--Ads--

ಚಳಿಗೆ ನಿರಾಶಿತರಿಗೆ ಹೊದಿಕೆ ವಿತರಿಸಿ ಮಾನವೀಯತೆ ಕಾರ್ಯಕ್ಕೆ ಮುಂದಾದ ಯುವಕರು

On: July 31, 2025 12:11 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಚಳಿಗೆ ನಿರಾಶಿತರಿಗೆ ಹೊದಿಕೆ ವಿತರಿಸಿ ಮಾನವೀಯತೆ ಕಾರ್ಯಕ್ಕೆ ಮುಂದಾದ ಯುವಕರು

ತಾಂಡವಪುರ ಜುಲೈ  ಶ್ರಾವಣ ಮಾಸದ
ವಿಪರೀತ ಚಳಿ ಇರುವ ಹಿನ್ನೆಲೆಯಲ್ಲಿ
ಚಾಮುಂಡೇಶ್ವರಿ ಬಳಗದ ಯುವಕರು ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕೆಆರ್ ಆಸ್ಪತ್ರೆ ಸುತ್ತಮುತ್ತ, ರಸ್ತೆ ಬದಿಯಲ್ಲಿ ಮಲಗಿರುವ ನಿರಾಶಿತರು ಹಾಗೂ ಬಡವರಿಗೆ
ಉಚಿತವಾಗಿ ಹೊದಿಕೆ ವಿತರಿಸುವ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಬಳಿಕ ಮಾತನಾಡಿದ ಅವರು
ನಮ್ಮ ಮೈಸೂರಲ್ಲಿ ನಿರಾಶ್ರಿತರು ಅಶಕ್ತರಲ್ಲಿ ಸ್ವಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಆದ ಕಾರಣ ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ಸಂಘಸಂಸ್ಥಗಳಿಗೆ ಅಥವಾ ಸರ್ಕಾರಕ್ಕೆ ಅರ್ಜಿ ಹಾಕಲ್ಲ ಅಥವಾ ಸರ್ಕಾರದವರೇ ಎಲ್ಲವನ್ನು ಸರಿದಾರಿಗೆ ತರೋಕು ಆಗುವುದಿಲ್ಲ ಸಮಾಜವನ್ನ ಸರಿಪಡಿಸಲು ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಬಹಳಮುಖ್ಯ, ಅಶಕ್ತರಿರುವ ಸ್ಥಳಕ್ಕೆ ಹೋಗಿ ಹೊದಿಕೆ ವಿತರಣೆ ಕಾರ್ಯಕ್ರಮ ನಡೆಯುವ ಮಾದರಿಯಲ್ಲೆ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಶ್ರಮಿಸೋಣ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ರಮೇಶ್ ರಾಮಪ್ಪ, ಜಿ ರಾಘವೇಂದ್ರ, ದಿನೇಶ್, ಎಸ್ ಎನ್ ರಾಜೇಶ್,ರವಿಚಂದ್ರ, ಮೊಹನ್,ಬೈರತಿ ಲಿಂಗರಾಜು, ಅಮಿತ್, ಹಾಗೂ ಇನ್ನಿತರರು ಹಾಜರಿದ್ದರು

&&&&&&&&&&&&&&&&&&&&&&&&

ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜುಲೈ 31: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಆರ್ಯ ಮತ್ತು ವೈಶ್ಯ ಸಮುದಾಯದವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹ ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು, ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿದ್ದು, ನಮೂನೆ-ಜಿ ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು(ಪ್ರಮಾಣ ಪತ್ರ ಚಾಲ್ತಿಯಲ್ಲಿರಬೇಕು). ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಸೀಡ್ ಮಾಡಿರಬೇಕು. ಈ ಯೋಜನೆಯಲ್ಲಿ ಮಹಿಳೆಯರಿಗೆ ಶೇ.33%, ವಿಕಲಚೇತನರಿಗೆ ಶೇ.5% ಹಾಗೂ ತೃತೀಯ ಲಿಂಗಿಗಳಿಗೆ ಶೇ.5% ಮೀಸಲಾತಿ ನೀಡಲಾಗಿದೆ. ಈ ಯೋಜನೆಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಮಾತ್ರ ಸಾಲ ಸೌಲಭ್ಯ ಪಡೆಯಲು ಅವಕಾವಿರುತ್ತದೆ.

ಅರ್ಜಿಯನ್ನು ಕಡ್ಡಾಯವಾಗಿ ಅನ್ ಲೈನ್ ಮೂಲಕ ಅಧಿಕೃತ ಜಾಲತಾಣವಾದ kacdc.karnataka.gov.in ರಲ್ಲಿ ಅಕ್ಟೋಬರ್ 31 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ:94484 51111 ಅಥವಾ 080-29605761 ಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕ ರಂಗನಾಥ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now