ಸಹಕಾರಿಗಳ ಸಮಾಪನೆ ಗೊಳಿಸುವ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ವಿಜಯ ದರ್ಪಣ ನ್ಯೂಸ್….

ಸಹಕಾರಿಗಳ ಸಮಾಪನೆ ಗೊಳಿಸುವ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ  , ಜ.03: ದೊಡ್ಡಬಳ್ಳಾಪುರ ಉಪ ವಿಭಾಗದ ಕಚೇರಿ ವ್ಯಾಪ್ತಿಯಲ್ಲಿ ಕೆಳಕಂಡ ಸೌಹಾರ್ದ ಸಹಕಾರಿಗಳು ನೋಂದಣಿಯಾಗಿದ್ದು ಇದರ ಆಡಳಿತ ವ್ಯಾಪ್ತಿಯು ತಾಲೂಕು ಮಟ್ಟಕ್ಕಿಂತ ಕಡಿಮೆಗೆ ಸೀಮಿತವಾಗಿರುತ್ತದೆ. ಆದ್ದರಿಂದ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿಯ ನಿರ್ಣಯದ ಅನುಸಾರ ಸಹಕಾರಿಯ ಕಾರ್ಯ ಚಟುವಟಿಕೆಗಳು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಈ ಸಹಕಾರಿಗಳನ್ನು ಕಾಯ್ದೆ ಅನುಸಾರ ಕಾರ್ಯ ವ್ಯಾಪ್ತಿಯ ನಿಬಂಧಕರುಗಳಿಗೆ ಸಮಾಪನೆಗೊಳಿಸಲು ಶಿಫಾರಸ್ಸು ಮಾಡಿರುವುದರಿಂದ ಸಹಕಾರಿಗಳನ್ನು ಸಮಾಪನೆ ಗೊಳಿಸಲಾಗುತ್ತಿದ್ದು ಈ ಸಂಬಂಧ ಸಹಕಾರಿ ಸದಸ್ಯರುಗಳು ಠೇವಣಿದಾರರು ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಕೆಳಕಂಡ ಕಚೇರಿಗೆ 7 ದಿನಗಳ ಒಳಗಾಗಿ ದೂರು ಸಲ್ಲಿಸಬಹುದು.

ಸಮಾಪನೆ ಗೊಳಿಸುತ್ತಿರುವ ಸಹಕಾರಿಗಳು

1. ಶ್ರೀ ಅಮರನಾರಾಯಣ ಸ್ವಾಮಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್, ಮಿನಿ ವಿಧಾನಸೌಧ ಹಿಂಭಾಗ ಕಮ್ಮವಾರಿಪೇಟೆ, ಹೊಸಕೋಟೆ.

2.ಆಶ್ರಿತ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ನಂಬರ್ 85, ವೆಂಕಮ್ಮ ಕಾಂಪ್ಲೆಕ್ಸ್, ಕೆ ಆರ್ ರೋಡ್, ತಾಲೂಕು ಕಚೇರಿ ಎದುರು, ಹೊಸಕೋಟೆ.

3. ವೈಸ್ ಮೆನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ನಂಬರ್ 5, ಮೊದಲನೇ ಮಹಡಿ, ಲಕ್ಷ್ಮಿ ಕಾಂಪ್ಲೆಕ್ಸ್(ಹಳೇ ವಿಜಯಾ ಬ್ಯಾಂಕ್ ಬಿಲ್ಡಿಂಗ್) ಮಾರ್ಕೆಟ್ ಸ್ಕೂಲ್ ಹತ್ತಿರ, ಮುಖ್ಯರಸ್ತೆ ದೊಡ್ಡಬಳ್ಳಾಪುರ ಸಹಕಾರಿಗಳ ಸಹಾಯಕ ನಿಬಂಧಕರ ಕಛೇರಿ ದೊಡ್ಡಬಳ್ಳಾಪುರ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಆಕ್ಷೇಪಣೆ ಸಲ್ಲಿಸಲು ಸಹಕಾರಿಗಳ ಸಹಾಯಕ ನಿಬಂಧಕರ ಕಛೇರಿ, ದೊಡ್ಡಬಳ್ಳಾಪುರ ಉಪವಿಭಾಗ, ದೊಡ್ಡಬಳ್ಳಾಪುರ. ದೂರವಾಣಿ ಸಂಖ್ಯೆ 7975418818 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಕಾರಿಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ