--Ads--

25 ಕೋಟಿ ವೆಚ್ಚದಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ, 2 ಕೋಟಿ ವೆಚ್ಚದಲ್ಲಿ ರಸ್ತೆಗೆ ಡಾಂಬರೀಕರಣಕ್ಕೆ ಸಚಿವ ಕೆ ಎಚ್ ಮುನಿಯಪ್ಪ ಚಾಲನೆ 

On: March 14, 2026 2:35 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

25 ಕೋಟಿ ವೆಚ್ಚದಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ, 2 ಕೋಟಿ ವೆಚ್ಚದಲ್ಲಿ ರಸ್ತೆಗೆ ಡಾಂಬರೀಕರಣಕ್ಕೆ ಸಚಿವ ಕೆ ಎಚ್ ಮುನಿಯಪ್ಪ ಚಾಲನೆ 

ವಿಜಯಪುರ , ದೇವನಹಳ್ಳಿ ತಾಲ್ಲೂಕು: ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ನಿಧಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 2 ಕೋಟಿ ಅನುದಾನದಲ್ಲಿ, ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ ಹಾಗೂ ಬೆಸ್ಕಾಂ ಇಲಾಖೆಯಿಂದ 25 ಕೋಟಿ ರೂಗಳ ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಸುವ ಮತ್ತು ಎಲ್.ಟಿ.ಮೇಲ್ ತಂತಿ ಕೇಬಲ್ ತೆಗೆದು ಎಲ್.ಟಿ.ಎ.ಬಿ.ಕೇಬಲ್ ಅಳವಡಿಸುವ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ನೆರವೇರಿಸಿದರು.

ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ದೇವನಹಳ್ಳಿಯಲ್ಲಿ 40 ಕೋಟಿ, ವಿಜಯಪುರದಲ್ಲಿ 25 ಕೋಟಿ ವೆಚ್ಚದಲ್ಲಿ, ಭೂಗತ ಕೇಬಲ್ ಅಳವಡಿಕೆ ಹಾಗು ಕಂಬಿಮುಕ್ತ ವಿದ್ಯುತ್ ತಂತಿಗಳ ಅಳವಡಿಕೆ ಕಾಮಗಾರಿ ನಡೆಯುತ್ತದೆ. ಪಟ್ಟಣದಲ್ಲಿ ಯು.ಜಿ.ಡಿ ಮಾಡಲು ಅಗತ್ಯ ಕ್ರಮ ವಹಿಸಲಾಗುತ್ತದೆ. ಪ್ರತಿಯೊಂದು ಗ್ರಾಮಕ್ಕೂ ಎತ್ತಿನಹೊಳೆ ಯೋಜನೆಯಡಿ ನೀರು ಹರಿಸಲು ತೀರ್ಮಾನಿಸಿದ್ದೇವೆ. ನೈರ್ಮಲ್ಯ ಕಾಪಾಡಲು ಆಧ್ಯತೆ ನೀಡುತ್ತಿದ್ದೇವೆ. ಕಾವೇರಿ ನೀರನ್ನು ಎರಡೂ ಪಟ್ಟಣಗಳಿಗೆ ಹರಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಇನ್ನೂ ಒಂದು ವರ್ಷ ಸಮಯಾವಕಾಶ ಬೇಕಾಗುತ್ತದೆ. ಅದನ್ನೂ ಮಾಡುತ್ತೇವೆ. ಯುಜಿಡಿ ಮಾಡಲು ಡಿಪಿಆರ್ ಮಾಡಿದ್ದೇವೆ ಎಂದರು.

ಅಡುಗೆ ಅನಿಲ ಸಮಸ್ಯೆಯಾಗಲ್ಲ: ಗೃಹಬಳಕೆ ಸಿಲಿಂಡರುಗಳಿಗೆ ಯಾವುದೇ ಸಮಸ್ಯೆಯಿಲ್ಲ. ವಾಣಿಜ್ಯ ಸಿಲಿಂಡರುಗಳಿಗೆ ಮಾತ್ರ ಸ್ವಲ್ಪ ವ್ಯತ್ಯಯವಾಗಿದೆ. ಶೀಘ್ರವಾಗಿ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.

ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್, ಮುಖ್ಯಾಧಿಕಾರಿ ಸತ್ಯನಾರಾಯಣ, ಬೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಹೊಸಕೋಟೆ ವಿಭಾಗದ ವೆಂಕಟೇಶಪ್ಪ, ಎಇಇ ಲಕ್ಷ್ಮೀಕಾಂತ್, ಇಂಜಿನಿಯರ್ ಭವಾನಿಶಂಕರ್, ಗ್ರಾಮೀಣ ಇಂಜಿನಿಯರ್ ನಾರಾಯಣಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಇಇ ರವೀಂದ್ರಸಿಂಗ್, ಇಂಜಿನಿಯರ್ ಮುರಳಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್, ಸಂಪತ್ ಕುಮಾರ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್, ಉಪಾಧ್ಯಕ್ಷ ವಲ್ಲಿಜಾನ್, ಗ್ಯಾಸ್ ಶ್ರೀನಿವಾಸ್, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಪ್ಜಲ್ ಪಾಷ, ಕೆ.ಎಂ.ಮಧುಮಹೇಶ್, ಬಾರ್ ಸಂಪತ್, ಎಂ.ವೇಣುಗೋಪಾಲ್, ಪುರಸಭೆ ಸದಸ್ಯ ಎಂ.ರಾಜಣ್ಣ, ರಾಜಬಾಬು, ಹರೀಶ್,  ಮುನಿಚಿನ್ನಪ್ಪ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now