ವಿಜಯ ದರ್ಪಣ ನ್ಯೂಸ್….
ಶಿವನಾಪುರ ಗ್ರಾಮದಲ್ಲಿ ವಿಜೃಂಭಣೆಯ ದ್ರೌಪತಾಂಭ ದೇವಿ ಜಯಂತೋತ್ಸವ

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಶಿವನಾಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕೃಷ್ಣ ಅರ್ಜುನ ದ್ರೌಪತಮ್ಮ ದೇವಿ ಧರ್ಮರಾಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ. ಶ್ರೀ ದ್ರೌಪತಮ್ಮ ದೇವಿ ಜಯಂತೋತ್ಸವದ ಪ್ರಯುಕ್ತ ಶಿವನಾಪುರ ಗ್ರಾಮಸ್ಥರು ವನ್ನಿಕುಲ ಕುಲಬಾಂಧವರಿಂದ ಶ್ರೀ ಕೃಷ್ಣ ದ್ರೌಪತಮ್ಮ ದೇವಿ ಅರ್ಜುನ ದೇವರ ಮೂರ್ತಿಗಳನ್ನು ಪಲ್ಲಕ್ಕಿಯೊಂದಿಗೆ ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಅದ್ದೂರಿ ಮೆರವಣಿಗೆ ನಡೆಯಿತು.
ವಿಶೇಷವಾಗಿ ಶಿವನಾಪುರ ಗ್ರಾಮದಲ್ಲಿರುವ ಶ್ರೀ ಆದಿಶಕ್ತಿ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಆದಿಶಕ್ತಿ ಶ್ರೀ ದ್ರೌಪತಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಆದಿಶಕ್ತಿ ಸಂಸ್ಥಾನ ಮಠದ ಪೀಠಾಧಿಪತಿಗಳು ಪ್ರಣವಾನಂದಪುರಿ ಮಹಾಸ್ವಾಮಿಗಳು ಶ್ರೀ ಕೃಷ್ಣ ದ್ರೌಪತಮ್ಮ ದೇವಿ ಅರ್ಜುನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅನ್ನ ಸಂತರ್ಪಣೆ. ಪೂಜಾ ಕಾರ್ಯಕ್ರಮವು ಮಠದ ವತಿಯಿಂದ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಶಿವನಾಪುರ ಗ್ರಾಮಸ್ಥರು ಗೌಡರು ಯಜಮಾನರು ಗಣಾಚಾರಿಗಳು ಕುಲಬಾಂಧವರು ಯುವ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಗ್ರಾಮಸ್ಥರು ಮಾತನಾಡಿ ಶ್ರೀ ದ್ರೌಪತಮ್ಮ ದೇವಿ ಆಶೀರ್ವಾದದಿಂದ ಒಳ್ಳೆಯ ಮಳೆ ಬೆಳೆಯಾಗಿ ರೈತರು ಸಮೃದ್ಧಿಯಾಗಿರಲಿ ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.









