ಸರ್ಕಾರಿ ನೌಕರರು ಸಾರ್ವಜನಿಕರ ಸೇವೆಗೆ ಸಿಕ್ಕ ಅವಕಾಶ ಎಂದು ಕಾರ್ಯನಿರ್ವಹಿಸಬೇಕು: ಶಾಸಕ ಬಿಎನ್ ರವಿಕುಮಾರ್
ವಿಜಯ ದರ್ಪಣ ನ್ಯೂಸ್…
ಸರ್ಕಾರಿ ನೌಕರರು ಸಾರ್ವಜನಿಕರ ಸೇವೆಗೆ ಸಿಕ್ಕ ಅವಕಾಶ ಎಂದು ಕಾರ್ಯನಿರ್ವಹಿಸಬೇಕು: ಶಾಸಕ ಬಿಎನ್ ರವಿಕುಮಾರ್
ಶಿಡ್ಲಘಟ್ಟ : ಸರ್ಕಾರಿ ನೌಕರಿಯು ಎಲ್ಲರಿಗೂ ಸಿಗುವುದಿಲ್ಲ ಅದು ಅಧಿಕಾರ ಎಂದು ಭಾವಿಸದೆ ಅದು ಸಾರ್ವಜನಿಕರ ಸೇವೆಗೆ ಸಿಕ್ಕ ಅವಕಾಶ ಎಂದು ಕಾರ್ಯನಿರ್ವಹಿಸುವವರು ಮಾತ್ರ ಎಲ್ಲರ ಮನಸ್ಸಿನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.
ನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಪ್ರದರ್ಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ವೆಂಕಟೇಶಪ್ಪ ಅವರಿಗೆ ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲೇ ಅತಿ ಹೆಚ್ಚು ರೇಷ್ಮೆಗೂಡು ವಹಿವಾಟು ನಡೆಯುವ ಇಲ್ಲಿ ನೂರಾರು ರೈತರು, ರೀಲರುಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು, ಏನಾದರೂ ಸಮಸ್ಯೆ ಬಂದರೆ ಸ್ವತಃ ಮುಂದೆ ನಿಂತು ಬಗೆಹರಿಸುತ್ತಿದ್ದ ಅವರ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದರು.
ವೆಂಕಟೇಶಪ್ಪ ಅವರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.
ನಿವೃತ್ತರಾದ ವೆಂಕಟೇಶಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ಕರ್ತವ್ಯದ ಸಮಯದಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿ, ಸಿಬ್ಬಂದಿ, ರೈತರು, ರೀಲರುಗಳ ನೆರವು, ಸಹಕಾರವನ್ನು ಅವರು ಸ್ಮರಿಸಿದರು. ಇದೇ ವೇಳೆ ನಿವೃತ್ತಿಯಾದ ರೇಷ್ಮೆ ಪ್ರದರ್ಶಕ ವೆಂಕಟೇಶಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ, ರೇಷ್ಮೆ ಉಪನಿರ್ದೇಶಕ ಉಮೇಶ್, ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ರೇಷ್ಮೆ ವಿಸ್ತರಣಾಧಿಕಾರಿ ವಿ.ಶ್ರೀನಿವಾಸ್, ಮುಖಂಡ ತಾದೂರು ರಘು, ಸಿಲ್ಕ್, ರೀಲರ್ಸ್ ಅಧ್ಯಕ್ಷ ಅನ್ಸರ್ ಖಾನ್, ರೀಲರ್ ಕಂಪನಿ ಅಧ್ಯಕ್ಷ ಫಾರೂಕ್ ಪಾಷಾ, ಜಿ.ರೆಹಮಾನ್, ವಿಜಯಪುರ ಜೆಎಸಿ ಉಪಾಧ್ಯಕ್ಷ ವೆಂಕಟೇಶ್, ಮಾರುಕಟ್ಟೆ ಅಧಿಕಾರಿಗಳು, ಸಿಬ್ಬಂದಿ, ರೀಲರುಗಳು ಹಾಗು ರೈತರು ಹಾಜರಿದ್ದರು.