ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯಬೇಕು: ಡಾ. ಯತಿಂದ್ರ ಸಿದ್ದರಾಮಯ್ಯ
ವಿಜಯ ದರ್ಪಣ ನ್ಯೂಸ್….
ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯಬೇಕು: ಡಾ. ಯತಿಂದ್ರ ಸಿದ್ದರಾಮಯ್ಯ
ತಾಂಡವಪುರ : ಜನರ ಭಾವನೆಗಳಿಗೆ ನಂಬಿಕೆಗಳಿಗೆ ತಕ್ಕಂತೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದರೆ ಜನತೆಯ ಶಾಂತಿ ನೆಮ್ಮದಿಯ ಕೇಂದ್ರವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯನವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಗುಡು ಮಾದನಹಳ್ಳಿ ವಸುಂಡಿ ಗ್ರಾಮದಲ್ಲಿ ಗ್ರಾಮಸ್ಥರು ಏರ್ಪಡಿಸಿದ್ದ ಸಿದ್ದಪ್ಪಾಜಿ ಕಂಡಾಯ ಮಹೋತ್ಸವ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಬಳಿಕ ಮಾತನಾಡಿದ ಡಾ. ಯತೀಂದ್ರ ಸಿದ್ರಾಮಯ್ಯನವರು ಜನರ ನಂಬಿಕೆ ಅವರ ಭಾವನೆಗಳಿಗೆ ತಕ್ಕಂತೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಜನರ ಶಾಂತಿ ನೆಮ್ಮದಿ ಭಕ್ತಿ ಭಾವದ ಕೇಂದ್ರಗಳಾಗಲಿವೆ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ನನ್ನನ್ನು ಕರೆದು ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಟ್ಟ ಗ್ರಾಮಸ್ಥರಿಗೆ ನಾವು ಆಭಾರಿಯಾಗಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೂಡ ಮಾಜಿ ಅಧ್ಯಕ್ಷರು ಕೆ ಮರಿಗೌಡ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುಳಾ ಮಂಜುನಾಥ್ ಮೈಸೂರು ಜಿಲ್ಲಾ ಗ್ರಾಮಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ. ಬಿ ಜೆ ವಿಜಯ್ ಕುಮಾರ್ ಕಡಕೋಳ ನಾರಾಯಣ, ತಾಲೂಕು ಪಂಚಾಯತಿ ಸ್ಥಾಯಿ ಸದಸ್ಯ ಮುದ್ದು ರಾಮೇಗೌಡ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲ ಪುರ ನಾಗೇಂದ್ರ ,ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್ ಉತ್ತನಹಳ್ಳಿ ಶಿವಣ್ಣ , ಕಾಂಗ್ರೆಸ್ ಮುಖಂಡ ಸುರೇಶ್ ಬಾಬು ,ಮರೆಸೆ ಸಿದ್ದನಾಯ್ಕ ತಾಂಡವಪುರದ ಎನ್ ಚಂದ್ರು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.
&&&&&&&&&&&&&&&&&&&&&&&&
ಭಕ್ತ ಕನಕದಾಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ಸ್ಥಾಪನೆ ಮಾಡಿ ಪೂಜೆ ಮಾಡಿದರೆ ಸಾಲದು ಅವರು ನಡೆದು ಬಂದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು ಆಗ ಮಾತ್ರ ಪ್ರತಿಮೆ ಸ್ಥಾಪನೆ ಮಾಡಿದ್ದಕ್ಕೂ ಸಾರ್ಥಕ ವಿಧಾನಪರಿಷತ್ ಸದಸ್ಯ . ಯತಿಂದ್ರ ಸಿದ್ದರಾಮಯ್ಯ
ತಾಂಡವಪುರ ಮೇ 10 ಶ್ರೀ ಭಕ್ತ ಕನಕದಾಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಸ್ಥಾಪನೆ ಮಾಡಿ ಪೂಜೆ ಮಾಡಿದರೆ ಸಾಲದು ಅವರ ತತ್ವ ಸಿದ್ಧಾಂತ ಅವರು ನಡೆದು ಬಂದ ದಾರಿಯಲ್ಲಿ ನಾವು ಕೂಡ ನಡೆದಾಗ ಮಾತ್ರ ಅವರ ಪ್ರತಿಮೆ ಸ್ಥಾಪನೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರು ಅಭಿಪ್ರಾಯಪಟ್ಟರು.
ಅವರು ಮೈಸೂರು ಜಿಲ್ಲೆ ದಡದಹಳ್ಳಿ ಗ್ರಾಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು ಹಾಗೂ ಸಂಗೊಳ್ಳಿ ರಾಯಣ್ಣ ಶ್ರೀ ಭಕ್ತ ಕನಕದಾಸರ ಯುವಕರ ಸಂಘ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಕ್ತ ಕನಕದಾಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಪ್ರತಿಮೆ ಸ್ಥಾಪನೆ, ರಾಯಣ್ಣ ಟ್ರಸ್ಟ್ ಉದ್ಘಾಟನೆ ಹಾಗೂ
ಭೂಮಿ ಪೂಜೆ ಹಾಗೂ ಕಾರ್ಯಕ್ರಮದ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಯತೀಂದ್ರ ಸಿದ್ರಾಮಯ್ಯನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು ಎಂದು ಪಟ್ಟ ಭದ್ರ ಹಿತಾಸಕ್ತಿಗಳು ಒಂದಾಗಿ ಹಲವಾರು ರೀತಿಯ ತೊಂದರೆಗಳನ್ನು ನೀಡಿದರು ಸಹ ನಮ್ಮ ತಂದೆಯವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು ಸಹಕಾರ ನೀಡಿದ ರಾಜರ ಜನತೆಯ ಬೆಂಬಲ ಇರುವ ತನಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏನು ಮಾಡಲು ಸಾಧ್ಯವಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರು ರಾಜ್ಯದ ಮತದಾರರು ನಿಮ್ಮ ಬೆಂಬಲ ಸಹಕಾರ ಇರುವ ವರವಿಗೂ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.
ಅಲ್ಲದೆ ನಿಮ್ಮ ಗ್ರಾಮದ ಮೂಲಭೂತ ಸೌಲಭ್ಯಗಳಾದ ಒಳ ಚರಂಡಿ ರಸ್ತೆ ಸೇರಿದಂತೆ ಇನ್ನು ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿಗೆ ಮನವಿ ಮಾಡಿದ್ದೀರಿ ನಿಮ್ಮ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ನಿಮ್ಮ ಗ್ರಾಮದ ಅಭಿವೃದ್ಧಿಗೆ ನಾನು ಸಹ ಹೆಚ್ಚು ಒತ್ತುಕೊಟ್ಟು ಸಹಕಾರ ನೀಡುತ್ತೇನೆ ಎಂದು ವಿಧಾನಪರಿಷ ಸದಸ್ಯ ಡಾ. ಯತೀಂದ್ರ ಸಿದ್ರಾಮಯ್ಯನವರು ಭರವಸೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು ರವರು ಮಾತನಾಡಿ ಗ್ರಾಮದಲ್ಲಿ ಶ್ರೀ ಭಕ್ತ ಕನಕದಾಸರು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪನೆ ಮಾಡಲು ಗ್ರಾಮಸ್ಥರು ಮುಂದಾಗಿರುವುದು ನಾವೆಲ್ಲರೂ ಎಮ್ಮೆ ಪಡುವ ವಿಷಯ ಗ್ರಾಮದ ಗ್ರಾಮಸ್ಥರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟಿತರಾಗಿ ಇದೇ ರೀತಿ ಮುಂದೆ ಸಾಗಿ ಪ್ರತಿಮೆ ಸ್ಥಾಪನೆ ಮಾಡಿ ಇದರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆದು ಉದ್ಘಾಟನೆ ಮಾಡಿಸೋಣ ಇದಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಗ್ರಾಮಸ್ಥರಿಗೆ ತಿಳಿಸಿದರು ಇದೇ ವೇಳೆ ಗ್ರಾಮದ ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಮರಿಗೌಡ ,ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ನಗರ ಪಾಲಿಕೆ ಮಾಜಿ ಸದಸ್ಯ ಜೆ ಗೋಪಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಾದೇಗೌಡ ಮೈಮುಲ್ ನಿರ್ದೇಶಕ ಗುರುಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಅರುಣ್ ಕುಮಾರ್ ಪಟೇಲ್, ಜವರೇಗೌಡ ಕೋಟೆಹುಂಡಿ ಸಿ ಮಹಾದೇವ ಜಯಪುರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಮಹದೇವು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಡಕೋಳದ ಶ್ರೀಕಂಠ ತೊಂಡೆಗೌಡ ಸಿದ್ದರಾಮಯ್ಯಗೌಡ ,ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಡಿ ಸಾಲುಂಡಿ ಬಸಪ್ಪ ಮಾಜಿ ಸದಸ್ಯ ಹೆಬ್ಬಾಳೇಗೌಡ ಸಿದ್ದರಾಜು ಸಿಂಧುವಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಡಾಕ್ಟರ್ ಎಚ್ ಸಿ ಮಹದೇವಪ್ಪನವರ ಅಭಿಮಾನಿ ಬಳಗದ ರಾಜ್ಪಾಯ ಉಫಾಧ್ಯಕ್ಷ ಕಡಕೋಳ ಭರತ್ ರಾಜ್, ಸಂಘದ ಗೌರವ ಅಧ್ಯಕ್ಷ ಗ್ರಾಮದ ಮಹದೇವು ಸಂಘದ ಅಧ್ಯಕ್ಷ ರವಿಕುಮಾರ್ ಉಪಾಧ್ಯಕ್ಷರಾದ ಪವನ್ ಕಾರ್ಯಧ್ಯಕ್ಷ ಮಹದೇವಸ್ವಾಮಿ ಡಿಎಸ್ ಕಿರಣ್ ಕಾರ್ಯದರ್ಶಿ ಧನರಾಜ್ ಸಹ ಕಾರ್ಯದರ್ಶಿ ಮನು ಖಜಾಂಚಿ ಸಿ ಮಹಾದೇವ ಮಾಧ್ಯಮ ಸಲಹೆಗಾರ ಎನ್ ಮಹದೇವ ಕೆ ಎಸ್ ಹುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್ ನಂಜಯ್ಯ ಮೈಸೂರು ಜಿಲ್ಲಾ ಹಿರಿಯ ಕಾಂಗ್ರೆಸ್ ಪಕ್ಷದ ಮುಖಂಡ ಸ ಕಳ್ಳಿ ಬಸವರಾಜು ಮುಖಂಡರಾದ ಕೆಂಪಣ್ಣ ಶಿವು ಬಿರಯ್ಯ ಮಹಾದೇವ ಹಾಗೂ ಸಂಘದ ನಿರ್ದೇಶಕರುಗಳು ಗ್ರಾಮಸ್ಥರು ಗ್ರಾಮದ ಯಜಮಾನರುಗಳು ಯುವಕ ಸಂಘದ ಮುಖಂಡರುಗಳು ಭಾಗಿಯಾಗಿದ್ದರು