ವಿಶ್ವ ಕಾವ್ಯ ದಿನ ಮಾರ್ಚ್ 21, ವಿಶ್ವ ಜಲ ದಿನ ಮಾರ್ಚ್ 22,
ವಿಜಯ ದರ್ಪಣ ನ್ಯೂಸ್….. ವಿಶ್ವ ಕಾವ್ಯ ದಿನ ಮಾರ್ಚ್ 21, ವಿಶ್ವ ಜಲ ದಿನ ಮಾರ್ಚ್ 22, ಭಗತ್ ಸಿಂಗ್ ಶಿವರಾಂ ರಾಜ್ ಗುರು ಸುಖದೇವ್ ಥಾಪರ್ ಹುತಾತ್ಮರಾದ ದಿನ… ಮಾರ್ಚ್ 23, ಲಾಹೋರ್ ಜೈಲಿನಲ್ಲಿ… ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ……… ನಾನು ನಸು ನಕ್ಕೆ, ಅದು ಸಂಕೋಚದಿಂದ ಸೂರ್ಯನ ಕಿರಣಗಳತ್ತ ನೋಡಿ ನಾಚಿ ಆವಿಯಾಗಿ ಮರೆಯಾಯಿತು….. ಬಿರಿದ ಕೆಂಡ ಸಂಪಿಗೆಯ ಸುವಾಸನೆಗೆ ಮರುಳಾಗಿ ಪ್ರೇಮ ಭಾವದಲ್ಲಿ ಅದನ್ನು ದಿಟ್ಟಿಸಿದಾಗ ತಣ್ಣನೆಯ ಗಾಳಿಗೆ ಸೋಕಿ…