ಮೇ.26 ರಿಂದ ಜೂ.02 ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2
ವಿಜಯ ದರ್ಪಣ ನ್ಯೂಸ್….
ಮೇ.26 ರಿಂದ ಜೂ.02 ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಮೇ,09: 2025 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-01 ರಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಹಾಗೂ ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಅನ್ನು ಮೇ 26 ರಿಂದ ಜೂನ್ 02 ರವರೆಗೆ ನಡೆಸಲಾಗುತ್ತಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಗೆ ನೊಂದಾಯಿಸಲು ಮೇ 10 ಕೊನೆಯ ದಿನವಾಗಿದ್ದು, ಪರೀಕ್ಷೆ-1ರಲ್ಲಿ ನೋಂದಾಯಿಸಿಕೊಂಡು ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಹಾಗೂ ಪ್ರಪ್ರಥಮ ಬಾರಿಗೆ ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ-2ರಲ್ಲಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆ-1ರಲ್ಲಿ ನೊಂದಾಯಿಸಿಕೊಂಡು ಪರೀಕ್ಷೆಗೆ ಗೈರಾಗಿದ್ದವರು, ಪೂರ್ಣಗೊಳಿಸದೆ ಇರುವ ಮತ್ತು ಹಿಂದಿನ ಸಾಲಿನಲ್ಲಿ ಅನುತ್ತಿರ್ಣರಾದ ಹಾಗೂ ಫಲಿತಾಂಶವನ್ನು ಉತ್ತಮಗೊಳಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.
ವಿದ್ಯಾರ್ಥಿಗಳು, ಶಾಲಾ ಮುಖ್ಯೋಪಾಧ್ಯಾಯರು ಮಂಡಳಿಯ https://kseab.karnataka.gov.in ಜಾಲತಾಣದ ಮೂಲಕ ಲಾಗಿನ್ ಮಾಡಿಕೊಂಡು ಪರೀಕ್ಷೆ-2 ಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪರೀಕ್ಷೆ-2 ರ ನೋಂದಣಿ ಮತ್ತು ಇತ್ಯಾದಿ ವಿಷಯಗಳ ಕುರಿತು ಸಹಾಯವಾಣಿ ಸಂಖ್ಯೆ 080-23310075 ಮತ್ತು 080-23310076 ಇದಕ್ಕೆ ಕರೆಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಅತಿಥಿ ಶಿಕ್ಷಕ ಹಾಗೂ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ. ಮೇ,08: 2025-26ನೇ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು 36 ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.
ಅತಿಥಿ ಶಿಕ್ಷಕ ಹಾಗೂ ಅತಿಥಿ ಉಪನ್ಯಾಸಕರ ಹುದ್ದೆಗೆ ಬಿಎ, ಬಿಎಸ್ಸಿ, ಬಿ.ಎಸ್.ಸಿ, ಬಿ.ಸಿ.ಎ ಮತ್ತು ಎಂ.ಎ, ಎಂ.ಎಸ್.ಸಿ ಹಾಗೂ ಬಿ.ಎಡ್ ಸೇರಿ ಸಂಬಂಧಪಟ್ಟ ವಿಷಯವಾರು ವಿದ್ಯಾರ್ಹತೆ ಹೊಂದಿರಬೇಕು.
ಹುದ್ದೆಗಳು ಖಾಲಿಯಿರುವ ಶಾಲೆಗಳ ಪಟ್ಟಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ,(1 ರಿಂದ 10ನೇ ತರಗತಿ ಸಿ.ಬಿ.ಎಸ್.ಇ) ಹಾಗೂ (ಪದವಿ ಪೂರ್ವ ರಾಜ್ಯ ಪಠ್ಯಕ್ರಮ ಪಿ.ಸಿ.ಎಂ.ಬಿ) ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾಲ್ಲೂಕು. ಮೊರಾರ್ಜಿ ದೇಸಾಯಿ ವಸತಿ ಶಾಲೆ, (1 ರಿಂದ 10ನೇ ತರಗತಿ ಸಿ.ಬಿ.ಎಸ್.ಇ) ಹಾಗೂ (ಪದವಿ ಪೂರ್ವ ರಾಜ್ಯ ಪಠ್ಯಕ್ರಮ ಪಿ.ಸಿ.ಎಂ.ಬಿ) ದೇವನಾಯಕನಹಳ್ಳಿ, ದೇವನಹಳ್ಳಿ ತಾಲ್ಲೂಕು. ಮೌಲಾನಾ ಆಜಾದ್ ಮಾದರಿ ಶಾಲೆ, ವಿಜಯಪುರ,ದೇವನಹಳ್ಳಿ ತಾಲ್ಲೂಕು. ಮೌಲಾನಾ ಆಜಾದ್ ಮಾದರಿ ಶಾಲೆ, ಮುತ್ತೂರು, ದೊಡ್ಡಬಳ್ಳಾಪುರ ತಾಲ್ಲೂಕು. ಮೌಲಾನಾ ಆಜಾದ್ ಮಾದರಿ ಶಾಲೆ, ಇಸ್ಲಾಂಪುರ, ನೆಲಮಂಗಲ ತಾಲ್ಲೂಕು.
ಮೇಲ್ಕಂಡ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣವಾದ https://dom.karnataka.gov.in ಅಥವಾ ನೇರವಾಗಿ ಸಂಬಂಧಪಟ್ಟ ಜಿಲ್ಲಾ ಕಛೇರಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ:216, 2ನೇ ಮಹಡಿ ಜಿಲ್ಲಾಡಳಿತ ಭವನದಲ್ಲಿ ತಮ್ಮ ದಾಖಲೆಗಳೊಂದಿಗೆ ಕೊನೆಯ ದಿನಾಂಕ ಮೇ 19 ರ ಒಳಗಾಗಿ ಕಛೇರಿ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂರವಾಣಿ ಸಂಖ್ಯೆ:080-29787455 ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ
ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿ.ಟಿ.ಟಿ.ಸಿ ಕೇಂದ್ರದಲ್ಲಿ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ. ಮೇ,09: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ವತಿಯಿಂದ 2025-26ನೇ ಸಾಲಿನಲ್ಲಿ ಡಿಪ್ಲೋಮಾ ಹಾಗೂ ಇಂಟಿಗ್ರೇಟೆಡ್ ಬಿ.ಇ ಪ್ರೋಗ್ರಾಂ ಕೋರ್ಸ್ ಗಳ ಪ್ರವೇಶಾತಿಗಾಗಿ 10ನೇ ತರಗತಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಲಭ್ಯವಿರುವ ಕೋರ್ಸ್ ಗಳು
ಬಿ.ಆ ಪ್ರೋಗ್ರಾಂ ಕೋರ್ಸ್
ಇಂಟಿಗ್ರೆಟೆಡ್ ಬಿ.ಇ ಇನ್ ಅಡ್ವಾನ್ಸ್ಡ್ ಮ್ಯಾನಿಫಾಕ್ಚರಿಂಗ್, ಇಂಟಿಗ್ರೆಟೆಡ್ ಬಿ.ಇ ಇನ್ ಅಡ್ವಾನ್ಸ್ಡ್ ಮೆಕಟ್ರಾನಿಕ್ಸ್,
ಇಂಟಿಗ್ರೆಟೆಡ್ ಬಿ.ಇ ಇನ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮಷಿನ್ ಲರ್ನಿಂಗ್.
ಡಿಪ್ಲೋಮಾ ಕೋರ್ಸ್ ಗಳು
ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್‌ನಲ್ಲಿ (ಡಿ.ಟಿ.ಡಿ.ಎಂ), ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ (ಡಿ.ಎಂ.ಸಿ.ಎಚ್), ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಡಿ.ಇ.ಇ.ಇ),
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿ ಡಿಪ್ಲೊಮಾ (ಡಿ.ಎ.ಐ ಮತ್ತು ಎಂ.ಎಲ್)
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಜಿಟಿಟಿಸಿ ಕೇಂದ್ರದ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ದಲ್ಲಿ ಮೇ 15 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹಾಗೇಯೇ ವಿಶೇಷವಾಗಿ ದ್ವಿತೀಯ ಪಿಯುಸಿ(ವಿಜ್ಞಾನ) ಹಾಗೂ ಐ.ಟಿ.ಐ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ ವರ್ಷದ ಜಿ.ಟಿ.ಟಿ.ಸಿ ಡಿಪ್ಲೋಮಾಗೆ ದಾಖಲಾತಿ ಪಡೆಯಬಹುದು. ಪಠ್ಯಕ್ರಮವು ಶೇಕಡಾ 70 ರಷ್ಟು ಪ್ರಾಯೋಗಿಕ ಹಾಗೂ 30 ರಷ್ಟು ಸಿದ್ಧಾಂತವನ್ನು ಒಳಗೊಂಡಿರುತ್ತದೆ.
ಜಿ.ಟಿ.ಟಿ.ಸಿ ಯು ಶಿಕ್ಷಣ ಕ್ಷೇತ್ರದಲ್ಲಿ ಕೈಗಾರಿಕ ಆಧಾರಿತ ಪಠ್ಯಕ್ರಮ, ನವೀನ ಯಂತ್ರೋಪಕರಣಗಳ ತರಬೇತಿ, ಕೈಗಾರಿಕ ತರಬೇತಿ (ಇಂಟರ್ನ್ ಶಿಪ್), ಜಾಗತಿಕ ಪ್ರಮಾಣೀಕರಣ ಹಾಗೂ ಶೇಕಡಾ 100ರಷ್ಟು ಉದ್ಯೋಗ ಸಹಾಯವನ್ನು ಒದಗಿಸಲಾಗುತ್ತದೆ.
ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿರುವುದರಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಜರ್ಮನ್ ಮತ್ತು ಜಪಾನೀಸ್ ಭಾಷೆಯನ್ನು ಕೂಡ ಕಲಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 080 26607666/80507582240/8123866007/ 96862668737/9980956422 ಸಂಪರ್ಕಿಸಿ ಹಾಗೂ ಜಿ.ಟಿ.ಟಿ.ಸಿ ಯ ಅಧಿಕೃತ ಜಾಲತಾಣ gttc.karnataka.gov.in ಮತ್ತು ಇಮೇಲ್ ವಿಳಾಸ gttcdevanahalli@gmail.com ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಟಿಟಿಸಿ ದೇವನಹಳ್ಳಿಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.