--Ads--

ಚಿನ್ನದ ಆಸೆ ತೋರಿಸಿ 20 ಲಕ್ಷ ಹಣ ದೋಚಿದ ದರೋಡೆಕೋರರು 

On: March 5, 2026 3:32 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಚಿನ್ನದ ಆಸೆ ತೋರಿಸಿ 20 ಲಕ್ಷ ಹಣ ದೋಚಿದ ದರೋಡೆಕೋರರು 

ವಿಜಯಪುರ: ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಬಳಿಯ ಖಾಸಗೀ ಲೇಔಟ್ ನಲ್ಲಿ ಆಂಧ್ರ ಮೂಲದ ಇಬ್ಬರು ವ್ಯಕ್ತಿಗಳಿಗೆ ಚಿನ್ನದ ಆಸೆ ತೋರಿಸಿ 20 ಲಕ್ಷ ಎಗರಿಸಿದ ಘಟನೆ ವೆಂಕಟಗಿರಿಕೋಟೆ ಬಳಿ ನಡೆದಿದೆ.

ಕಳೆದ ದಿನಗಳಿಂದ ಚಿನ್ನದ ಬೆಲೆ ದುಬಾರಿಯಾದ ಕಾರಣ ಇಂದು ದರೋಡೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ಬೆನ್ನಲ್ಲೇ ಆಂಧ್ರಪ್ರದೇಶ ಮೂಲದ ವಿಶ್ವಪ್ರಸಾದ್ ರೆಡ್ಡಿ ಎಂಬುವವರಿಗೆ 6 ಮಂದಿ ದರೋಡೆ ಕೋರರು ನಮ್ಮ ಬಳಿಯಿರುವ 4 ಕೆಜಿ ಚಿನ್ನ ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ದರೋಡೆಗೆ ಸಂಚುರೂಪಿಸಿದ್ದರು.

ಚಿನ್ನದ ಆಸೆಗೆ ಬಿದ್ದು ಬೆಂಗಳೂರಿನತ್ತ ಬಂದಿದ್ದ ಇಬ್ಬರು ಆಂಧ್ರ ಮೂಲದವರು ಬೆಂಗಳೂರು ಗ್ರಾಮಾಂತರ ವಿಜಯಪುರ ಬಳಿವಿರುವ ವೆಂಕಟಗಿರಿಕೋಟೆ ಬಳಿಯ ಖಾಸಗೀ ಲೇಔಟ್ ನಲ್ಲಿ ಬಳಿ ಇಬ್ಬರ ತಲೆಗೆ ಹೊಡೆದು 20 ಲಕ್ಷ ದುಡ್ಡಿನೊಂದಿಗೆ ಪರಾರಿಯಾದ ದರೋಡೆ ಕೋರರು.

ಅತ್ತ ಚಿನ್ನವೂ ಇಲ್ಲ.. ಇತ್ತ ಹಣ ಸಹ ಕಳೆದುಕೊಂಡು ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್, ಡಿವೈಎಸ್ಪಿ ಪಾಂಡುರಂಗ, ಸರ್ಕಲ್ ಇನ್ಸೆಕ್ಟರ್ ಪ್ರಶಾಂತ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

WhatsApp

Join Now

Telegram

Join Now

Instagram

Join Now