.

ತಿರುಮಲೇಗೌಡ, ರೈತ ಬೂದಿಹಾಳ್ ಗ್ರಾಮ.
ತಾಲ್ಲೂಕು ಕಚೇರಿಯ ಕರ್ಮಕಾಂಡ ಒಂದಂತೂ ಹೇಳತೀರದಾಗಿದ್ದು ಅದರಲ್ಲೂ ಅಭಿಲೇಖಾಲಯದಲ್ಲಿ ರೈತರಿಗೆ, ದಲಿತರಿಗೆ, ಜನಸಾಮಾನ್ಯರಿಗೆ ಸಮರ್ಪಕವಾಗಿ ದಾಖಲೆಗಳು ಸಿಗುತ್ತಿಲ್ಲ, ದಾಖಲೆಗಳನ್ನು ಪಡೆಯಬೇಕಾದರೆ ಹಣ ನೀಡಬೇಕಾಗಿದೆ ಇಲ್ಲಿ ಕರ್ತವ್ಯ ಮಾಡುತ್ತಿರುವ ಸಿಬ್ಬಂದಿಗಳಾದ, ಮಹೇಶ್, ಮತ್ತು ಹರ್ಷ ವರ್ಧನ್ ರವರಿಂದ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿದ್ದು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೇ ಉಡಾಪೆ ತೋರಿಸುತ್ತಿದ್ದಾರೆ. ಕೂಡಲೇ ತಹಶೀಲ್ದಾರ್ ರವರು ಇಬ್ಬರನ್ನು ಬೇರೆಡೆಗೆ ವರ್ಗಾವಣೆ ಮಾಡಿ ರೆಕಾರ್ಡ್ ರೂಮ್ ಸಮಸ್ಯೆ ಬಗೆಹರಿಸುವಂತೆ ಅಗ್ರಹಿಸುತ್ತೇವೆ, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು.

ಅರುಣ್ ಕುಮಾರ್, ಚಿಕ್ಕ ಮಾರನಹಳ್ಳಿ ಜಿಲ್ಲಾಧ್ಯಕ್ಷರು, ದಲಿತಪರ ಹೋರಾಟಗಾರರು.