--Ads--

ನೆಲಮಂಗಲ ನಗರಕ್ಕೆ ಒಳಚರಂಡಿಮತ್ತು ಕಾವೇರಿ ನೀರು ಘೋಷಣೆ: ಕಾಂಗ್ರೇಸ್ ಕಾರ್ಯಕರ್ತರ ಸಂಭ್ರಮಾಚರಣೆ

On: March 10, 2026 6:30 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನೆಲಮಂಗಲ ನಗರಕ್ಕೆ ಒಳಚರಂಡಿಮತ್ತು ಕಾವೇರಿ ನೀರು ಘೋಷಣೆ: ಕಾಂಗ್ರೇಸ್ ಕಾರ್ಯಕರ್ತರ ಸಂಭ್ರಮಾಚರಣೆ

ನೆಲಮಂಗಲ: ನಗರಕ್ಕೆ ಒಳಚರಂಡಿ ಕಾಮಗಾರಿ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಿ ಕಾವೇರಿ ನೀರು ಬಜೆಟ್‌ನಲ್ಲಿ ಘೋಷಣೆ ಹಿನ್ನೆಲೆ ನಗರದ ಜನರು, ಕಾಂಗ್ರೆಸ್ ಮುಖಂಡರು, ಸಂಭ್ರಮಾಚರಣೆ ಮಾಡಿದರು.

ನಗರದ ತಾಲೂಕು ಕಚೇರಿ ಮುಂಭಾಗದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಶಾಸಕ ಎನ್.ಶ್ರೀನಿವಾಸ್ ಹಾಗೂ ಸಿಎಂ, ಡಿಸಿಎಂ, ಸಚಿವರ ಪರ ಘೋಷಣೆ ಕೂಗಿದರು.

ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಪ್ರದೀಪ್ ಮಾತನಾಡಿ, ನೆಲಮಂಗಲ ನಗರದಲ್ಲಿ ಒಳಚರಂಡಿ ಇಲ್ಲದೆ ಶೌಚಾಲ ಯದ ನೀರು ಚರಂಡಿ, ಕೆರೆಗಳಿಗೆ ಮಾತ್ರವಲ್ಲದೇ, ಅಂತರ್ಜ ಲಕ್ಕೆ ಸೇರಿ ಬಹಳಷ್ಟು ಆರೋಗ್ಯ ಸಮಸ್ಯೆಗೂ ಕಾರಣವಾಗಿದೆ. ಆದರೆ ಈಗ ಶಾಸಕರು ಬಹಳಷ್ಟು ಪರಿಶ್ರಮ ಪಟ್ಟು ಸಿಎಂ, ಡಿಸಿಎಂ, ಸಚಿವರ ಮೂಲಕ ಒಳಚರಂಡಿ ವ್ಯವಸ್ಥೆ ಬಜೆಟ್ ನಲ್ಲೂ ಘೋಷಣೆಯಾಗುವಂತೆ ಮಾಡಿದ್ದಾರೆ.

ಈ ಮೂಲಕ ಜನರಿಗೆ ಕೊಟ್ಟಮಾತನ್ನು ಉಳಿಸಿಕೊಂಡಿದ್ದಾರೆ. ಒಳಚರಂಡಿ ಯೋಜನೆಯ ಜತೆ ನಗರಕ್ಕೆ ಎದುರಾಗಿದ್ದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕಾವೇರಿ ನೀರನ್ನು ತರಲು ಬಜೆಟ್‌ನಲ್ಲಿ ಘೋಷಣೆ ಮಾಡಿಸಿರುವುದು ಎಂದಿಗೂ ಮರೆಯಲಾಗದು ಎಂದರು.

ಲಾಡು ವಿತರಣೆ : ಬಹು ವರ್ಷಗಳ ಸಮಸ್ಯೆಗೆ ಎನ್.
ಶ್ರೀನಿವಾಸ್‌ ಅವರುಶಾಸಕರಾದ ನಂತರ ಪರಿಹಾರವಾಗಿದೆ. ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಕೇವಲ 3ವರ್ಷದೊಳಗೆ ಈಡೇರಿಸಿದ್ದಾರೆ. ಜನರಿಗೆ ಈ ಶುಭಸುದ್ದಿಯನ್ನು ಲಾಡು ವಿತರಣೆ ಮಾಡವ ಮೂಲಕ ಹಂಚಿಕೊಂಡಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಗಣೇಶ್ ತಿಳಿಸಿದರು.ಎನ್‌ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು,ಮಾತನಾಡಿ ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಬಹುವರ್ಷಗಳ ಸಮಸ್ಯೆಗೆ ಮುಕ್ತಿ ನೀಡಲೇಬೇಕೆಂದು ಸಿ ಎಂ, ಡಿಸಿಎಂ ಸಚಿವರನ್ನು ಹಲವು ಬಾರಿ ಭೇಟಿ ಮಾಡಿದ ಶಾಸಕರು, ಬಜೆಟ್‌ನಲ್ಲಿ ಒಳಚರಂಡಿ, ಕಾವೇರಿ ನೀರು ಘೋಷಣೆಗೆ ಕಾರಣರಾಗಿದ್ದಾರೆ.

ಈ ಮೂಲಕ ನೆಲಮಂಗಲ ನಗರದ ಜನರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಒಳಚರಂಡಿ ಹಾಗೂ ಕಾವೇರಿ ನೀರು ತರಲೇಬೇಕು ಎಂದು ಶಾಸಕರು ಪಟ್ಟ ಪರಿಶ್ರಮ ಕೇಳಿದರೆ ಅಚ್ಚರಿಯಾಗುತ್ತದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ಕೋಟ್ಯಾಂತರ ರೂ. ಅನುದಾನದಲ್ಲಿ ಕೆಲಸ ಮಾಡಿಸುತ್ತಿರುವ ಶಾಸಕರಿಗೆ ಎಂ ನಾರಾಯಣಗೌಡ ವಿಶೇಷ ಧನ್ಯವಾದ ಹೇಳಿದ್ದಾರೆ

ನೆಲಮಂಗಲ ನಗರಕ್ಕೆ ಕನಸಾಗಿಯೇ ಉಳಿದಿದ್ದ ಒಳಚರಂಡಿ ಹಾಗೂ ಶಾಶ್ವತ ನೀರಿನ ಯೋಜನೆಯನ್ನು ಶಾಸಕ ಎನ್.ಶ್ರೀನಿವಾಸ್ ಅವರು ತುಂದಿದ್ದಾರೆ. ಜನರಿಗೆ ಮಾತು ಕೊಟ್ಟಂತೆ ನಡೆದುಕೊಳ್ಳಬೇಕು ಎಂಬ ಶಾಸಕರ ದಿಟ್ಟ ನಿರ್ಧಾರದಿಂದ ಈ ಕೆಲಸವಾಗಿದೆ. ಶಾಸಕರ ಸಾಧನೆ ನೆಲಮಂಗಲ ಇತಿಹಾಸದಲ್ಲಿ ಉಳಿಯಲಿದೆ ಎಂದು ಹೇಮಂತ್ ಕುಮಾರ್ ಹೇಳಿದ್ದಾರೆ

ಈ ಸಂದರ್ಭದಲ್ಲಿ ಚಿಕ್ಕಹನುಮೇಗೌಡ, ಟಿಎಪಿಸಿ ಎಂಎಸ್ ಅಧ್ಯಕ್ಷರಾದ ಹನುಮಂತರಾಜು,ಮಾಜಿ ಅಧ್ಯಕ್ಷರಾದ ನರಸಿಂಹಮೂರ್ತಿ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಮಂಜುನಾಥ್ ಗೌಡ ನಗರಸಭೆ ಸದಸ್ಯರಾದ ಸುಧಾಕೃಷ್ಣಪ್ಪ, ಲೋಲಾಕ್ಷಿಗಂಗಾಧ‌ರ್, ಮುಖಂಡರಾದ ವಕೀಲ ಎನ್.ಪಿ ರಘುನಾಥ್, ಆನಂದ್, ನರಸಿಂಹಮೂರ್ತಿ, ಬಿ.ಜಿ ವಾಸು, ರಾಜಣ್ಣ ಮಿಲ್ಟಿ ಮೂರ್ತಿ, ಚಿಕ್ಕಣ್ಣ, ಭಕ್ತನಪಾಳ್ಯ ಮುನಿ ರಾಜು, ಯಸಂತ್, ಸಿಎಂ ಗೌಡ, ಲಕ್ಷ್ಮೀನಾರಾಯಣ್, ಜಗದೀಶ್, ಭೈರನಹಳ್ಳಿ ವೆಂಕಟೇಶ್, ರಮೇಶ್‌ಬಾಬು, ಬೆಟ್ಟಸ್ವಾಮಿ, ನಾಗರಾಜು, ಮುನಿಯಪ್ಪ ಕೆಂಪಲಿಂಗನಹಳ್ಳಿ ಕೆಂಪೇಗೌಡ, ರಾಜಣ್ಣ, ವೆಂಕಟೇಶ್, ಕೆಂಪರಾಜು, ರುಕ್ಷ್ಮಿಣಿ, ಹನುಮಂತಮ್ಮ ಮತ್ತಿತರರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now