--Ads--

ಮಕ್ಕಳಿಗೆ ವಿಜ್ಞಾನದ ಅರಿವು ಮುಖ್ಯ : ಎಂ. ಸತೀಶ್ ಕುಮಾರ್ 

On: March 2, 2026 2:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಮಕ್ಕಳಿಗೆ ವಿಜ್ಞಾನದ ಅರಿವು ಮುಖ್ಯ : ಎಂ. ಸತೀಶ್ ಕುಮಾರ್

ವಿಜಯಪುರ ದೇವನಹಳ್ಳಿ ತಾಲ್ಲೂಕು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಜವಾಬ್ದಾರಿಯುತ ನಡೆ ಅತ್ಯಂತ ಮುಖ್ಯ ಎಂದು ಪ್ರಗತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸತೀಶ್ ಕುಮಾರ್ ತಿಳಿಸಿದರು.

ಪಟ್ಟಣದ ಪ್ರಗತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮೇಳ ಹಾಗೂ ವಿದ್ಯಾರ್ಥಿಗಳ ಪೋಷಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಪಾಠದ ಜೊತೆ ಸಮಾನ್ಯ ಜ್ಞಾನ ಮತ್ತು ವಿಜ್ಞಾನದ ಅರಿವು ಮುಖ್ಯ ಶಾಲೆಯಲ್ಲಿ ಅಧ್ಯಾಯನ ಮಾಡಿದ್ದನ್ನು ಇಂದು ಪ್ರಾತ್ಯಕ್ಷಿಕೆ ಮೂಲಕ ತೋರ್ಪಡಿಸುತ್ತಿದ್ದಾರೆ. ನಮಗೆ ತಿಳಿಯದ ಎಷ್ಟೋ ವಿಚಾರಗಳನ್ನು ಮಕ್ಕಳು ವಿಜ್ಞಾನ ಮೇಳದಲ್ಲಿ ತಿಳಿಸುತ್ತಿದ್ದಾರೆ ಎಂದರು.

ಪೋಷಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಆಡಳಿತ ಮಂಡಳಿ ಜೊತೆ ಉತ್ತಮ ಬಾಂದವ್ಯ ಬೆಳಸಿಕೊಳ್ಳಬೇಕು ಎಂದರು ಮುಖ್ಯಶಿಕ್ಷಕ ಪ್ರಕಾಶ್ ಮಾತನಾಡಿ, ತಂದೆ, ತಾಯಿ ಜನ್ಮ ನೀಡುತ್ತಾರೆ. ಆದರೆ ಗುರು ಜೀವನದ ದಾರಿಯನ್ನು ತೋರಿಸು ತ್ತಾರೆ. ಇಂದಿನ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ ಎಂದರು

ಈ ಕಾರ್ಯಕ್ರಮದಲ್ಲಿ ಮೊಹಮ್ಮದ್ ತಾಹಿರ್ ಭೂಸ್ಥಿರ ಉಪಗ್ರಹ, ಮೇಘನೆ, ಚೇತನಾ ಜಾಗತಿಕ ತಾಪಮಾನ, ಎನ್ ಯಶವಂತ ಹೈಡ್ರಾಲಿಕ್ ಮಿಜೈಕ್ ಲ್ಯಾಂಚರ್, ಕೃತಿಕಾ, ರೈನ್ ಡಿಟೆಕ್ಟರ್, ಕೀರ್ತನಾ ಸ್ಮಾರ್ಟ್ ಹೋಮ್, ಸಾತ್ವಿಕ್ ಆಧುನಿಕ ನಗರ, ಮೊಹಮ್ಮದ್ ಅಬ್ಬಾಸ್ ಪೈಥಾಗರಸ್, ನಿಪರ್ಘ ಗಾನವಿ ಬಹು ಚಿತ್ರಗಳು, ಚೈತ್ರ, ಜ್ಯಾಮಿತಿಯ ಪಾರ್ವ್ ವಿಜ್ಞಾನ ಪ್ರದರ್ಶನಗಳನ್ನು ನಡೆಸಿಕೊಟ್ಟರು. ಪೋಷಕರು, ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳು ಹಾಜರಿದ್ದರು.

WhatsApp

Join Now

Telegram

Join Now

Instagram

Join Now