ಎಚ್.ಡಿ.ಎಫ್.ಸಿ ಬ್ಯಾಂಕ್, ಮಾರಿಯಟ್ ಭಾರತದ ಮೊದಲ ಕೋ-ಬ್ರಾಂಡೆಡ್ ಹೋಟೆಲ್ ಕ್ರೆಡಿಟ್ ಕಾರ್ಡ್ ಬಿಡುಗಡೆ.

ವಿಜಯ ದರ್ಪಣ ನ್ಯೂಸ್

ಆಗಸ್ಟ್ 31

ಎಚ್.ಡಿ.ಎಫ್.ಸಿ ಬ್ಯಾಂಕ್, ಮಾರಿಯಟ್ ಭಾರತದ ಮೊದಲ ಕೋ-ಬ್ರಾಂಡೆಡ್ ಹೋಟೆಲ್ ಕ್ರೆಡಿಟ್ ಕಾರ್ಡ್ ಬಿಡುಗಡೆಗೆ ಬೊನ್ವೊಯ್ ಜೊತೆಯಲ್ಲಿ ಸಹಯೋಗ

~ ಮಾರಿಯಟ್ ಬೊನ್ವೊಯ್ ಎಚ್.ಡಿ.ಎಫ್.ಸಿ. ಕ್ರೆಡಿಟ್ ಕಾರ್ಡ್ ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ

ಆಗಸ್ಟ್ 31, 2023: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್, ಮಾರಿಯಟ್ ಇಂಟರ್ನ್ಯಾಷನಲ್ ನ ಪ್ರಶಸ್ತಿ ಪುರಸ್ಕೃತ ಟ್ರಾವೆಲ್ ಪ್ರೋಗ್ರಾಮ್ ಮಾರಿಯಟ್ ಬೊನ್ವೊಯ್ ಜೊತೆಯಲ್ಲಿ ಸಹಯೋಗದ ಮೂಲಕ ಭಾರತದ ಮೊದಲ ಕೋ-ಬ್ರಾಂಡೆಡ್ ಹೋಟೆಲ್ ಕ್ರೆಡಿಟ್ ಕಾರ್ಡ್ `ಮಾರಿಯಟ್ ಬೊನ್ವೊಯ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದೆ. ಈ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಡಿಸ್ಕವರಿ ಗ್ಲೋಬಲ್ ನೆಟ್ವರ್ಕ್ ಭಾಗವಾಗಿ ಡೈನರ್ಸ್ ಕ್ಲಬ್ ಕಾರ್ಯ ನಿರ್ವಹಿಸಲಿದೆ ಮತ್ತು ಭಾರತದಲ್ಲಿ ಅತ್ಯಂತ ಪುರಸ್ಕಾರಯುತ ಟ್ರಾವೆಲ್ ಕಾರ್ಡ್ ಗಳಲ್ಲಿ ಒಂದಾಗಿದೆ. ಮಾರಿಯಟ್ ಬೊನ್ವೊಯ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಎರಡು ಬ್ರಾಂಡ್ ಗಳ ಸಾಮರ್ಥ್ಯವನ್ನು ಅನುಷ್ಠಾನಗೊಳಿಸುತ್ತಿದ್ದು ಗ್ರಾಹಕರಿಗೆ ಅಸಾಧಾರಣವಾದ ಟ್ರಾವೆಲ್ ಅನುಕೂಲಗಳನ್ನು ಒದಗಿಸುತ್ತಿದ್ದು ಅದರಲ್ಲಿ ಸಿಲ್ವರ್ ಎಲೈಟ್ ಸ್ಟೇಟಸ್ ಅನ್ನು ಮಾರಿಯಟ್ ಬೊನ್ವೊಯ್ ನೊಂದಿಗೆ ಪಡೆಯಲಿದ್ದು ಅದು ಆದ್ಯತೆಯ ಲೇಟ್ ಚೆಕೌಟ್, ವಿಶೇಷ ಸದಸ್ಯರ ದರಗಳು ಮಾರಿಯಟ್ ಬೊನ್ವೊಯ್ ಬೋನಸ್ ಪಾಯಿಂಟ್ ಗಳು ಮತ್ತಿತರೆ ಪಡೆಯುತ್ತಾರೆ.

“ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಯಶಸ್ವಿ ಬಿಡುಗಡೆಗಳ ನಂತರ ಭಾರತದಲ್ಲಿ ನಮ್ಮ ಮೊದಲ ಮಾರಿಯಟ್ ಬೊನ್ವೊಯ್ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲು ಬಹಳ ಉತ್ಸುಕರಾಗಿದ್ದೇವೆ” ಎಂದು ಮಾರಿಯಟ್ ಇಂಟರ್ನ್ಯಾಷನಲ್ ನ ದಕ್ಷಿಣ ಏಷ್ಯಾದ ಏರಿಯಾ ವೈಸ್-ಪ್ರೆಸಿಡೆಂಟ್ ಶ್ರೀಮತಿ ರಂಜು ಅಲೆಕ್ಸ್ ಹೇಳಿದರು. “ಹೊಸ ತಲೆಮಾರಿನ ಭಾರತದ ಅನ್ವೇಷಕರಿಗೆ ಪ್ರಯಾಣದ ವಿಶ್ವವನ್ನು ತೆರೆಯುವ ಸಾಮರ್ಥ್ಯದೊಂದಿಗೆ ಎರಡು ಶಕ್ತಿಯುತ ಬ್ರಾಂಡ್ ಗಳ ಈ ಸಂಯೋಜನೆಯು ಸದಸ್ಯರಿಗೆ ಪ್ರತಿನಿತ್ಯದ ಖರೀದಿಗಳ ಮೂಲಕ ಗಳಿಸಲು ಹೆಚ್ಚಿನ ಅವಕಾಶಗಳನ್ನು ಒದಗಿಸಲು ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಹೆಚ್ಚು ಮುಖ್ಯವಾಗಿ ಈ ಸಹಯೋಗವು ನಮ್ಮ ಆತಿಥ್ಯದ ಸಮಗ್ರ ದೃಷ್ಟಿಕೋನವನ್ನು ವಿಸ್ತರಿಸುತ್ತದೆ ಮತ್ತು ನಮಗೆ ವೈಯಕ್ತಿಕಗೊಳಿಸಿದ ಅನುಕೂಲಗಳನ್ನು ಸೇರಿಸಲು ನೆರವಾಗುತ್ತದೆ, ಅದು ಹೋಟೆಲ್ ವಾಸದ ಆಚೆಗೂ ವಿಸ್ತರಿಸುತ್ತದೆ” ಎಂದರು.

ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಪೇಮೆಂಟ್ ಬಿಸಿನೆಸ್, ಕನ್ಸೂಮರ್ ಫೈನಾನ್ಸ್, ಟೆಕ್ನಾಲಜಿ ಅಂಡ್ ಡಿಜಿಟಲ್ ಬ್ಯಾಂಕಿಂಗ್ ನ ಕಂಟ್ರಿ ಹೆಡ್ ಶ್ರೀ ಪರಾಗ್ ರಾವ್, “ಭಾರತದ ಮೊದಲ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಅನ್ನು ಮಾರಿಯಟ್ ಬೊನ್ವೊಯ್ ಸಹಯೋಗದಲ್ಲಿ ಬಿಡುಗಡೆ ಮಾಡಲು ಬಹಳ ಸಂತೋಷ ಹೊಂದಿದ್ದೇವೆ. ಈ ಸಹಯೋಗವು ನಮ್ಮ ಗ್ರಾಹಕರ ವಿಸ್ತರಿಸುತ್ತಿರುವ ಅಗತ್ಯಗಳಿಗೆ ಪೂರೈಸುವ ಆವಿಷ್ಕಾರಕ ಹಣಕಾಸು ಫಲಿತಾಂಶಗಳನ್ನು ಒದಗಿಸುವಲ್ಲಿ ನಮ್ಮ ಬದ್ಧತೆಯನ್ನು ಪ್ರತಿಫಲಿಸುತ್ತದೆ. ಈ ಕಾರ್ಡ್ ನೊಂದಿಗೆ ನಾವು ನಮ್ಮ ಮೌಲ್ಯಯುತ ಕಾರ್ಡ್ ದಾರರ ಪ್ರಯಾಣದ ಅನುಭವಗಳನ್ನು ವಿಶೇಷ ಅನುಕೂಲಗಳು, ರಿವಾರ್ಡ್ ಗಳು ಮತ್ತು ಮಾರಿಯಟ್ ಇಂಟರ್ನ್ಯಾಷನಲ್ ನ ಪ್ರಶಸ್ತಿ ಪುರಸ್ಕೃತ ಟ್ರಾವೆಲ್ ಪ್ರೋಗ್ರಾಮ್ ಗೆ ತಡೆರಹಿತ ಪ್ರವೇಶ ನೀಡುತ್ತದೆ. ದೇಶದ ಮುಂಚೂಣಿಯ ಕಾರ್ಡ್ ನೀಡುವವರಾಗಿ ನಾವು ಈ ಹೊಸ ಕೊಡುಗೆ ಕುರಿತು ಉತ್ಸುಕರಾಗಿದ್ದೇವೆ ಮತ್ತು ಈ ಸಹಯೋಗವು ಗ್ರಾಹಕರು ಆತಿಥ್ಯ ಉದ್ಯಮದಲ್ಲಿ ಸಕ್ರಿಯವಾಗುವ ರೀತಿಯಲ್ಲಿ ಕ್ರಾಂತಿಕಾರಕಗೊಳಿಸಲಿದ್ದು ಅವರ ಪ್ರಯಾಣಗಳನ್ನು ಹೆಚ್ಚಿಸಲಿದೆ ಮತ್ತು ಚಿರಕಾಲದ ಸ್ಮರಣೆಗಳನ್ನು ಸೃಷ್ಟಿಸಲಿದೆ” ಎಂದರು.

“ಟ್ರಾವೆಲ್ ರಿವಾರ್ಡ್ಸ್ ಕಾರ್ಡ್ ಗಳನ್ನು ಇಷ್ಟಪಡುವ ಕಾರ್ಡ್ ದಾರರು ಮಾರುಕಟ್ಟೆಯಲ್ಲಿ ಮತ್ತು ಜಾಗತಿಕವಾಗಿ ಲಭ್ಯವಿರುವ ಪ್ರಯಾಣದ ಅನುಕೂಲಗಳು ಮತ್ತು ಸವಲತ್ತುಗಳನ್ನು ಪಡೆಯಲಿದ್ದಾರೆ” ಎಂದು ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ನ ಇಂಟರ್ನ್ಯಾಷನಲ್ ಮಾರ್ಕೆಟ್ಸ್ ಉಪಾಧ್ಯಕ್ಷ ಕ್ರಿಸ್ ವಿಂಟರ್ ಹೇಳಿದರು. “ನಮ್ಮ ವಿನೂತನ ಪಾಲುದಾರಿಕೆಯ ಮಾದರಿಯು ವಿಶ್ವದಾದ್ಯಂತ ಸದೃಢ ಅನುಮೋದನೆಯ ಹೆಜ್ಜೆ ಗುರುತು ಮೂಡಿಸಿದ್ದು ಕೆಲಸಕ್ಕೆ ಮತ್ತು ಸಂತೋಷಕ್ಕೆ ಪ್ರಯಾಣಿಸುವವರಿಗೂ ಅಲ್ಲದೆ ಪ್ರತಿನಿತ್ಯದ ಸ್ಥಳೀಯವಾಗಿ ವ್ಯಯಿಸುವವರಿಗೂ ಅನುಕೂಲ ಕಲ್ಪಿಸಲಿದೆ” ಎಂದರು.