--Ads--

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಡಾ ರಾಧಾಕೃಷ್ಣ ಜಯಂತಿ ಆಚರಣೆ 

On: September 5, 2026 3:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಡಾ ರಾಧಾಕೃಷ್ಣ ಜಯಂತಿ ಆಚರಣೆ 

ವಿಜಯಪುರ ದೇವನಹಳ್ಳಿ ತಾಲ್ಲೂಕು : ಪಟ್ಟಣದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಡಾ ರಾಧಾಕೃಷ್ಣ ಜಯಂತಿ ಅಂಗವಾಗಿ ಶಿಕ್ಷಕ ಎ ಬಿ ಪರಮೇಶ್ವರಯ್ಯ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಎ ಬಿ ಪರಮೇಶ್ವರಯ್ಯನವರು ನನಗೆ ಜಿಲ್ಲಾ ಪ್ರಶಸ್ತಿ ಯೊಂದಿಗೆ ಸಂಘ ಸಂಸ್ಥೆಗಳಿಂದ ಆನೇಕ ಪ್ರಶಸ್ತಿ ಬಂದಿದ್ದರು ಸಹ ನನಗೆ ಸಂತೋಷ ಸಿಕ್ಕಿರುವುದು ಮಕ್ಕಳಿಂದ ಬರುವ ನಿಜವಾದ ಪ್ರಶಸ್ತಿಯಿಂದ ಎಂದು ಬಣ್ಣಿಸುತ್ತಾ ನಮ್ಮವಿದ್ಯಾರ್ಥಿಗಳು ಅನೇಕ ಉನ್ನತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಅನೇಕ ಶಾಲಾ ಅಭಿವೃದ್ಧಿ ಕೆಲಸಗಳನ್ನು ಇಷ್ಟಪಟ್ಟು ಮಾಡುತ್ತಿದ್ದೇನೆ. ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷ ಮಾರ್ಕೆಟ್ ವೆಂಕಟೇಶ್ ವಹಿಸಿದರು.

ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಎಲ್ಐಸಿ ಆನಂದ್, ರಾಷ್ಟ್ರೀಯ ಕೋ ಆರ್ಡಿನೇಟರ್ ವಿ ವೆಂಕಟೇಶ್, ಉಪಾಧ್ಯಕ್ಷ ಜೆ.ಆರ್ ಮುನಿವೀರಣ್ಣ, ಬೇಕರಿ ಮಂಜುನಾಥ್, ಮಾಜಿ ಕಾರ್ಯದರ್ಶಿಗಳಾದ ಚಿದಾನಂದ, ಲೀಜನ್ ವರದಿಗಾರ ವಿ. ವಿಶ್ವನಾಥ್ ಮಾಮ, ಶಿಕ್ಷಕರಾದ ರಾಜಶೇಖರಾಚಾರಿ, ಶ್ರೀಮತಿ ಪೂರ್ಣಿಮಾ ಪರಮೇಶ್,ಕುಮಾರಿ ಪರಿಣಿತ ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now