ವೈಭವದಿಂದ ನಡೆದ ಶ್ರೀವಾಸವಿ ಜಯಂತಿ 

ವಿಜಯ ದರ್ಪಣ ನ್ಯೂಸ್….

ವೈಭವದಿಂದ ನಡೆದ ಶ್ರೀವಾಸವಿ ಜಯಂತಿ

ಶಿಡ್ಲಘಟ್ಟ : ನಗರದಲ್ಲಿ ಆರ್ಯವೈಶ್ಯ ಮಂಡಳಿ ಹಾಗೂ
ಸಂಬಂಧಿತ ಸಹ ಸಂಸ್ಥೆಗಳ ಆಶ್ರಯದಲ್ಲಿ ಶ್ರೀವಾಸವಿ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು.
ವಾಸವಿ ಮಹಿಳಾ ಮಂಡಳಿ ಮತ್ತು ಭಜನಾ ಮಂಡಳಿಯ ಸದಸ್ಯೆಯರು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಾಗವಹಿಸಿದರು.

ಆರು ತಿಂಗಳ ಮಗುವಿನಿಂದ ಎಂಟು ವರ್ಷವರೆಗೆ ಇರುವ ಬಾಲಿಕೆಯರಿಗೆ ಕನ್ಯಕಾ ಪೂಜೆ ನೆರವೇರಿಸಲಾಯಿತು, ವಾಸವಿ ಮಾತೆಯ ಚರಿತ್ರೆಯ ಪಠಣ, ಉಯ್ಯಾಲೆ ಉತ್ಸವ, ಪಂಚಾರತಿ ಕಾರ್ಯಕ್ರಮಗಳು ಭಕ್ತಿಭಾವದಿಂದ ತುಂಬಿದ್ದವು. ವಾಸವಿ ಮಾತೆಗೆ ನಾಣ್ಯದ ತುಲಾಭಾರ ಕೂಡ ನಡೆಸಲಾಯಿತು.

ವಾಸವಿ ಯುವಜನ ಸಂಘದ ವತಿಯಿಂದ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಆಯೋಜಿಸಲಾಗಿದ್ದು, ರಾಮಾಯಣ ಮತ್ತು ಮಹಾಭಾರತದ ದೃಶ್ಯಾವಳಿಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ವಾಸವಿ ವಿದ್ಯಾಸಂಸ್ಥೆಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ನಡೆಯಿತು ದೇವಿಯ ಅಲಂಕಾರ ವಿಶೇಷ ಆಕರ್ಷಣೆಯಾಗಿ ಕಂಗೊಳಿಸಿತು ,
ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಮಹೇಶ್‌ ಬಾಬು, ಕಾರ್ಯದರ್ಶಿ ರೂಪಸಿರಮೇಶ್, ಅರವಿಂದ್,ಶರತ್ ಬಾಬು ಜಯಶ್ರೀ ಕೇದಾರನಾಥ್, ಸಂದೀಪ್ ರಾಜ್,ಟಿ.ಎ.ಕೆ.ಶೆಟ್ಟಿ, ಮಮತಾಮಂಜುನಾಥ್ ಮತ್ತು ಗಜಲಕ್ಷ್ಮಿನಾಗಭೂಷಣ್‌ ಮುಂತಾದವರು ಹಾಜರಿದ್ದರು.