ಸೀಕಾಯನಹಳ್ಳಿ ಡೈರಿ ಅದ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ ಉಪಾದ್ಯಕ್ಷ ಸ್ಥಾನ ಬಿಜೆಪಿ ಮಡಿಲಿಗೆ , ಕಾಂಗ್ರೆಸ್ಗೆ ಮುಖಭಂಗ

ವಿಜಯ ದರ್ಪಣ ನ್ಯೂಸ್

ದೇವನಹಳ್ಳಿ  , ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೆಪ್ಟೆಂಬರ್ 08

ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಸೀಕಾಯನಹಳ್ಳಿ ಹಾಲು ಉತ್ಪಾಧಕರ ಸಹಕಾರ ಸಂಘದಲ್ಲಿ ಅದ್ಯಕ್ಷ ಸ್ಥಾನಕ್ಕೆ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದಿದ್ದು, ಒಟ್ಟು ೧೨ ನಿರ್ದೇಶಕ ಸ್ಥಾನಗಳಿವೆ. ಅದ್ಯಕ್ಷ ಸ್ಥಾನಕ್ಕೆ ಸುರೇಶ್‌ಕುಮಾರ್ ಮತ್ತು ತಮ್ಮೇಗೌಡ ಅವರು ನಾಮಪತ್ರ ಸಲ್ಲಿಸಿದ್ದು ಇಬ್ಬರು ಕೂಡ ೬ ಮತಗಳನ್ನು ಪಡೆದುಕೊಂಡಿದ್ದು ಲಾಟರಿ ಮೂಲಕ ಸುರೇಶ್ ಅವರನ್ನು ಅದ್ಯಕ್ಷರನ್ನಾಗಿ ಅದಿಕೃತವೆಂದು ಘೋಷಿಸಲಾಗಿದೆ.

ಉಪಾದ್ಯಕ್ಷ ಸ್ಥಾನಕ್ಕೆ ಎಸ್‌ಎಂ. ಮುನಿರಾಜ್ ಹಾಗೂ ನಾಗರಾಜು ಇಬ್ಬರು ನಾಮಪತ್ರ ಸಲ್ಲಿಸಿದ್ದು, ಎಸ್‌ಎಂ. ಮುನಿರಾಜು ೭ ಮತಗಳನ್ನು ಪಡೆದುಕೊಂಡರೆ ಪ್ರತಿಸ್ಪರ್ದಿ ನಾಗರಾಜು ೫ ಮತಗಳನ್ನು ಪಡೆದಿತ್ತಾರೆ ೨ ಮತ ಹೆಚ್ಚಿಗೆ ಪಡೆದುಕೊಂಡ ಎಸ್‌ಎಂ.ಮುನಿರಾಜು ಅವರನ್ನು ಉಪಾದ್ಯಕ್ಷರನ್ನಾಗಿ ಅದಿಕೃತವಾಗಿ ಘೋಷಣೆ ಮಾಡಲಾಗಿದೆ ಎಂದು ಚುನಾವಣಾದಿಕಾರಿ ಶಿವಕುಮಾರ್ ಅವರು ತಿಳಿಸಿರುತ್ತಾರೆ.

ನೂತನ ಡೈರಿ ಅದ್ಯಕ್ಷ ಸುರೇಶ್ ಕುಮಾರ್ ಮಾತನಾಡಿ, ದೇವನಹಳ್ಳಿ ತಾಲ್ಲೂಕಿನಲ್ಲಿ ಸೀಕಾಯನಹಳ್ಳಿ ಡೈರಿಯು ಹಾಲು ಉತ್ಪಾಧನೆಯಲ್ಲಿ ೩ ನೇ ಸ್ಥಾನದಲ್ಲಿದೆ. ಬಮೂಲ್ ನಿಂದ ನಮ್ಮ ಡೈರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿದೆ. ಪ್ರತಿದಿನ ೭೫೦ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ೮೪ ಲಕ್ಷ ವಾರ್ಷಿಕ ವರಮಾನವಿದೆ. ನಮ್ಮ ಡೈರಿಯಲ್ಲಿ ಸ್ವಚ್ಚತೆಗೆ ಮೊದಲ ಆದ್ಯತೆ ನೀಡುವೆ ಹಾಗೂ ಸರ್ವ ಸದಸ್ಯರನ್ನು ಹಾಗೂ ಹಾಲು ಉತ್ಪಾದಕರನ್ನು ವಿಶ್ವಾಸಕ್ಕೆ ತೆಗೆದು ಡೈರಿಯ ಅಭಿವೃದ್ದಿಗೆ ಶ್ರಮಿಸುತ್ತೇನೆಂದರು.

ಕುಂದಾಣ ಹೋಬಳಿ ಯುವ ಜೆಡಿಎಸ್ ಘಟಕದ ಅದ್ಯಕ್ಷ ಸಿಕಾನಹಳ್ಳಿ ಅಮಿತ್ ಮಾತನಾಡಿ, ಸೀಕಾಯನಹಳ್ಳಿ ಡೈರಿಗೆ ಜೆಡಿಎಸ್ ಬೆಂಬಲಿತ ಅದ್ಯಕ್ಷರನ್ನಾಗಿ ಸುರೇಶ್ ಕುಮಾರ್ ಅವರನ್ನು ಹಾಗೂ ಬಿಜೆಪಿ ಬೆಂಬಲಿತ ಎಸ್‌ಎಂ.ಮುನಿರಾಜ್ ಅವರನ್ನು ಉಪಾದ್ಯಕ್ಷರನ್ನಾಗಿ ಆಯ್ಕೆ ಮಾಡಿ ಕೊಂಡಿದ್ದೇವೆ. ಈ ಚುನಾವಣೆ ಮುಂಬರುವ ಲೋಕಸಭೆ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ದಿಕ್ಸೂಚಿಯ ಗೆಲುವಾಗಿದೆ. ಹಾಗಾಗಿ ಕುಂದಾಣ ಹೋಬಳಿಯದ್ಯಂತ ಎಲ್ಲ ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಸಂಘಟಿಸಿ ಸೆಪ್ಟೆಂಬರ್ 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಜೆಡಿಎಸ್ ಪಕ್ಷದ ಬೃಹತ್ ಕಾರ್ಯಕರ್ತರ ಸಭೆಗೆ ಸಜ್ಜಾ ಗಬೇಕಿದೆ, ಡೈರಿಯಲ್ಲಿ ಅದಿಕಾರ ಸ್ವೀಕರಿಸಿದ ತಾವು ಉತ್ಪಾದಕರ ಕುಂದು ಕೊರತೆಗೆ ಸ್ಪಂದಿಸಿ ತಾಲ್ಲೂಕಿನಲ್ಲೇ ಸೀಕಾಯನಹಳ್ಳಿ ಡೈರಿಯನ್ನು ಮಾದರಿಯನ್ನಾಗಿಸಿ ಎಂದರು.

ಈ ಸಂದರ್ಭದಲ್ಲಿ ನೂತನ ಡೈರಿ ಉಪಾದ್ಯಕ್ಷರಾಗಿ ಎಸ್‌ಎಂ.ಮುನಿರಾಜು, ನಿರ್ದೇಶಕರಾದ ಶಿವಣ್ಣ, ತಮ್ಮೇಗೌಡ, ಜಯರಾಮಯ್ಯ, ಗೌರಮ್ಮ, ಶ್ರೀಧರ್, ಕಲಾವತಿ, ವೆಂಕಟರಮಣಸ್ವಾಮಿ, ನಾಗರಾಜು, ಸುನಂದಮ್ಮ, ಸಿಇಒ ಮಂಜುನಾಥ್,  ವಿಶ್ವನಾಥಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯ ವಿನಯ್ ಕುಮಾರ್, ಜೆಡಿಎಸ್ ಮುಖಂಡರಾದ ಮಧುಸೂಧನ್, ಕುಮಾರ್, ನವೀನ್, ಪ್ರಮೋದ್, ಶಿವಕುಮಾರ್, ಸಂಜಯ್, ಸಾಗರ್, ಮನು, ಮಹೇಶ್, ಮುಂತಾದವರಿದ್ದರು.