ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸೀಕಲ್ ರಾಮಚಂದ್ರಗೌಡ
ವಿಜಯ ದರ್ಪಣ ನ್ಯೂಸ್….
ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸೀಕಲ್ ರಾಮಚಂದ್ರಗೌಡ
ಶಿಡ್ಲಘಟ್ಟ : ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸಂದೀಪ್ ರೆಡ್ಡಿ ಆಯ್ಕೆ ವಿಷಯವಾಗಿ ರಾಜ್ಯ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ನಿರೀಕ್ಷೆಯಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರ ಗೌಡ ಅವರಿಗೆ ಒಲಿದಿದೆ ಕಳೆದ ಒಂದು ವರ್ಷದಿಂದಲೂ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸೀಕಲ್ ರಾಮಚಂದ್ರಗೌಡ ಅವರ ಹೆಸರು ಕೇಳಿ ಬರುತ್ತಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಗೌಡರು ಬಿಜೆಪಿ ಅಭ್ಯರ್ಥಿಯಾಗಿದ್ದರು ಆ ನಂತರವೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿವಾಗಿದ್ದಾರೆ.
ಕಳೆದ ವರ್ಷವೇ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಸಮಿತಿಗೆ ಐವರ ಹೆಸರು ಶಿಫಾರಸ್ಸಾಗಿದ್ದವು ಅದರಲ್ಲಿ ಸೀಕಲ್ ರಾಮಚಂದ್ರಗೌಡ ಅವರ ಸಹ ಹೆಸರೂ ಇತ್ತು ಡಾ.ಕೆ.ಸುಧಾಕರ್ ಅವರು ರಾಮಚಂದ್ರಗೌಡ ಹೆಸರನ್ನು ಈ ಹಿಂದೆ ಶಿಫಾರಸು ಮಾಡಿದ್ದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಅಧ್ಯಕ್ಷರ ಬದಲಾವಣೆಗೆ ಬಿಜೆಪಿ ಪಾಳಯ ಮುಂದಾಗಲಿಲ್ಲ ಟಿ.ರಾಮಲಿಂಗಪ್ಪ ಅವರನ್ನೆ ಮುಂದುವರಿಸಿತು.
ಲೋಕಸಭೆ ಚುನಾವಣೆಯ ತರುವಾಯ ಮತ್ತೆ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆಯಿತು,ಆಗಲೂ ಸೀಕಲ್ ರಾಮಚಂದ್ರಗೌಡ ಅವರ ಹೆಸರು ಮುಂಚೂಣಿಗೆ ಬಂದಿತು. ಗೌಡರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನುವ ನಡುವೆಯೇ ಯುವ ಮುಖಂಡ ಸಂದೀಪ್ ರೆಡ್ಡಿ ಅವರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಯಿತು,
2025ರ ಜ-29ರಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಸಂದೀಪ್ ರೆಡ್ಡಿ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ನೇಮಕ ಮಾಡಿದರು.
ಡಾ.ಕೆ.ಸುಧಾಕರ್, ಅಸಮಾಧಾನದ ಹಿನ್ನೆಲೆಯಲ್ಲಿ ಫೆ-10ರಂದು ವರಿಷ್ಠರು ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ತಡೆ ನೀಡಿದ್ದರು, ನಂತರ ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ನಡೆದಿರಲಿಲ್ಲ. ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ ಸಮಯದಲ್ಲಿ ಸೀಕಲ್ ರಾಮಚಂದ್ರಗೌಡ ಅವರನ್ನು ಪಕ್ಷದ ಅಧ್ಯಕ್ಷ ವಿಜಯೇಂದ್ರ ಸಹ ಕರೆಯಿಸಿ ಮಾತುಕತೆ ನಡೆಸಿದ್ದರು.
ಬಲಿಜ ಸಮುದಾಯದ ರಾಮಲಿಂಗಪ್ಪ ಆರು ವರ್ಷ ಅಧ್ಯಕ್ಷರಾಗಿದ್ದಾರೆ ಇದಕ್ಕೂ ಮುನ್ನ ಬಲಿಜ ಸಮುದಾಯದವರೇ ಆದ ಚಿಕ್ಕಬಳ್ಳಾಪುರದ ಮುಖಂಡ ಡಾ.ಜಿ. ವಿ.ಮಂಜುನಾಥ್ ಅಧ್ಯಕ್ಷರಾಗಿದ್ದರು.
ಗೌರಿಬಿದನೂರಿನ ಜ್ಯೋತಿರೆಡ್ಡಿ, ರವಿನಾರಾಯಣರೆಡ್ಡಿ, ಚಿಂತಾಮಣಿಯ ಸತ್ಯನಾರಾಯಣ್ ಮಹೇಶ್ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಆದರೆ ಶಿಡ್ಲಘಟ್ಟ ತಾಲ್ಲೂಕಿಗೆ ಬಿಜೆಪಿ ಮುಖಂಡರು ಜಿಲ್ಲಾ ಅಧ್ಯಕ್ಷ ಸ್ಥಾನ
ಪಡೆದಿರಲಿಲ್ಲ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ದೃಷ್ಟಿಯಿಂದ ಜಿಲ್ಲೆಯಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎನ್ನುವ ಮಾತುಗಳು ಪಕ್ಷದಲ್ಲಿವೆ.
ಸಾಮಾನ್ಯವಾಗಿ ಜಿಲ್ಲಾ ಅಧ್ಯಕ್ಷರಾದವರು ಕಾರ್ಯಕ್ರಮಗಳು, ಸಮಾವೇಶ, ಸಂಘಟನೆ ಹೀಗೆ ನಾನಾ ಕಾರಣಕ್ಕೆ ವೆಚ್ಚಗಳನ್ನು ಮಾಡಬೇಕಾಗುತ್ತದೆ ಸಂಘಟನೆಗಾಗಿ ಖರ್ಚು ವೆಚ್ಚ ಮಾಡುವವರಲ್ಲಿ ಸೀಕಲ್ ರಾಮಚಂದ್ರಗೌಡ ಪ್ರಮುಖವಾಗಿದ್ದಾರೆ ಈ ಎಲ್ಲಾ ದೃಷ್ಟಿಯಿಂದಲೂ ಅವರಿಗೆ ಅಧ್ಯಕ್ಷ ಸ್ಥಾನ ದೊರೆತಿವೆ ಎನ್ನುತ್ತವೆ ಬಿಜೆಪಿ ಮೂಲಗಳು.
ಸಂಸದರಾದ ಡಾ.ಕೆ.ಸುಧಾಕರ್ ಹಾಗು ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಅವರ ಒಳ ಜಗಳಗಳ ವಿಕೋಪದಿಂದ
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅದೃಷ್ಟ ಎನ್ನುತ್ತವೆ ಹೆಸರೇಳಲಿಚ್ಚಿಸದ ಉನ್ನತ ರಾಜಕೀಯ ಮೂಲಗಳು , ಮುಂದಿನ ದಿನಗಳಲ್ಲಿ ಈ ಆಯ್ಕೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದುನೋಡಬೇಕಿದೆ ,ಏನೇ ಆದರೂ ಸೀಕಲ್ ರಾಮಚಂದ್ರಗೌಡ ಅವರು ರಾಜ್ಯ ಮಟ್ಟದ ನಾಯಕರೊಡನೆ ಉತ್ತಮ ಒಡನಾಟ ಹಾಗೂ ಪಕ್ಷ ಸಂಘಟನೆಯಲ್ಲಿ ಈಗಾಗಲೇ ಅವರು ಛಾಪು ಮೂಡಿಸಿದ್ದಾರೆ. ಈ ಹುದ್ದೆಯನ್ನು ನಿಭಾಯಿಸುವಲ್ಲಿ ಯಶಸ್ಸು ಸಾಧಿಸಲಿದ್ದಾರೆ ಎಂದು ಅವರು ಒಡನಾಡಿಗಳ ಮಾತು.