ಕಬ್ಬಿನ ದರವನ್ನು ಪುನರ್ಪರಿಶೀಲಿಸಲು ರಾಜ್ಯ ಕಬ್ಬು ಬೆಳೆಗಾರರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ
ವಿಜಯ ದರ್ಪಣ ನ್ಯೂಸ್…
ಕಬ್ಬಿನ ದರವನ್ನು ಪುನರ್ಪರಿಶೀಲಿಸಲು ರಾಜ್ಯ ಕಬ್ಬು ಬೆಳೆಗಾರರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ
ತಾಂಡವಪುರ ಜೂನ್ 10 ಕಬ್ಬಿನ ಎಫ್ಆರ್‌ಪಿ ದರವನ್ನು ಪುನರ್ಪರಿಶೀಲಿಸಲು ರಾಜ್ಯ ಕಬ್ಬು ಬೆಳೆಗಾರರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ತಾಲ್ಲೂಕು ದಂಡಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜು ರವರ ನೇತೃತ್ವದಲ್ಲಿ ರೈತರ ಹಕ್ಕು ಒತ್ತಾಯ ಮನವಿ ಪತ್ರವನ್ನು ಸಲ್ಲಿಸಿದರು.
ನಂತರ ಪ್ರತಿಭಟನೆಯಲ್ಲಿ ಮಾತನಾಡಿದ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ರವರು ಟನ್ ಕಬ್ಬಿ ನ 10.25 ಇಳುವರಿಗೆ ಕೇಂದ್ರ ಸರ್ಕಾರ 2025 26ರ ಸಾಲಿಗೆ 3550 ನಿಗದಿ ಮಾಡಿದ್ದು ಇದು ಅವೈಜ್ಞಾನಿಕವಾಗಿದ್ದು ಕೇವಲ ಪ್ರತಿ ಟನ್ಗೆ 150 ಮಾತ್ರ ಹೆಚ್ಚುವರಿ ಮಾಡಿದ್ದು ಉತ್ಪಾದನಾ ವೆಚ್ಚ ಹಾಗೂ ಕಟಾವು ಕೂಲಿ ಸಾಗಾಣಿಕೆ ರಸಗೊಬ್ಬರ ಕೂಲಿ ಕಾರ್ಮಿಕರ ವೆಚ್ಚ ಎಲ್ಲವೂ ಹೆಚ್ಚಳವಾಗಿದ್ದು ಪ್ರತಿ ಟೆನ್ ಕಬ್ಬಿಗೆ 150ರೂರಂತೆ ಒಂದು ಕೆಜಿ ಕಬ್ಬಿಗೆ ಕೇವಲ 15 ಪೈಸೆ ಮಾತ್ರ ಜಾಸ್ತಿ ಮಾಡಿ ರೈತರಿಗೆ ಕೇಂದ್ರ ಸರ್ಕಾರ ಬೆಲೆ ನಿಗದಿಯಲ್ಲಿ ಸಿಎಸಿಪಿ ವರದಿಯಂತೆ 4,500 ನಿಗದಿ ಮಾಡಬೇಕಾಗಿತ್ತು. ಆದರೆ ಬಂಡವಾಳಶಾಹಿಗಳು ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ಕೇವಲ ಪ್ರತಿ ಟನ್ ಕಬ್ಬಿಗೆ 150 ರೂಪಾಯಿ ಮಾತ್ರ ಹೆಚ್ಚುವರಿ ಮಾಡಿದ್ದು ಇದನ್ನು ತಕ್ಷಣ ಮರು ಪರೀಕ್ಷೆಯಲ್ಲಿ ಮಾಡಬೇಕೆಂದು ಒತ್ತಾಯಿಸುತ್ತೇವೆ.
ರಾಜ್ಯ ಸರ್ಕಾರ ಈ ಒಂದು ಬೆಲೆಯನ್ನು ಒಪ್ಪದೆ ಪುನರ್ ಪರಿಶೀಲನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ರಾಜ್ಯದಲ್ಲಿ ಚುನಾಯಿತ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಎಫ್ ಆರ್ ಪಿ ದರವನ್ನು ಪುನರ್ ಪರಿಶೀಲನೆಗೆ ಆಗ್ರಹಿಸಬೇಕು. ಸಕ್ಕರೆ ಕಾರ್ಖಾನೆಗಳ ಮುಂದೆ ಎಪಿಎಂಸಿ ಹಾಗೂ ಸಹಕಾರ ಇಲಾಖೆಯ ಮುಖಾಂತರ ತೂಕದ ಯಂತ್ರಗಳನ್ನು ಅಳವಡಿಸಬೇಕು ,ತೂಕವಾದ ತಕ್ಷಣ ರೈತರಿಗೆ ಡಿಜಿಟಲ್ ಎಸ್ಎಂಎಸ್ ಸಂದಾಯವಾಗುವಂತೆ ಕ್ರಮ ಕೈಗೊಳ್ಳಬೇಕು.
ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷಿಯ ಒಪ್ಪಂದ ಪತ್ರ ಜಾರಿಯಾಗಬೇಕು ಇಳುವರಿಯಲ್ಲಿನ ಮೋಸವನ್ನು ತಪ್ಪಿಸಲು ಸ್ಥಳೀಯ ರೈತ ಮುಖಂಡರು ಹಾಗೂ ತಜ್ಞರ ಸಮಿತಿಯನ್ನು ರಚಿಸಬೇಕು ಸಕ್ಕರೆ ಕಾರ್ಖಾನೆಗಳ ಆದಾಯ ಪತ್ರವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಶೀಲಿಸಿ, ಹೆಚ್ಚುವರಿ ಲಾಭವನ್ನು ರೈತರಿಗೆ ಹಂಚಲು ಕ್ರಮ ಕೈಗೊಳ್ಳಬೇಕು ಕಟಾವು ಸಾಗಾಣಿಕೆಯನ್ನು ಸಕ್ಕರೆ ಕಾರ್ಖಾನೆಗಳು ಬರಿಸುವಂತೆ ಕ್ರಮ ಕೈಗೊಳ್ಳಬೇಕು ರಾಜ್ಯ ಸರ್ಕಾರ ತಕ್ಷಣ ಕಬ್ಬು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಕಳೆದ ಸಾಲಿನ 950 ಕೋಟಿ ಬಾಕಿಯನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು.
ಸರ್ಕಾರಿ ಕೆರೆಕಟ್ಟೆಗಳ ಒತ್ತುವರಿ ಆಗಿರುವುದನ್ನು ತೆರವುಗೊಳಿಸಲು ತಾಲೂಕಿನ ಹುರ ಏತ ನೀರಾವರಿ ಯೋಜನೆಯನ್ನು ತಕ್ಷಣ ಹುಲ್ಲಳ್ಳಿ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು ತೋಟಗಾರಿಕೆ ಕೃಷಿ ಇಲಾಖೆಯಲ್ಲಿ ರೈತರ ಕೆಲಸಗಳು ಆಗುತ್ತಿಲ್ಲ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇದು ನಿಲ್ಲಬೇಕು ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು ಈ ಮೇಲ್ಕಂಡ ವಿಚಾರಗಳ ಬಗ್ಗೆ ರೈತ ಮುಖಂಡರ ಸಭೆಯನ್ನು ತಾಸಿಲ್ದಾರ್ ರವರು ಕರೆದು ರೈತರ ಸಮಸ್ಯೆ ಆಲಿಸಬೇಕು ಇಲ್ಲವಾದರೆ ರೈತರ ಜೊತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ತಾಸಿಲ್ದಾರ್ ಅವರಿಗೆ ಒತ್ತಾಯ ಪತ್ರ ಸಲ್ಲಿಸಿ ಎಚ್ಚರಿಸಲಾಯಿತು ಇಂದಿನ ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಕೆರೆ ಹುಂಡಿ ರಾಜಣ್ಣ ರಾಜ್ಯ ಸಂಚಾಲಕ ಹನುಮಯ್ಯ ಮೈಸೂರು ಜಿಲ್ಲಾಧ್ಯಕ್ಷ ಒಳಗೆರೆ ಗಣೇಶ್ ಚಾಮರಾಜನಗರ ಜಿಲ್ಲಾಧ್ಯಕ್ಷ ಸಾಲಿನ ನಾಗರಾಜ್ ಮಹೇಂದ್ರ ಅಲತ್ತೂರು ಪುಟ್ಟಸ್ವಾಮಿ ಮುದ್ದಳ್ಳಿ ಮಧು ಶಿವಣ್ಣ ನಾಗಣ್ಣ ದೇವನೂರು ನಾಗೇಂದ್ರ ಹೊಸಪುರ ಮಾದಪ್ಪ ಅಲತ್ತೂರು ಪುಟ್ಟಸ್ವಾಮಿ ನಂದಿಗುಂದಾಪುರ ಸಿದ್ದಪ್ಪ ದೇವಿರಮ್ಮನಹಳ್ಳಿ ಪ್ರಭುಸ್ವಾಮಿ ಸಿದ್ದಬಸಪ್ಪ ಅಂಡುವಿನಹಳ್ಳಿ ಅಂಗಡಿ ಜಗದೀಶ್ ಮಹೇಶ್ ನಾಗೇಂದ್ರ ದೇವಣ್ಣ ಒಳಗೆರೆ ಮಹದೇವಪ್ಪ ಮದನ್ ಮಹದೇವಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು