ಜನರ ಕೆಲಸಗಳು ಸುಗಮವಾಗಿ ಸಾಗಲು ಕಛೇರಿ ಆರಂಭ : ಸಂಸದ ಡಾ.ಕೆ ಸುಧಾಕರ್
ವಿಜಯ ದರ್ಪಣ ನ್ಯೂಸ್….
ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಛೇರಿ ಉದ್ಘಾಟನೆ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜನವರಿ 24: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಛೇರಿಗೆ ಸಂಸದ ಡಾ.ಕೆ ಸುಧಾಕರ್ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಲಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ಕೆಲಸಗಳು ಸುಗಮವಾಗಿ ಸಾಗಲು ಕಛೇರಿ ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಕಲಾಪಕ್ಕೆ ಭಾಗವಹಿಸುವ ದಿನಗಳನ್ನು ಹೊರತುಪಡಿಸಿ, ಪ್ರತಿ ಸೋಮವಾರ ಅರ್ಧ ದಿನ ಈ ಕಛೇರಿಯಲ್ಲಿ ಲಭ್ಯವಿರುತ್ತೇನೆ. ಉಳಿದಂತೆ ನನ್ನ ಆಪ್ತ ಸಹಾಯಕರು ಪ್ರತಿದಿನ ಕಛೇರಿಯಲ್ಲಿ ಲಭ್ಯವಿದ್ದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದರು.
&&&&&&&&&&&&&&&&&&&&&&&&
ದಶಕ -125
ತಪ್ಪೆಂದು ತಪ್ಪನ್ನು ಒಪ್ಪಿಕೊಳ್ಳಲು ಬಾರದು ಗಂಡನೊಡನೆ ಒಪ್ಪಿದರೆ ಮರ್ಯಾದೆ ಉಳಿಯದು ತಂದೆಯೊಡನೆ ತಪ್ಪಿಸಿಕೊಳ್ಳಲು ಆಸೆ ಪಡುವುದು ಅಮ್ಮನೊಡನೆ ಹಟಮಾರಿ ಸ್ವಭಾವ ಎಂದೂ ಬಿಡದು!
ಮಕ್ಕಳೊಡನೆ ಚಿಕ್ಕವನಾಗಲು ಮನಸ್ಸು ಬಾರದು ಸಕ್ಕರೆಯ ಬಂಧುಗಳೊಡನೆ ಸದಾ ಕುಗ್ಗ ಬಾರದು ಮಿಕ್ಕವರ ಗುಂಪಿನಲ್ಲಿ ನನಗೆ ನಾನೆ ತಗ್ಗ ಕೂಡದು ಸಿಕ್ಕ ಸಿಕ್ಕವರ ಜೊತೆಯಲ್ಲಿ ಬಗ್ಗುವ ಇರಾದೆಯಿರದು
ತಪ್ಪಾಗಿಹ ತಪ್ಪನ್ನು ಕ್ಷಮಿಸೆನ್ನಲು ಅದೇನು ಗಾಬರಿ, ಭಯ? ತುಪ್ಪದಂತೆ ತಪ್ರೊಪ್ಪಿಕೊಂಡರೆ ಮನ ನಿರ್ಮಲದಭಯ!
ಹನಿಬಿಂದು