ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರಿಂದ ಯೋಗಾಸನ

ವಿಜಯ ದರ್ಪಣ ನ್ಯೂಸ್…

 ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರಿಂದ ಯೋಗಾಸನ

ದೇವನಹಳ್ಳಿ,ಬೆಂ.ಗ್ರಾ.ಜಿಲ್ಲೆ, ಜೂನ್. 21:”ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಟೌನ್ ನಲ್ಲಿರುವ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಸಾಮೂಹಿಕವಾಗಿ ಮೂವತ್ತಕ್ಕೂ ಅಧಿಕ ಯೋಗಾಸನಗಳನ್ನು ಮಾಡುವ ಮೂಲಕ ಆಚರಿಸಲಾಯಿತು.

ಜಿಲ್ಲಾಧಿಕಾರಿಗಳಿಂದ ಯೋಗಾಸನ:

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಭಾಗಿಯಾಗಿ ವಿವಿಧ ಭಂಗಿಯ ಯೋಗಾಸನ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳು ಡಾ. ಎನ್. ಶಾಂತಲಾ, ನೂಡಲ್ ಅಧಿಕಾರಿ ವಿಜಯಲಕ್ಷ್ಮೀ, ಹಿರಿಯ ವೈದ್ಯಾಧಿಕಾರಿ ನಿರ್ಮಲಾ ವಸ್ತ್ರದ, ಸಹಾಯಕ ಆಡಳಿತಾಧಿಕಾರಿ ಎಚ್.ಎಂ ವಿಶ್ವನಾಥ್, ವೈದ್ಯಾಧಿಕಾರಿ ಡಾ. ಖುದ್ಸಿಯ ತಸ್ನೀಮ್ ಎಸ್.ಎ, ಜಿಲ್ಲೆಯ ಎಲ್ಲ ಆಯುಷ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ವಿವಿಧ ಯೋಗ ಸಂಸ್ಥೆಯ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.