ಬೆಳಗನ್ನು ನಿರ್ವಹಿಸಿ ಬಾಳನ್ನು ಬೆಳಗಿಸಿ
ವಿಜಯ ದರ್ಪಣ ನ್ಯೂಸ್….. ಬೆಳಗನ್ನು ನಿರ್ವಹಿಸಿ ಬಾಳನ್ನು ಬೆಳಗಿಸಿ ಪ್ರತಿ ಹಿಂದಿನ ದಿನ ನಾಳೆಯಿಂದ ಅದನ್ನು ಮಾಡುತ್ತೇನೆ. ಇದನ್ನು ಮಾಡಿ ಮುಗಿಸಿ ಬಿಡುತ್ತೇನೆ ಎಂದು ಏನೇನೋ ಅಂದುಕೊಳ್ಳುತ್ತೇವೆ. ಆದರೆ ಮರುದಿನದ ಬೆಳಗು ನಿತ್ಯ ನಡೆಯುವ ಸನ್ನಿವೇಶಗಳಿಗೆ ಅನುಗುಣವಾಗಿ ನಡೆಯುತ್ತದೆ. ಹೊಸ ದಿನವೂ ಅದೇ ರೀತಿಯಲ್ಲಿ ಅದೇ ಹಾದಿಯಲ್ಲಿ ನಡೆದುಹೋಗಿಬಿಡುತ್ತದೆ. ನನ್ನ ದಿನ ನನ್ನ ಕೈಯಲಿಲ್ಲವೆಂದು ಹೊರಗಿನ ಪರಿಸ್ಥಿತಿಗಳಿಗೆ ಉದ್ರೇಕಿತನಾಗಿ ನಡೆದುಕೊಳ್ಳುತ್ತೇನೆ ಎಂಬುದು ನಮ್ಮಲ್ಲಿ ಬಹುಜನರ ಅಳಲು. ಈ ನೋವನ್ನು ತಡೆದುಹಾಕುವಲ್ಲಿ ಬೆಳಗಿನ ಅಭ್ಯಾಸಗಳು ಮಹತ್ವದ್ದಾಗಿವೆ. ಅಶಿಸ್ತು ಇದಕ್ಕೆಲ್ಲ…