--Ads--

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಜಮೀನು: ಶಾಸಕ ಕೊತ್ತೂರು ಮಂಜುನಾಥ್

On: September 4, 2026 4:25 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸರ್ವ ಸದಸ್ಯರ ವಾರ್ಷಿಕ ಮಹಾಸಭೆ : ನೂತನ ನಿರ್ದೇಶಕರ ಪದಗ್ರಹಣ

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಜಮೀನು: ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಕೋಲಾರ ಕಾರ್ಯನಿರತ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯವಾದ ನಿವೇಶನಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಪದಗ್ರಹಣ ಹಾಗೂ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಸತ್ಯವನ್ನೇ ಬರೆಯುವ ಮೂಲಕ ಪ್ರಜಾಪ್ರಭುತ್ವದ 4ನೇ ಅಂಗವನ್ನು ಎತ್ತಿಹಿಡಿಯಬೇಕಾಗಿದ್ದು ಈ ದೆಸೆಯಲ್ಲಿ ಪತ್ರಕರ್ತರ ನಿವೇಶನಗಳಿಗೆ ಬೇಕಾದ ಜಮೀನನ್ನು ಒದಗಿಸುವುದರೊಂದಿಗೆ ಪತ್ರಕರ್ತರಿಗೆ ನ್ಯಾಯ ಮಾಡುವುದಾಗಿ ತಿಳಿಸಿದರು.

ಪತ್ರಕರ್ತರ ಭವನದ ಹಾಲ್ ಅನ್ನು ನವೀಕರಣ ಮಾಡಿಸಿ ಎಸಿ ಅಳವಡಿಸಲು ನೆರವು ನೀಡುವುದಾಗಿ ಈ ಸಂದರ್ಭದಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.

ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ನಿವೇಶನ ಅಗತ್ಯವಿರುವ ಪತ್ರಕರ್ತರ ಪಟ್ಟಿ ಮಾಡಿದರೆ ಲಭ್ಯತೆಯ ಅನುಸಾರ ಸೌಲಭ್ಯ ಕಲ್ಪಿಸಲಾಗುತ್ತದೆ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ತಾಲೂಕುವಾರು ಸೈಟ್‌ಗಳನ್ನು ಕೊಡಲು ರೂಪುರೇಷೆಗಳನ್ನು ಸಿದ್ಧಪಡಿಸಬಹುದಾಗಿದೆ ಎಂದು ನುಡಿದರು.

ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಜ್ಞಾನಾರ್ಜನೆಗೆ ಪತ್ರಿಕೆ ಪೂರಕವಾಗಿದ್ದು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಪತ್ರಕರ್ತರಿಗೆ ನಿವೇಶನಗಳನ್ನು ಒದಗಿಸಲು ತಾವು ವೈಯಕ್ತಿಕವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಪತ್ರಿಕಾ ರಂಗ ಆಡಳಿತದ ಒಂದು ಭಾಗವೇ ಆಗಿದ್ದು ಅವರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದನೆ ನೀಡಲಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ತೀವ್ರ ಮತ್ತು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲಾಗುತ್ತಿದ್ದು ಸಮಸ್ಯೆಗಳನ್ನು ಗಮನಕ್ಕೆ ತಂದರೆ ತಕ್ಷಣ ಪರಿಹರಿಸಲಾಗುತ್ತದೆ. ಅಧಿಕಾರದ ಅಹಂ ತೊರೆದು ಸಾರ್ವಜನಿಕ ಸೇವಕನಾಗಿ ದುಡಿಯಲು ಮುಂದಾದರೆ ಜನಪ್ರತಿನಿಧಿಗಳು ಮತ್ತು ಜನರ ಸಹಕಾರ ಸಿಕ್ಕೇ ಸಿಕ್ಕುತ್ತದೆ ಎಂದು ನುಡಿದರು.

ಸಂಘದ ಅಧ್ಯಕ್ಷ ವಿ.ಮುನಿರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ 280 ಪತ್ರಕರ್ತರಲ್ಲಿ ಶೇ.50 ಮಂದಿ ಬಾಡಿಗೆ ಮನೆಯಲ್ಲಿದ್ದು ಅವರೆಲ್ಲರಿಗೆ ಸೂರು ಕಲ್ಪಿಸುವ ದೆಸೆಯಿಂದಾಗಿ ಸಂಘಕ್ಕೆ ಚಾಲನೆ ನೀಡಲಾಗಿದೆ. ಈ ಹಿಂದೆ ಮೈಸೂರು ಡಿಸಿಯಾಗಿದ್ದಾಗ ಪತ್ರಕರ್ತರಿಗೆ ನಿವೇಶನಗಳನ್ನು ಒದಗಿಸಿರುವ ಕೋಲಾರ ಜಿಲ್ಲಾಧಿಕಾರಿಗಳು ತವರು ನೆಲದ ಪತ್ರಕರ್ತರಿಗೂ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕೆAದು ಆಗ್ರಹಿಸಿದರು.

ಕೊತ್ತೂರು ಮಂಜುನಾಥ್ ಶಾಸಕರಾಗುವ ಮೊದಲೇ ಕೋಲಾರ ಪತ್ರಕರ್ತರ ಸಂಘಕ್ಕೆ 26.50 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಹಾಲ್ ಒದಗಿಸಿಕೊಡುವ ಮೂಲಕ ಪತ್ರಕರ್ತರ ಪರವಾಗಿ ನಿಂತಿದ್ದಾರೆ. ಜೋಡೆತ್ತುಗಳಂತೆ ಅಭಿವೃದ್ಧಿ ಮಾಡುತ್ತಿರುವ ಎಂಎಲ್‌ಸಿ ಅನಿಲ್ ಕುಮಾರ್ ಮತ್ತು ಶಾಸಕ ಕೊತ್ತೂರು ಮಂಜುನಾಥ್ ಅವರು ಪತ್ರಕರ್ತರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಮುನಿರಾಜು ಅವರು ಮನವಿ ಮಾಡಿದರು.

ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಸಂಘದ ಅಧ್ಯಕ್ಷ ಮುನಿರಾಜು ಅವರು ಜಿಲ್ಲೆಯ ಎಲ್ಲ ಪತ್ರಕರ್ತರಿಗೆ ಸೈಟ್ ಕೊಡಿಸಲು ಹತ್ತು ವರ್ಷದಿಂದಲೂ ಶ್ರಮಿಸುತ್ತಿದ್ದು ಕನಸನ್ನು ನನಸು ಮಾಡಲು ಇದೀಗ ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘನೀಯ. ಅಂತೆಯೇ ಅಧಿಕಾರವನ್ನು ಜವಾಬ್ದಾರಿ ಎಂದು ತಿಳಿದುಕೊಂಡು ಬದ್ಧತೆ,ಭಯ,ಕಾಳಜಿಯಿಂದ ಕೆಲಸ ಮಾಡಿ ಪತ್ರಕರ್ತರಿಗೆ ನಿವೇಶನ ಕೊಡಿಸಲು ಮುಂದಾಗಬೇಕೆAದು ಹಾರೈಸಿದರಲ್ಲದೆ ಅಭಿವೃದ್ಧಿ ದೃಷ್ಠಿಯಿಂದ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಭಿನ್ನಾಭಿಪ್ರಾಯ ತೊರೆದು ಸಂಘಟಿತರಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದ ರಾಜ್ಯ ಖಜಾಂಚಿ ವಾಸುದೇವಹೊಳ್ಳ ಮಾತನಾಡಿ, ರಾಜ್ಯಾಧ್ಯಕ್ಷರು ಅನಾರೋಗ್ಯದಿಂದಾಗಿ ಭಾಗವಹಿಸಲು ಆಗಲಿಲ್ಲ ಎಂದು ಹೇಳಿ ಗೃಹ ನಿರ್ಮಾಣ ಸಹಕಾರ ಸಂಘದ ಸೈಟ್ ಕನಸು ಈಡೇರಲೆಂದು ಶುಭ ಕೋರಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಇದೇ ಅವಧಿಯಲ್ಲಿ ಪತ್ರಕರ್ತರ ಸೈಟ್ ಕನಸು ನನಸಾಗಿಸಲು ಸಂಘ ಶ್ರಮಿಸಬೇಕೆಂದು ತಿಳಿಸಿದರು.

ಸಂಘದ ನಿರ್ದೇಶಕರಾದ ಎನ್.ಮುನಿವೆಂಕಟೇಗೌಡ, ಜಿ.ಮAಜುನಾಥಗೌಡ,ಕೆ.ಗೋಪಿಕಾಮಲ್ಲೇಶ್,ದೊರೈ ಅರಸು,ವೆಂಕಟೇಶಪ್ಪ,ಎಸ್.ನಾರಾಯಣಸ್ವಾಮಿ,ಡಿ.ಎನ್.ಲಕ್ಷಿö್ಮಪತಿ, ಎಚ್.ಎಲ್.ನಾಗರಾಜ್, ಸಿಇಒ ಕೆ.ಎಸ್.ಮಂಜುನಾಥರಾವ್ ಇದ್ದರು.

ಗೀತಾ ಶ್ರೀನಿವಾಸ್ ಪ್ರಾರ್ಥಿಸಿದರು. ಜೆ.ಜಿ.ಶ್ರೀನಿವಾಸಮೂರ್ತಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ ವಂದಿಸಿದರು.

WhatsApp

Join Now

Telegram

Join Now

Instagram

Join Now