ವಿಜಯ ದರ್ಪಣ ನ್ಯೂಸ್….
ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು ಅವರ) ಹುಟ್ಟು ಹಬ್ಬ ಆಚರಣೆಯ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿಚರಣೆ

ಶಿಡ್ಲಘಟ್ಟ : ಕಾಂಗ್ರೆಸ್ ಮುಖಂಡ ಹಾಗು ಸಮಾಜ ಸೇವಕ ಆಂಜಿನಪ್ಪ (ಪುಟ್ಟು ಅವರ) ಹುಟ್ಟು ಹಬ್ಬದ
ಅಂಗವಾಗಿ ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಹಾಗೂ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.
ತದನಂತರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಾಗೂ ಹೊರರೋಗಿಗಳಿಗೆ ಹಣ್ಣು-ಹಂಪಲು ಮತ್ತು ಬ್ರೆಡ್ ವಿತರಿಸಿ ಶುಭ ಹಾರೈಸಲಾಯಿತು.
ಅವರ ಹುಟ್ಟುಹಬ್ಬವನ್ನು ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಅತ್ಯಂತ ಅರ್ಥಪೂರ್ಣ ಹಾಗೂ ಮಾನವೀಯ ಕಾರ್ಯಗಳ ಮೂಲಕ ವಿನೂತನವಾಗಿ ಆಚರಿಸಿದರು.
ಪೂಸಗಾನದೊಡ್ಡಿ ಮಂಜುನಾಥ್ , ಮಾತನಾಡಿ, ಆಂಜಿನಪ್ಪ(ಪುಟ್ಟು) ಅವರು ಕಳೆದ 15 ವರ್ಷಗಳಿಂದ ಶಿಡ್ಲಘಟ್ಟ ಕ್ಷೇತ್ರದಲ್ಲಿ ಸತತವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದಾರೆ ರೈತ ಕುಟುಂಬದಿಂದ ಬಂದ ಅವರಿಗೆ ಗ್ರಾಮೀಣ ಭಾಗದ ಸಮಸ್ಯೆಗಳ
ಬಗ್ಗೆ ಸ್ಪಷ್ಟ ಅರಿವಿದೆ ,ಅವರಿಗೆ ಭಗವಂತ ಆಯು ರಾರೋಗ್ಯ ನೀಡಿ ಆಶೀರ್ವದಿಸಲೆಂದು ದೇವರಲ್ಲಿ ಪ್ರಾರ್ಥಿಸಿದರು.

ಗೌಡನಹಳ್ಳಿ ಮಂಜುನಾಥ್ ಮಾತನಾಡಿ , ಯಾವುದೇ ಅಧಿಕಾರ ಇಲ್ಲದಿದ್ದರೂ ಜಾತಿ-ಮತ ಭೇದವಿಲ್ಲದೆ ಜನರ ಸೇವೆಯೇ ಜನಾರ್ದನ ಸೇವೆ ಎಂದು ಭಾವಿಸಿ ದುಡಿಯುತ್ತಿರುವ ಆಂಜಿನಪ್ಪನವರು(ಪುಟ್ಟು) ಶಿಡ್ಲಘಟ್ಟ ವಿದಾನಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬರ ಮನೆ ಮಾತಾಗಿದ್ದಾರೆ ಇಂತಹ ನಾಯಕರು ಬೆಳೆದರೆ ಮಾತ್ರ ತಾಲೂಕು ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಕುಮಾರ್, ಬುರುಡಗುಂಟೆ ಶೇಖರ್ ರೆಡ್ಡಿ, ಸಾಧಿಕ್,ರಾಮಾಂಜಿ, ಮೌಲಾ,ಬೂದಾಳ ವರದರಾಜು,ಆನೂರು ಆನಂದ್, ಮಳಮಾಚನಹಳ್ಳಿ ಮುನಿರಾಜು,ಸಂತೋಷ್, ರಮೇಶ್, ದೊಡ್ಡದಾಸರಹಳ್ಳಿ ದೇವರಾಜ್, ನಾರಾಯಣಸ್ವಾಮಿ, ಬಳುವನಹಳ್ಳಿ ಮೂರ್ತಿ,ಚೌಡರೆಡ್ಡಿ,ವಿಶ್ವ, ವೆಂಕಟೇಶ್
,ದಾಮೋದರ್,ದರ್ಶನ್ ಮಂಜುನಾಥ್, ವೇಣು ಹಾಗು ಆಂಜಿನಪ್ಪ (ಪುಟ್ಟು) ಅಭಿಮಾನಿಗಳು ಹಾಜರಿದ್ದರು.










