--Ads--

ಕುಂಬಳಹಳ್ಳಿ ಗ್ರಾಮ ಪಂಚಾಯತಿಯಲ್ಲಿ ‘ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್’ ಜಾಬ್ ಕಾರ್ಡ್ ಮೇಳ

On: August 24, 2026 12:06 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕುಂಬಳಹಳ್ಳಿ ಗ್ರಾಮ ಪಂಚಾಯತಿಯಲ್ಲಿ ‘ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್’ ಜಾಬ್ ಕಾರ್ಡ್ ಮೇಳ

ತಾವರೆಕೆರೆ : ಹೊಸಕೋಟೆ ತಾಲೂಕಿನ ಕುಂಬಳಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶಿವಕುಮಾರ್ ಬಿ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ರವರ ಅಧ್ಯಕ್ಷತೆಯಲ್ಲಿ ಹಾಗು ಮುನಿಯಪ್ಪ ಪಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಘನ ಉಪಸ್ಥಿತಿಯಲ್ಲಿ
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ)’ ಯೋಜನೆಯಡಿ ವಿಶೇಷ ‘ಉದ್ಯೋಗ ಚೀಟಿ (ಜಾಬ್ ಕಾರ್ಡ್) ಮೇಳ’ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಅಭಿಯಾನದ ಮೊದಲ ಭಾಗವಾಗಿ ಪಂಚಾಯತಿ ಸಿಬ್ಬಂದಿ ಹಾಗೂ ಪ್ರತಿನಿಧಿಗಳು ಪ್ರತಿ ಮನೆ ಮನೆಗೂ ತೆರಳಿ, ಹೊಸದಾಗಿ ಉದ್ಯೋಗ ಚೀಟಿ ಪಡೆಯುವ ವಿಧಾನ ಹಾಗೂ ಈಗಾಗಲೇ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಕೆಲಸ ಪಡೆಯುವ ಕುರಿತು ಸಾರ್ವಜನಿಕರಿಗೆ ವಿವರವಾದ ಜಾಗೃತಿ ಮೂಡಿಸಲಾಯಿತು .
ನಂತರ ಉಪ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪಂಚಾಯ್ತಿ ಆವರಣದಲ್ಲಿ ಗ್ರಾಮಸ್ಥರ ಸಭೆ ನಡೆಸಿ, ಯೋಜನೆಯ ಮಹತ್ವ, ಲಭ್ಯವಿರುವ ಕೂಲಿ ದಿನಗಳು ಹಾಗೂ ಹಾಗು ಕೂಲಿ ಮೊತ್ತ ಮತ್ತು ಯೋಜನೆಯಡಿ ದೊರೆಯುವ ವಿವಿಧ ವೈಯಕ್ತಿಕ ಸೌಲಭ್ಯಗಳು ಮತ್ತು ಕಾಮಗಾರಿಗಳು ಹಾಗು ಅದರಿಂದ ಆರ್ಥಿಕ ಸ್ವಾವಲಂಬನೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರ್ಯ ನಿರ್ವಾಹಕ ಅಧಿಕಾರಿ ಮುನಿಯಪ್ಪ ದಿನಾಂಕ 15-08-2026 ರಿಂದ 15-09-2026 ರವರೆಗೆ ‘ಮನೆ ಮನೆ ಭೇಟಿ ಹಾಗೂ ಕೆಲಸದ ಬೇಡಿಕೆ ಸ್ವೀಕಾರ ಅಭಿಯಾನ’ ನಡೆಯಲಿದೆ. ಹೊಸಕೋಟೆ ತಾಲ್ಲೂಕಿನ ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು, ಯುವಕರು ಹಾಗೂ ಕೂಲಿಕಾರರು ಈ ಅಭಿಯಾನದ ಸದುಪಯೋಗ ಪಡೆದುಕೊಂಡು ತಮ್ಮ ಗ್ರಾಮದಲ್ಲೇ ಉದ್ಯೋಗ ಕಂಡುಕೊಳ್ಳಬೇಕು ಎಂದು ವಿನಂತಿಸಿದರು.
ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ವಿಶೇಷ ಚೇತನರಿಗೆ ಸ್ಥಳದಲ್ಲೇ ಮಾನ್ಯ ಉಪ ಕಾರ್ಯದರ್ಶಿಗಳು ಹೊಸ ಉದ್ಯೋಗ ಚೀಟಿ ಹಾಗು ವೈಯಕ್ತಿಕ ಕಾಮಗಾರಿಗಳ ಆದೇಶ ಪ್ರತಿಯನ್ನು ವಿತರಿಸಿದರು.
ಒಟ್ಟಾರೆ ಹೊಸದಾಗಿ 40 ಉದ್ಯೋಗ ಚೀಟಿ ಅರ್ಜಿಗಳನ್ನು ಸ್ವೀಕರಿಸಲಾಯಿತು. 20 ಕೃಷಿ ಹೊಂಡ ಬೇಡಿಕೆ ಅರ್ಜಿ ಸ್ವೀಕಾರ, 18 ಕೊಳವೆ ಭಾವಿ ಮರುಪೂರಣ ಭೇಡಿಕೆ ಅರ್ಜಿ ಸ್ವೀಕಾರ ಹಾಗು 5 ಕುರಿ ಹಾಗು ದನದ ಕೊಟ್ಟಿಗೆ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಿ ಗ್ರಾಮ ಪಂಚಾಯ್ತಿಗೆ ಸಲ್ಲಿಸಲಾಯಿತು.
ನಂತರ ಆದೇಶ ಪ್ರತಿ ವಿತರಣೆ: ಯೋಜನೆಯಡಿ ವಿವಿಧ ವೈಯಕ್ತಿಕ ಕಾಮಗಾರಿಗಳಿಗೆ (ತೋಟಗಾರಿಕೆ, ಕೊಟ್ಟಿಗೆ ನಿರ್ಮಾಣ, ಬೋರ್‌ವೆಲ್ ಮರುಪೂರಣ ಇತ್ಯಾದಿ) ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಅಧಿಕೃತ ಆದೇಶ ಪ್ರತಿಯನ್ನು ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ವಿತರಿಸಿದರು.
ಈ ಉದ್ಯೋಗ ಮೇಳ ಹಾಗೂ ಜಾಗೃತಿ ಸಭೆಯಲ್ಲಿ ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೇತನ್ ಕುಮಾರ್, ಕಾರ್ಯದರ್ಶಿಗಳು, ಸಹಾಯಕ ತಾಂತ್ರಿಕ ಅಭಿಯಂತರ ರಾಜೇಶ್ ಗಾಣಿಗ (TAE), ಪಂಚಾಯಿತಿ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

WhatsApp

Join Now

Telegram

Join Now

Instagram

Join Now