ಬೆಂಗಳೂರಿಗರಿಗೆ ನೂತನ ಸ್ಟೈಲಿಂಗ್ ಸ್ಪರ್ಶ ನೀಡಲು, ನಗರದಲ್ಲಿ ತನ್ನ ಮೊದಲ ವಿಶೇಷ ಮಳಿಗೆ ಆರಂಭಿಸಿದ ಸೋಕ್ತಾಸ್

ವಿಜಯ ದರ್ಪಣ ನ್ಯೂಸ್,

ಬೆಂಗಳೂರು ಸೆಪ್ಟೆಂಬರ್ 27:ಆದಿತ್ಯ ಬಿರ್ಲಾ ಗ್ರೂಪ್‌ನ ಬ್ರಾಂಡ್ ಆಗಿರುವ ಸೋಕ್ತಾಸ್, ಅಸಂಖ್ಯಾತ ನೇಯ್ಗೆಯಲ್ಲಿ ಸೊಗಸಾದ ವಿನ್ಯಾಸಗಳೊಂದಿಗೆ ಬೆಂಗಳೂರಿನಲ್ಲಿ ಫ್ಯಾಷನ್-ಫಾರ್ವರ್ಡ್ ಪುರುಷರ ಅನ್ವೇಷಣೆಗಳನ್ನು ಉನ್ನತೀಕರಿಸಲು ಸಿದ್ಧವಾಗಿದೆ.

ಕಾರ್ಯಕ್ರಮದಲ್ಲಿ ಸೋಕ್ತಾಸ್ “ಆಲ್ವೇಜ್ ಅಹೇಡ್” ಎಂಬ ಅಡಿಬರಹದಡಿ ತನ್ನ ಹೊಸ ಅಭಿಯಾನವನ್ನು ಪ್ರಾರಂಭಿಸಿತು.

ಬೆಂಗಳೂರು, 27 ಸೆಪ್ಟೆಂಬರ್, 2023: ಆದಿತ್ಯ ಬಿರ್ಲಾ ಗ್ರೂಪ್‌ನ ಭಾಗವಾಗಿರುವ ಗ್ರಾಸಿಮ್ ಇಂಡಸ್ಟ್ರೀಸ್‌ನ ಐಷಾರಾಮಿ ಹತ್ತಿ ಬಟ್ಟೆಗಳ ಬ್ರ್ಯಾಂಡ್ ಸೋಕ್ತಾಸ್, ಇಂದು ಬೆಂಗಳೂರಿನ ಜಯನಗರದಲ್ಲಿ ಭಾರತದಲ್ಲಿನ ತನ್ನ ಮೊದಲ ವಿಶೇಷ ಬ್ರ್ಯಾಂಡ್ ಔಟ್‌ಲೆಟ್ಅನ್ನು ತೆರೆಯಿತು. ಮಳಿಗೆಯನ್ನು ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ಡೊಮೆಸ್ಟಿಕ್ ಟೆಕ್ಸ್ಟೈಲ್ಸ್, ಗ್ರಾಸಿಮ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ಗ್ರೂಪ್‌ನ್ ಸಿಇಓ ಜಸ್ವಿಂದರ್ ಕಟಾರಿಯಾರವರು ಉದ್ಘಾಟಿಸಿದರು.

100% ಪ್ರೀಮಿಯಂ ಹತ್ತಿ ಮತ್ತು ನೈಸರ್ಗಿಕ ಮಿಶ್ರಣಗಳೊಂದಿಗೆ ತಯಾರಿಸಲಾದ ಪ್ರೀಮಿಯಂ ಹತ್ತಿ ಶರ್ಟಿಂಗ್ ಬಟ್ಟೆಗಳ ಅಸಾಧಾರಣ ಶ್ರೇಣಿಯೊಂದಿಗೆ ಫ್ಯಾಶನ್ ಜಗತ್ತನ್ನು ಮರುವ್ಯಾಖ್ಯಾನಿಸಲು ಸೋಕ್ತಾಸ್ ಸಿದ್ಧವಾಗಿದೆ. ಪ್ರತಿಯೊಂದು ಬಟ್ಟೆಯ ತುಣುಕು ಸೂಪರ್-ಫೈನ್, ಉತ್ತಮ-ಗುಣಮಟ್ಟದ ನೂಲುಗಳನ್ನು ಬಳಸಿಕೊಂಡು ನಿಖರವಾಗಿ ರಚಿಸಲಾಗಿದೆ, ಇದು ಅತ್ಯುತ್ತಮ ಫಿನಿಷಿಂಗ್ ಮತ್ತು ಐಷಾರಾಮಿ ಅನುಭವವನ್ನು ನೀಡುತ್ತದೆ. ಎರಡು ಹಂತಗಳಲ್ಲಿ ಹರಡಿರುವ 1000 ಚದರ ಅಡಿ ಜಾಗವನ್ನು ಒಳಗೊಂಡಿರುವ ಜಯನಗರದ ಔಟ್‌ಲೆಟ್ ಗ್ರಾಹಕರಿಗೆ ಮನಮೋಹಕ ಶಾಪಿಂಗ್ ಅನುಭವವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ವೈವಿಧ್ಯಮಯ ಫ್ಯಾಶನ್ ಆದ್ಯತೆಗಳನ್ನು ಪೂರೈಸುವ ಸೊಗಸಾದ ಶ್ರೇಣಿಯ ಬಟ್ಟೆಗಳನ್ನು ಪ್ರದರ್ಶಿಸಲಾಗುವುದು ಮತ್ತು ಪ್ರತಿ ಟೈಲರಿಂಗ್ ಅಗತ್ಯಗಳಿಗೆ ತಕ್ಕಂತೆ ಬಟ್ಟೆಗಳನ್ನು ಇಲ್ಲಿ ಕಾಣಬಹುದು.

ಸೋಕ್ತಾಸ್‌ನಲ್ಲಿ ಶಾಪಿಂಗ್ ಮಾಡಲು ಬೆಂಗಳೂರಿಗರನ್ನು ಆಹ್ವಾನಿಸುತ್ತಾ, ನಟ ಡಾರ್ಲಿಂಗ್ ಕೃಷ್ಣ, “ನಟನಾಗಿ, ನಾನು ಯಾವಾಗಲೂ ಬೆಂಗಳೂರಿನ ಸ್ಪಿರಿಟ್‌ನಿಂದ ಆಕರ್ಷಿತನಾಗಿರುತ್ತೇನೆ. ಕ್ರೀಡೆಯಿಂದ, ತಂತ್ರಜ್ಞಾನದಿಂದ, ಮನರಂಜನೆಯವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ನಗರವು ಸತತವಾಗಿ ಮುಂದಿದೆ. ಈಗ, ನಮ್ಮ ಬೆಂಗಳೂರಿನಲ್ಲಿ ನನ್ನ ಜೀವನದಲ್ಲಿ ಮುಂದುವರೆವ ಸ್ಪಿರಿಟ್‌ನ್ನು ಹಂಚಿಕೊಳ್ಳುವ ಬ್ರ್ಯಾಂಡ್ ಲಭ್ಯವಾಗಲಿದೆ. ಸೋಕ್ತಾಸ್ ಮತ್ತು ಅದರ ಅಸಾಧಾರಣ ಶ್ರೇಣಿಯ ಐಷಾರಾಮಿ ಹತ್ತಿ ಬಟ್ಟೆಗಳನ್ನು ವೈಯಕ್ತಿಕವಾಗಿ ಅನುಭವಿಸಲು ಮತ್ತು ನನ್ನ ಸ್ಟೈಲಿಂಗ್ ಶೈಲಿಯನ್ನು ಉನ್ನತೀಕರಿಸಲು ನಾನು ರೋಮಾಂಚನಗೊಂಡಿದ್ದೇನೆ” ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ಜಸ್ವಿಂದರ್ ಕಟಾರಿಯಾ, “ಬೆಂಗಳೂರಿನಲ್ಲಿ ಸೋಕ್ತಾಸ್‌ನ ಮೊದಲ ವಿಶೇಷ ಚಿಲ್ಲರೆ ಮಾರಾಟ ಮಳಿಗೆಯನ್ನು ಪ್ರಾರಂಭಿಸುವುದು ನಮಗೆ ಮಹತ್ವದ ಮೈಲಿಗಲ್ಲಾಗಿದೆ, ನಮ್ಮ ಬಟ್ಟೆಗಳು ಕೇವಲ ಜವಳಿ ಬಟ್ಟೆಗಳಾಗಿರದೇ, ಅವು ಸೊಬಗು ಮತ್ತು ಉತ್ಕೃಷ್ಟತೆಯ ಅಭಿವ್ಯಕ್ತಿಗಳಾಗಿವೆ. ನಗರದ ಫ್ಯಾಷನ್-ಫಾರ್ವರ್ಡ್ ಪುರುಷರಿಗೆ ಪ್ರೀಮಿಯಂ ಐಷಾರಾಮಿ ಹತ್ತಿ ಬಟ್ಟೆಗಳ ಜಗತ್ತನ್ನು ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಟರ್ಕಿಶ್ ಪರಂಪರೆ ಮತ್ತು ಗುಣಮಟ್ಟಕ್ಕೆ ಅಚಲವಾದ ಬದ್ಧತೆಯೊಂದಿಗೆ, ಬೆಂಗಳೂರಿಗರು ಉತ್ತಮ ಬಟ್ಟೆಗಳನ್ನು ಅನುಭವಿಸುವ ವಿಧಾನವನ್ನು ಮರುವ್ಯಾಖ್ಯಾನಿಸಲು ಸೋಕ್ತಾಸ್ ಸಜ್ಜಾಗಿದೆ” ಎಂದರು.

ಮುಂದುವರೆದು “ಈ ಉದ್ಘಾಟನಾ ಮಳಿಗೆಯೊಂದಿಗೆ, ಇಂದಿನ ವಿವೇಚನಾಶೀಲ ಮತ್ತು ಫ್ಯಾಶನ್-ಫಾರ್ವರ್ಡ್ ಪುರುಷರು ಆದ್ಯತೆ ನೀಡುವ ಗೋ-ಟು ಬ್ರಾಂಡ್ ಆಗಿ ಸೋಕ್ತಾಸ್‌ಅನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ನಾವು ಅಡಿಪಾಯ ಹಾಕುತ್ತಿದ್ದೇವೆ. ಇಂದು ಪ್ರಾರಂಭವಾಗುತ್ತಿರುವ ನಮ್ಮ ಹೊಸ ಬ್ರ್ಯಾಂಡ್ ಅಭಿಯಾನ ‘ಆಲ್ವೇಜ್ ಅಹೇಡ್’ ಈ ಘಳಿಗೆಯನ್ನು ಇನ್ನಷ್ಟು ರೋಮಾಂಚನಗೊಳಿಸುತ್ತಿದೆ. ಈ ಅಭಿಯಾನವು ನಿರಂತರ ಮರುಶೋಧನೆಗೆ ನಮ್ಮ ಬದ್ಧತೆಯನ್ನು, ವಿನ್ಯಾಸಗಳಲ್ಲಿ ಮಿತಿಯಿಲ್ಲದ ಸಾಧ್ಯತೆಗಳೊಂದಿಗೆ ಮಾದರಿಗಳು, ಟೆಕಶ್ಚರ್‌ಗಳು ಮತ್ತು ಡಿಸೈನ್‌ಗಳನ್ನು ನವೀಕರಿಸುತ್ತಾ, ಜೀವನದ ಉತ್ತಮ ವಿಷಯಗಳನ್ನು ಮೆಚ್ಚುವ ನಮ್ಮ ಮಹತ್ವಾಕಾಂಕ್ಷೆಯ ಮತ್ತು ವಿವೇಚನಾಶೀಲ ಗ್ರಾಹಕರ ಮನೋಭಾವವನ್ನು ಪ್ರತಿಧ್ವನಿಸುತ್ತದೆ. ಸೋಕ್ತಾಸ್ ಧರಿಸುವ ಪುರುಷರು ಸಂಪ್ರದಾಯಿಕ ಧಿರಿಸುಗಳಿಗೆ ಸವಾಲು ಹಾಕುವುದರ ಜೊತೆಗೆ ಗುಣಮಟ್ಟ ಮತ್ತು ಅತ್ಯಾಧುನಿಕತೆಯನ್ನು ಮೌಲ್ಯೀಕರಿಸುತ್ತಾರೆ ಮತ್ತು ಶೈಲಿಯ ಆಯ್ಕೆಗಳಲ್ಲಿ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುತ್ತಾರೆ” ಎಂದು ಹೇಳಿದರು.

ಸೋಕ್ತಾಸ್ ಜವಾಬ್ದಾರಿಯುತ ಕಚ್ಚಾವಸ್ತು ಪಡೆಯುವಿಕೆ ಮತ್ತು ನೈತಿಕ ಅಭ್ಯಾಸಗಳನ್ನು ನಂಬುತ್ತದೆ, ಪ್ರತಿ ಬಟ್ಟೆಯು ಗುಣಮಟ್ಟ ಮತ್ತು ಉತ್ತಮ ಪ್ರಜ್ಞೆಯ ಕಥೆಯನ್ನು ಹೇಳುತ್ತದೆ ಎಂದು ಖಚಿತಪಡಿಸುತ್ತೇವೆ. GOTS, OEKOTEX, ಮತ್ತು ISO – 9001 ಸೇರಿದಂತೆ ಮುಂತಾದ ಪ್ರಮಾಣೀಕರಣಗಳು ಈ ಬ್ರ್ಯಾಂಡ್‌ನ ಬದ್ಧತೆಯು ಪ್ರತಿಫಲಿಸುತ್ತವೆ.

ಸೋಕ್ತಾಸ್ ಭಾರತದಾದ್ಯಂತ 3000ಕ್ಕೂ ಅಧಿಕ ಮಲ್ಟಿ-ಬ್ರ್ಯಾಂಡ್‌ ಪ್ರೀಮಿಯಂ ಫ್ಯಾಬ್ರಿಕ್ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡುತ್ತಿದೆ. ಜಯನಗರದಲ್ಲಿ ಸೋಕ್ತಾಸ್‌ನ ವಿಶೇಷ ಔಟ್‌ಲೆಟ್‌ನ ಅದ್ಧೂರಿ ಉದ್ಘಾಟನೆಯು ಐಷಾರಾಮಿ ಬಟ್ಟೆಗಳ ಜಗತ್ತಿನಲ್ಲಿ ಒಂದು ಹೆಗ್ಗುರುತು. ತನ್ನ ಗ್ರಾಹಕರಿಗೆ ಪ್ರೀಮಿಯಂ ಜಾಕ್ವಾರ್ಡ್‌ಗಳು, ಫಿಲ್-ಕೂಪ್ ಜಾಕ್ವಾರ್ಡ್‌ಗಳು ಮತ್ತು ಕ್ಲಿಪ್ ಡಾಬಿ ಫ್ಯಾಬ್ರಿಕ್‌ಗಳಂತಹ ಬಹು-ನೇಯ್ಗೆ ಮಾದರಿಗಳನ್ನು ನೀಡಲಿದೆ. ಸೋಕ್ತಾಸ್, ಶಾಪ್ ನಂ. 22/136, 9ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ – 560011 ಗೆ ಭೇಟಿ ನೀಡಿ, ಸೋಕ್ತಾಸ್‌ನ ಐಷಾರಾಮಿ ಸ್ಪರ್ಶವನ್ನು ಅನುಭವಿಸಿ.