ವಿಜಯ ದರ್ಪಣ ನ್ಯೂಸ್….
ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಸರ್ವಸದಸ್ಯರ ವಾರ್ಷಿಕ ಸಾಮಾನ್ಯಸಭೆ

ಯಲಹಂಕ : ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ (ರಿ) ಸಂಸ್ಥೆಯ ವತಿಯಿಂದ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ಸಮ್ಮುಖದಲ್ಲಿನಡೆದ 8ನೇ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆ ನಡೆಯಿತು .
ಸಭೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ತಲಾ ರೂ.1,000/- ಗಳಂತೆ ಹಾಗೂ ಪದವೀಧರ ವಿದ್ಯಾರ್ಥಿಗಳಿಗೆ ತಲಾ ರೂ. 1,500/- ಗಳಂತೆ ಪ್ರೋತ್ಸಾಹಧನ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಮರಣ ಹೊಂದಿದ ಷೇರುದಾರರ ನಾಮಿನಿದಾರರಿಗೆ ತಲಾ ರೂ. 5,000/- ಗಳ ಮರಣ ಸಹಾಯಧನವನ್ನು ನೀಡಲಾಯಿತು.
ಸಂಸ್ಥೆಯಲ್ಲಿ ಸಕಾಲದಲ್ಲಿ ಸಾಲವನ್ನು ಕೊಡಿಸಿ, ನಿಯಮಿತವಾಗಿ ಸಾಲ ವಸೂಲಾತಿ ಮಾಡಿದ ಜವಾಬ್ದಾರಿಯುತ ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗೆ ಗೌರವಪೂರ್ವಕವಾಗಿ ಸತ್ಕರಿಸಲಾಯಿತು.
ಸಂಸ್ಥೆಯ ಎಲ್ಲಾ ಗೌರವಾನ್ವಿತ ಷೇರುದಾರರಿಗೆ ಶೇ. 8% ರಷ್ಟು ಷೇರು ಡಿವಿಡೆಂಡ್ ಹಣವನ್ನು ವಿತರಣೆ ಮಾಡಲಾಯಿತು.
ಸೊಸೈಟಿಯ ಪ್ರಗತಿಗೆ ಸಹಕರಿಸಿ, ಠೇವಣಿ ಇರಿಸಿದ ಗೌರವಾನ್ವಿತ ಠೇವಣಿದಾರರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಸಿಕೊಟ್ಟಂತಹ ಷೇರುದಾರರಿಗೆ ಹೃತ್ಪರ್ವಕ ಧನ್ಯವಾದಗಳು ಮತ್ತು ವಂದನೆಗಳು.











