--Ads--

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 : ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಿದ ಜಿಲ್ಲಾಧಿಕಾರಿ 

On: August 24, 2026 12:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 : ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಿದ ಜಿಲ್ಲಾಧಿಕಾರಿ 

ಹಕ್ಕು,ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 23 ವರೆಗೆ ಅವಕಾಶ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  , ಆ.24 : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರ ಪಟ್ಟಿ ಪ್ರಕಟವಾಗಿದ್ದು ಜಿಲ್ಲೆಯಲ್ಲಿ 796138 ಮತದಾರರು ಕರಡು ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ.ಎನ್ . ಅನುರಾಧ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳು, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಈ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ತಿಳಿಸಿದರು.

ಜಿಲ್ಲೆಯಲ್ಲಿ ಜೂನ್ 16, 2026 ವೇಳೆಯಲ್ಲಿ ಒಟ್ಟು 9,12,913 ಮತದಾರರ ಪೈಕಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಕ್ರಿಯೆಯ ಕರಡು ಮತದಾರರ ಪಟ್ಟಿ ಪ್ರಕಟಣೆ ಬಳಿಕ 3,91,515 ಪುರುಷರು ಹಾಗೂ 4,04,564 ಇತರೆ 59 ಸೇರಿ ಒಟ್ಟು 7,96,138 ಮತದಾರರನ್ನು ಪಟ್ಟಿಯಲ್ಲಿ ಉಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

116775 ಮತದಾರರ ಸಂಪರ್ಕ ಇಲ್ಲ
ಗೈರು, ಸ್ಥಳಾಂತರ, ಮರಣ ಹಾಗೂ ಎರಡು ಕಡೆ ನೋಂದಣಿಗೆ ಸಂಬಂಧಿಸಿದಂತೆ ಒಟ್ಟು 1,16,775 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 65,009 ಶಾಶ್ವತ ಸ್ಥಳಾಂತರ ಹಾಗೂ 25,161 ಮೃತರು, 12,212 ಎರಡುಕಡೆ ನೊಂದಣಿ , 13,607 ಗೈರು ಹಾಗೂ ಇತರೆ 786 ಸೇರಿವೆ.

56369 ಮತದಾರರಿಗೆ ನೋಟಿಸ್ ನೀಡಲು ಸಿದ್ಧತೆ
ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದೇ ಉಳಿದಿರುವ 26299 ಮತದಾರರು, ಪಟ್ಟಿಯಲ್ಲಿ ಮತದಾರರ ಹೆಸರು, ವಿಳಾಸ ಇನ್ನಿತರೆ ತಪ್ಪುಗಳನ್ನು ಇರುವ 30070 ಮತದಾರರು ಸೇರಿ ಒಟ್ಟು 56369 ಮತದಾರರಿಗೆ ನೋಟೀಸ್ ನೀಡಲಾಗುವುದು ಎಂದರು.

ಸೆಪ್ಟೆಂಬರ್ 23 ಆಕ್ಷೇಪಣೆಗೆ ಕೊನೆ ದಿನ

ಮತದಾರರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಹೊಸ ಮತದಾರರ ನೋಂದಣಿ
ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ನಮೂನೆ-6ರ ಮೂಲಕ ಮತದಾರರ ನೋಂದಣಾಧಿಕಾರಿಗಳು, ಬಿಎಲ್ಒ ಅಥವಾ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. 2026ರ ಅಕ್ಟೋಬರ್ 1ಕ್ಕೆ 18 ವರ್ಷ ತುಂಬುವ ಯುವ ಮತದಾರರೂ ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮತಗಟ್ಟೆಗಳ ಸಂಖ್ಯೆ ಏರಿಕೆ
ಮತಗಟ್ಟೆಗಳ ದೃಢೀಕರಣ ಕಾರ್ಯದ ನಂತರ ಜಿಲ್ಲೆಯಲ್ಲಿ 13 ಹೊಸ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 1154ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ವಿಧಾನ ಸಭಾ ಮತಕ್ಷೇತ್ರಗಳಲ್ಲಿ 12 ಮತಗಟ್ಟೆಯು 1200 ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಪ್ರಯುಕ್ತ ಹೊಸದಾಗಿ 12 ಮತಗಟ್ಟಗಳನ್ನು ಮತ್ತು 2 ಕಿ.ಮೀ ಮೀರಿದ ಒಂದು ಮತಗಟ್ಟೆ ಸ್ಥಳ ಬದಲಾವಣೆ ಒಟ್ಟು 13 ಮತಗಟ್ಟೆಗಳನ್ನು ಹೊಸದಾಗಿ ಮತಗಟ್ಟೆ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತಾವನೆಗೆ ಭಾರತ ಚುನಾವಣಾ ಆಯೋಗವು ಅನುಮೋದನೆಯನ್ನು ನೀಡಿದೆ ಎಂದರು.

ತಾಲ್ಲೂಕು ವಿವರ
178- ಹೊಸಕೋಟೆ ಕ್ಷೇತ್ರದಲ್ಲಿ 298 ಮತಗಟ್ಟೆಗಳಿದ್ದು, 1,07,380 ಪುರುಷ, 1,10,556 ಮಹಿಳೆ ಮತ್ತು 4 ಇತರೆ ಸೇರಿದಂತೆ ಒಟ್ಟು 2,17,940 ಮತದಾರರಿದ್ದಾರೆ.

179- ದೇವನಹಳ್ಳಿ ಕ್ಷೇತ್ರದಲ್ಲಿ 296 ಮತಗಟ್ಟೆಗಳಿದ್ದು, 95,669 ಪುರುಷ, 98,221 ಮಹಿಳೆ ಮತ್ತು 9 ಇತರೆ ಸೇರಿದಂತೆ ಒಟ್ಟು 1,93,899 ಮತದಾರರಿದ್ದಾರೆ.

180- ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 279 ಮತಗಟ್ಟೆಗಳಿದ್ದು, 94,566 ಪುರುಷ, 97,661 ಮಹಿಳೆ ಮತ್ತು 1 ಇತರೆ ಸೇರಿದಂತೆ ಒಟ್ಟು 1,92,228 ಮತದಾರರಿದ್ದಾರೆ.

181- ನೆಲಮಂಗಲ ಕ್ಷೇತ್ರದಲ್ಲಿ 281 ಮತಗಟ್ಟೆಗಳಿದ್ದು, 93,900 ಪುರುಷ, 98126 ಮಹಿಳೆ ಮತ್ತು 45 ಇತರೆ ಸೇರಿದಂತೆ ಒಟ್ಟು 1,92,071 ಮತದಾರರಿದ್ದಾರೆ.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಯಲ್ಲಿ 796138 ಗಣತಿ ನಮೂನೆ ಡಿಜಟಲೀಕರಣ ಗೊಳಿಸಿ ಶೇಕಡಾ 87.21 ಪ್ರಗತಿ ಸಾಧಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ 25703 ಯುವ ಮತದಾರರು, 113 ಸೇವಾ ಮತದಾರರು, 12,023 ವಿಕಲಚೇತನರು, 85 ವರ್ಷ ಮೇಲ್ಪಟ್ಟ 6023 ಹಿರಿಯ ನಾಗರಿಕರು ಇದ್ದಾರೆ.

ಕರಡು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು, ತಿದ್ದುಪಡಿ ಸೇರಿದಂತೆ ಹೆಸರು ಸೇರ್ಪಡೆಗೆ ಸೆಪ್ಟೆಂಬರ್ 22 ವರೆಗೆ ಅವಕಾಶ ನೀಡಿದ್ದು ಸೂಕ್ತ ದಾಖಲೆಗಳನ್ನು ಫಾರ್ಮ್ 6 ನಮೂನೆ ಮೂಲಕ ಎಇಆರ್ ಒ, ಬಿಎಲ್ಒ ಗಳಿಗೆ ನೀಡಬೇಕು, ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ನಾಲ್ಕು ತಾಲೂಕು ಮತದಾರರ ನೋಂದಣಾಧಿಕಾರಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now