ವಿಜಯ ದರ್ಪಣ ನ್ಯೂಸ್….
ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದ ಘಟನೆ
ಯುವಕನ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಮೂವರು ಆತ್ಮಹತ್ಯೆ: ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ

ತಾಂಡವಪುರ ಜೂನ್ 22 ಯುವಕನ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ತಂದೆ ತಾಯಿ ಮಗಳು ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷತ್ರ ಕೆಸಿರುವ ಕೆಂಪನ ಹುಂಡಿ ಗ್ರಾಮದಲ್ಲಿ ಈ ದಾವಣಗೆರೆ ನಡೆದಿದ್ದು ಇಡೀ ಕುಟುಂಬ ವರ್ಗದ ಅಕ್ರಂದನ ಮುಗಿಲುಮುಟ್ಟಿತು

ಸದ್ಯದಲ್ಲಿ ಮದುವೆಯಾಗಬೇಕಿದ್ದ ರಕ್ಷಿತಾ ಡೆತ್ ನೋಟ್ ಬರೆದಿಟ್ಟು ಎರಡು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ವಧು ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಇವರು ನಮ್ಮ ಸಾವಿಗೆ ಕಾರಣದ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆ ವಿಧಿಸಿ ನಮ್ಮ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಸಾಯೋದುಕು ಮುನ್ನ ಪತ್ರ ಬರೆದು ಸಾವಿನ ಪ್ರಭ ಸುದ್ದಿ ಕೇಳುತ್ತಿದ್ದಂತೆ ಗ್ರಾಮದಲ್ಲಿ ಸೂತಕದ ಛಾಯೆ ಮರೆಮಾಡಿ ಕುಟುಂಬ ವರ್ಗದ ಅಕ್ರಂದನ ಮುಗಿಲು ಮುಟ್ಟಿತು
ಕೆಲವರು ಮಾನ ಮರ್ಯಾದೆಗೆ ಅಂಜಿ ಇಂತಹ ತೀರ್ಮಾನಕ್ಕೆ ಬಂದು ಈ ದುರಂತಕ್ಕೆ ಕಾರಣವಾಗುತ್ತಾರೆ ಏನೇ ಆಗಲಿ ಎಲ್ಲವನ್ನು ಧೈರ್ಯದಿಂದ ಎದುರಿಸಬಹುದಿತ್ತು ಆದರೆ ದುಡಿಕಿ ಒಂದೇ ಕುಟುಂಬದ ಮೂವರು ಈ ತೀರ್ಮಾನ ಮಾಡಿಕೊಂಡಿರುವುದು ನಮಗೆ ತುಂಬಾ ನೋವು ದುಃಖ ತಂದಿದೆಎಂದು ಗ್ರಾಮಸ್ಥರು ತಮ್ಮ ನೋವನ್ನು ವ್ಯಕ್ತಪಡಿಸಿದರು
ಗ್ರಾಮದ ಶಿವಣ್ಣ(54), ನಾಗರತ್ನ(46), ರಕ್ಷಿತ(22) ಎಂಬುವವರೇ ಯುಕನ ಕಿರುಕುಳಕ್ಕೆ ದೇಶತ್ತು ಮರ್ಯಾದೆಗೆ ಅಂಜಿ ಮೃತ ದುರ್ದೈವಿಗಳಾಗಿದ್ದಾರೆ.
ಜೂ.24ರಂದು ವಿವಾಹದ ಸಂಭ್ರಮದಲ್ಲಿ ಇರಬೇಕಾಗಿದ್ದ ಮನೆಯಲ್ಲೀಗ ಸೂತಕ ಛಾಯೆ ಆವರಿಸಿದೆ. ಈ ಘಟನೆಗೆ ಅದೇ ಗ್ರಾಮದ ಉಲ್ಲಾಸ್ ಗೌಡ ಎಂಬುವವನ ಕಿರುಕುಳದಿಂದಲೇ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟದ್ದಾರೆ.
ಮನೆಯ ಮೂವರು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ , ಸ್ಥಳಕ್ಕೆ ವರುಣ ಠಾಣೆಯ ಪೊಲೀಸರು ಶವಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದರು. ಸದರಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ನೇತೃತ್ವದ ಪೊಲೀಸ್ ಇಲಾಖೆ ತಂಡ ಘಟನೆಯ ಮಾಹಿತಿ ಪಡೆದುಕೊಂಡರು.
: ಅದೇ ಗ್ರಾಮದ ಉಲ್ಲಾಸ್ ಗೌಡ ಎಂಬಾತ ರಕ್ಷಿತಾಳನ್ನು ಹಲವು ದಿನಗಳಿಂದ ಪ್ರೀತಿಸುತ್ತಿದ್ದ ಸದರಿ ವಿಚಾರವನ್ನು ರಕ್ಷಿತಾಳ ಕುಟುಂಬಸ್ಥರಿಗೂ ತಿಳಿಸಿ ಮದುವೆ ಮಾಡಿಕೊಡುವಂತೆ ಕೇಳಿದ್ದನು. ಆತನ ಮನವಿಯನ್ನು ತಿರಸ್ಕರಿಸಿದ್ದ ಶಿವಣ್ಣ ಕುಟುಂಬಸ್ಥರು ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ಸಹ ಮಾಡಿದ್ದರು.
ಮೂರು ದಿನಗಳ ಹಿಂದೆ ಈ ಆಸ್ತಿ ನಮ್ಮ ತಾತನ ಹೆಸರಿನಲ್ಲಿದೆ. ರಕ್ಷಿತಾಳನ್ನು ಮದುವೆ ಮಾಡಿಕೊಡಿ ಎಂದು ರದ್ಧಾಂತ ಮಾಡಿ ಹೊಸ ಗೃಹ ಪ್ರವೇಶವನ್ನು ಸಹ ನಿಲ್ಲಿಸಿದ್ದನು. ಇದಾದ ಬಳಿಕ ಗ್ರಾಮಸ್ಥರು ರಾಜಿ ಪಂಚಾಯಿತಿ ಮಾಡಿ ಕಳುಹಿಸಿದ್ದರು. ನಾಳೆ ಜೂ.23 ಹಾಗೂ 24ರಂದು ಬೆಳಗೊಳದ ಬಲಮುರಿ ಸಮುದಾಯ ಭವನದಲ್ಲಿ ಮದುವೆ ಸಹ ನಿಶ್ವಯಿಸಿದ್ದರು.
ಈ ವಿಚಾರ ತಿಳಿದ ಉಲ್ಲಾಸಗೌಡ ನಿನ್ನೆ ಶಿವಣ್ಣರ ಮನೆಗೆ ಬಂದು ತನಗೆ ರಕ್ಷಿತಾಳನ್ನು ಮದುವೆ ಮಾಡಿಕೊಡಿ ಇಲ್ಲದಿದ್ದರೆ ಆಕೆಯ ಪೋಟೊ, ಎಸ್ ಎಂಎಸ್ ಗಳನ್ನು ವರನಿಗೆ ಕಳುಹಿಸಿ ಮದುವೆ ನಿಲ್ಲಿಸುವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದರಿಂದ ಮಾರ್ಯಾದೆಗೆ ಹೆದರಿದ ಕುಟುಂಬ ಮನನೊಂದ ಶಿವಣ್ಣ, ನಾಗರತ್ನ ಹಾಗೂ ವಧು ರಕ್ಷಿತ ಬಾಳೆಹಣ್ಣಿಗೆ ಕ್ರಿಮಿನಾಶಕ ಬೆರೆಸಿಕೊಂಡು ಸೇವಿಸಿ ಮನೆಯ ಶೌಚಾಲಯದಲ್ಲಿ ಸಾಮೂಹಿಕವಾಗಿ ಸಾವಿಗೆ ಶರಣಾಗಿದ್ದಾರೆ.
ಈ ನಡುವೆ ಡೆತ್ ರಕ್ಷಿತಾ ಡೆತ್ ನೋಟ್‌ನಲ್ಲಿ ಯುವಕನ ಕಿರುಕುಳದ ಬಗ್ಗೆ ಬರೆದಿಟ್ಟು ಆತನಿಗೆ ಶಿಕ್ಷೆ ಕೊಡಿಸುವಂತೆಯೂ ಕೋರಿದ್ದಾಳೆ.
ಗ್ರಾಮಸ್ಥರ ಪ್ರತಿಭಟನೆ: ಉಲ್ಲಾಸ್ ಗೌಡನನ್ನು ಬಂಧಿಸುವವರೆಗೂ ಶವ ಎತ್ತಲು ಬಿಡುವುದಿಲ್ಲ ಎಂದು ಮೃತರ ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಮಾತ್ರವಲ್ಲದೆ, ಮೈಸೂರು ಮತ್ತು ಟಿ.ನರಸಿಪುರ ಮುಖ್ಯರಸ್ತೆ ತಡೆಯಲು ಮುಂದಾಗಿದ್ದರು. ಕೊನೆಗೆ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಜನರ ಮನವೊಲಿಸಿ ಶವಪರೀಕ್ಷೆಗೆ ಶವಗಳನ್ನು ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ.
ಡೆತ್ ನೋಟ್:
ನಾನು ರಕ್ಷಿತಾ ನನಗೆ ಉಲ್ಲಾಸ್ ಗೌಡ ಎಂಬುವನು ತುಂಬಾ ಮಾನಸಿಕವಾಗಿ ಚಿತ್ರಹಿಂಸೆ ಕೊಡುತ್ತಿದ್ದಾನೆ. ನಾನು ಮಾಡಿದ ಮೆಸೇಜ್ ಮತ್ತು ಪೋಟೊಗಳನ್ನು ಇಟ್ಟುಕೊಂಡು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ತೊಂದರೆ ಕೊಡುತ್ತಿದ್ದಾನೆ. ಈ ಹಿಂಸೆ ತಾಳಲಾರದೆ ನಾನು ಮತ್ತು ನನ್ನ ಅಪ್ಪ, ಅಮ್ಮ ಸಾವಿಗೆ ಶರಣಾಗುತ್ತಿದ್ದೇವೆ. ನನಗೆ ಮದುವೆ ಸೆಟ್ ಆಗಿದೆ. ಆ ಹುಡುಗನಿಗೂ ಸಹ ಪೋಟೊ, ಮೆಸೇಜ್ ಕಳುಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ತುಂಬಾ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾನೆ. ನಮ್ಮ ಸಾವಿಗೆ ಕಾರಣನಾದ ಉಲ್ಲಾಸಗೌಡನಿಗೆ ಶಿಕ್ಷೆಯಾಗಬೇಕು ಎಂದು ಕೇಳಿಕೊಳ್ಳುತ್ತೇನೆ. ದಯಾಮಾಡಿ ನಮ್ಮ ಮೂರು ಜನರ ಸಾವಿಗೆ ನ್ಯಾಯ ಕೊಡಿಸಿ. ನಮ್ಮ ಸಾವಿಗೆ ಕಾರಣ ಉಲ್ಲಾಸ್ ಗೌಡ.
ನಮ್ಮ ಸಾವು ನಮ್ಮ ಹೊಸ ಮನೇಲಿನ ನನ್ನ ಮನೆ ಗೃಹಪ್ರವೇಶ ನಿಲ್ಲಿಸಿದೀಯ ನೀನು ನನ್ನ ಒಡ ಹುಟ್ಟಿದ ತಮ್ಮ ಅಂದುಕೊಂಡು ನಿನಗೆ ನಾನು ಅನ್ನ ಹಾಕಿದೆ. ಆದರೆ, ನೀನು ನನ್ನ ಮನೆಗೆ ದ್ರೋಗ ಮಾಡಿದಿಯಾ. ನಮ್ಮ ಸಾವಿನ ನಂತರ ನೀನು ನೆಮ್ಮದಿ ಜೀವನ ನಡೆಸಲು ಸಾಧ್ಯವಿಲ್ಲ. ಈಗಿನ ಸ್ಥಿತಿಯಲ್ಲಿ ನೀನು ಎನೂ ಇಲ್ದೆ ಹೇಗಿದಿಯಾ ಅದುಕ್ಕಿನ ಹೆಚ್ಚಾಗಿ ಕಷ್ಟಗಳನ್ನು ಅನುಭವಿಸುತ್ತಿಯಾ ನೋಡ್ಕೋ ನೀನು ಜೀವಪೂರ್ತಿ ಜೈಲಿನಲ್ಲೇ ಇರುತ್ತಿಯಾ ನಮ್ಮ ಮೂರು ಜನರ ಸಾವಿಗೆ ಕಾರಣ ಉಲ್ಲಾಸ ಗೌಡ.











