--Ads--

ಕಡಕೋಳ ದಿ ಯೂನಿಯನ್ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ ಆರ್ ನಾರಾಯಣ್ ಉಪಾಧ್ಯಕ್ಷರಾಗಿ ಪೂರ್ಣಿಮಾ ಆಯ್ಕೆ

On: June 16, 2025 11:40 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕಡಕೋಳ ದಿ ಯೂನಿಯನ್ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ ಆರ್ ನಾರಾಯಣ್ ಉಪಾಧ್ಯಕ್ಷರಾಗಿ ಪೂರ್ಣಿಮಾ ಆಯ್ಕೆ

ತಾಂಡವಪುರ ಜೂನ್ 16 ಮೈಸೂರು ತಾಲೂಕು ತಾಂಡವಪುರ ಸಮೀಪವಿರುವ ಕಡಕೋಳ ಗ್ರಾಮದ ದಿ ಯೂನಿಯನ್ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ ಆರ್ ನಾರಾಯಣ್ ಉಪಾಧ್ಯಕ್ಷರಾಗಿ ಪೂರ್ಣಿಮಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಳಿಕ ಮಾತಾಡಿದ ನೂತನ ಅಧ್ಯಕ್ಷ ಕೆ ಆರ್ ನಾರಾಯಣ್ ರವರು ನಮ್ಮ ಬ್ಯಾಂಕಿಗೆ ಒಳಪಡುವ ಎಲ್ಲಾ ಗ್ರಾಮಗಳ ರೈತರ ಸಹಕಾರದೊಂದಿಗೆ ಹಾಗೂ ನಮ್ಮ ಸದಸ್ಯರ ಸಹಕಾರದೊಂದಿಗೆ ನಮ್ಮ ಸಂಘದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮೈಸೂರು ಜಿಲ್ಲೆಗೆ ಮಾದರಿ ಸಂಘವಾಗಿಸಲು ದುಡಿಯುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಟೇಲ್ ಜವರೇಗೌಡ ಹಾಗೂ ಕಾಳಿ ಬೀರೇಶ್ವರ ಟ್ರಸ್ಟಿನ ಅಧ್ಯಕ್ಷರು ಹಾಗೂ ಬಿಕೆಟಿ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ಬಿ ನಾಗರಾಜ್ ರವರು ಬ್ಯಾಂಕಿನ ಅಭಿವೃದ್ಧಿಗೆ ಸಂಘದ ಎಲ್ಲಾ ಸದಸ್ಯರ ಸಹಕಾರ ಪಡೆದುಕೊಂಡು ಹಾಗೂ ರೈತರ ಸಹಕಾರದೊಂದಿಗೆ ನಮ್ಮ ಕಡಕೋಳ ದಿ ಯೂನಿಯನ್ ರೈತರ ಸಹಕಾರ ಸಂಘವನ್ನು ಇನ್ನು ಉನ್ನತಮಠಕ್ಕೆ ಬೆಳೆಸುವ ಜೊತೆಗೆ ನಮ್ಮ ಸಂಘವನ್ನು ಜಿಲ್ಲೆಗೆ ಮಾದರಿಸಂಘವನಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮವಹಿಸೋಣ ಎಂದರು.

ಈ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷ ಕೆ ಆರ್ ನಾರಾಯಣ್ ಉಪಾಧ್ಯಕ್ಷೆ ಪೂರ್ಣಿಮಾ ನಿರ್ದೇಶಕರಾದ ಎಸ್ ನಟರಾಜು ಕಪನಿಗೌಡ ಎಲ್ಲ ನಾಯಕ ಶಂಭುಲಿಂಗಪ್ಪ, ಪುಟ್ಟ ಮಾದ ಶೆಟ್ಟಿ ,ಕೆಂಪಮ್ಮ ಬೀರಯ್ಯ ರಾಜೇಶ್ ರಾಮಲಿಂಗ ವಿಶ್ವನಾಥ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಟೇಲ್ ಜವರೇಗೌಡ ಕಾಳಿ ಬೀರೇಶ್ವರ ಟ್ರಸ್ಟಿನ ಅಧ್ಯಕ್ಷ ಬಿ ನಾಗರಾಜು 33 ಹಳ್ಳಿ ಯಜಮಾನರಾದ ಸಿದ್ದರಾಮೇಗೌಡ ಗ್ರಾಮದ ಯಜಮಾನರಾದ ಗೌಡಿಕೆ ಮಹೇಶ್ ಕೆ ಆರ್ ಮಹಾದೇವ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಮ್ಮ ತೊಂಡೆಗೌಡ ಮಾಜಿ ಸದಸ್ಯ ಕಡಕೋಳ ಶ್ರೀಕಂಠ ತೊಂಡೆಗೌಡ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ಮುಖಂಡರಾದ ರವಿ ಗೌಡ ಕಡಕೋಳ ಕುಮಾರ ಸ್ವಾಮಿ ಮಾದೇಶ ಮಹಾದೇವ ನಂಜಪ್ಪ ಡೈರಿ ಅಧ್ಯಕ್ಷ ಬಿರೇಶ ಕೋಚನಹಳ್ಳಿ ಮಹಾದೇವ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಶಿವಕುಮಾರ್ ಕೆಟಿ ಶಿವಣ್ಣ ಶಿವಲಿಂಗ ನಾರಾಯಣ್ ನಾಯ್ಕ ಮಾಲೆ ಗೌಡ ಜವರಪ್ಪ ಸೇರಿದಂತೆ ಬ್ಯಾಂಕಿಗೆ ಸೇರಿದ ಎಲ್ಲ ಗ್ರಾಮಗಳ ಸದಸ್ಯರು ಬ್ಯಾಂಕಿನ ಕಾರ್ಯದರ್ಶಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now