ನಡೆದಷ್ಟು ದಾರಿ ಪಡೆದಷ್ಟು ಅನುಭವ

ವಿಜಯ ದರ್ಪಣ ನ್ಯೂಸ್…. ನಡೆದಷ್ಟು ದಾರಿ ಪಡೆದಷ್ಟು ಅನುಭವ ನಾವು ಸಂಪಾದಿಸಿದ ಆಸ್ತಿ, ಅಂತಸ್ತು, ಸಂಪತ್ತು, ಒಡವೆ, ವಸ್ತç, ಇವೆಲ್ಲಕ್ಕೂ ಮಿಗಿಲಾದುದು ನಾವು ಸಂಪಾದಿಸಿದ ಅನುಭವ. ಬದುಕಿನಲ್ಲಿ ಎಲ್ಲಕ್ಕಿಂತ ದೊಡ್ಡದು ಅನುಭವ. ಅನುಭವದಿಂದ ಪಾಠ ಕಲಿಯಬೇಕು. ಎಂಬೆಲ್ಲ ಮಾತುಗಳು ಮೇಲಿಂದ ಮೇಲೆ ಕಿವಿಗೆ ಬೀಳುತ್ತಲೇ ಇರುತ್ತವೆ. ಏನೇ ಹೇಳಿ ಯಾವ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಕಲಿಸದ ಪಾಠವನ್ನು ಅನುಭವದ ಬದುಕು ಮನುಷ್ಯನಿಗೆ ಕಲಿಸುತ್ತದೆ. ಇನ್ನೊಂದು ವಿಶಿಷ್ಟ ವಿಷಯವೆಂದರೆ, ಯುವಜನರು ಹೇಳುವ ಮಾತು ‘ಅನುಭವವಿದ್ದವರಿಗೆ ಮಾತ್ರ ಕೆಲಸ ನೀಡಲಾಗುವುದು.’…

Read More

ವಿಭಿನ್ನತೆಯ ಮಹತ್ವ ಅರಿತರೆ ?

ವಿಜಯ ದರ್ಪಣ ನ್ಯೂಸ್… ವಿಭಿನ್ನತೆಯ ಮಹತ್ವ ಅರಿತರೆ ? ಇಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ. ಆ ಸೃಷ್ಟಿಕರ್ತನ ಸೃಷ್ಟಿ ಕಾರ್ಯ ಅಚ್ಚರಿ, ಅನಂತ, ಅಗಾಧ. ಪ್ರತಿಯೊಬ್ಬರ ರೂಪ, ಗುಣ ನಡೆ, ನುಡಿ ಯೋಚನಾ ರೀತಿ ಎಲ್ಲವೂ ಭಿನ್ನ ಭಿನ್ನ. ಹೀಗೆ ಯೋಚಿಸುವಾಗ ಒಮ್ಮೊಮ್ಮೆ ನಾನಾ ಬಗೆಯ ಚಿಂತನೆಗಳು ಹೊರಹೊಮ್ಮುತ್ತವೆ. ಭಿನ್ನತೆಯ ಹಿಂದಿನ ಸ್ವಾರಸ್ಯ ಅರಿವಿಗೆ ಬರುತ್ತದೆ. ಆ ಭಿನ್ನತೆಯೇ ಈ ಜಗವನ್ನು ಇಷ್ಟು ಸುಂದರಗೊಳಿಸಿರುವುದು ಅಂತ ತಿಳಿದುಕೊಳ್ಳಲು ಬಹಳ ಹೊತ್ತು ಹಿಡಿಯುವುದಿಲ್ಲ. ಆದರೂ ಚಿಂತನೆಯ ಫಲವನ್ನು ಅಳವಡಿಸಿಕೊಳ್ಳುವುದು ನಮ್ಮಲ್ಲಿ…

Read More

ಭರವಸೆ ಬೇಕಿದೆ ಭವ್ಯ ಭವಿಷ್ಯತ್ತಿಗೆ

ವಿಜಯ ದರ್ಪಣ ನ್ಯೂಸ್  ಭರವಸೆ ಬೇಕಿದೆ ಭವ್ಯ ಭವಿಷ್ಯತ್ತಿಗೆ ನಾನಿಂದು ಇರುವ ಸ್ಥಿತಿಗೆ ಏನು ಕಾರಣ? ಎಂಬುದಕ್ಕೆ ಉತ್ತರ ಹುಡುಕಲು ಪ್ರಯತ್ನಿಸಿದರೆ ನನ್ನ ಬದುಕಿನಲ್ಲಿ ನಿನ್ನೆ ಮೊನ್ನೆ ಅಷ್ಟೇ ಅಲ್ಲ ಈ ಹಿಂದೆ ನಡೆದ ಘಟನೆಗಳು ಎನ್ನುವುದು ಮೊದಲ ಉತ್ತರವಾಗಿ ಸಿಗುತ್ತದೆ. ಜೀವನ ಹೀಗೆಯೇ ರೂಪುಗೊಳ್ಳುತ್ತದೆಯೋ ಇಲ್ಲವೋ ಅಂತ ಹೇಳುವುದು ಒಂದು ರೀತಿಯ ಕ್ಲೀಷೆ ಬದುಕಿನಲ್ಲಿ ಸಂಭವಿಸುವುದೆಲ್ಲ ಯಾವುದೇ ಕಾರಣದಿಂದ ಘಟಿಸಿರುತ್ತದೆ. ಈ ಮಾತನ್ನು ಪುಷ್ಟೀಕರಿಸುವಂತೆ ಅರಿಸ್ಟಾಟಲ್ ಹೀಗೆ ಹೇಳಿದ್ದಾನೆ. ‘ಗೊತ್ತು ಗುರಿಯಿಲ್ಲದೇ ಯಾವುದೇ ಘಟನೆ ನಡೆಯುವುದಿಲ್ಲ….

Read More

ಚಿನ್ನದ ಗಿರವಿ ಜಾಹೀರಾತು ಮತ್ತು ನಮ್ಮ ಸಮಾಜ…….

ವಿಜಯ ದರ್ಪಣ ನ್ಯೂಸ್…. ಚಿನ್ನದ ಗಿರವಿ ಜಾಹೀರಾತು ಮತ್ತು ನಮ್ಮ ಸಮಾಜ……. ” ನೀವು ಕಷ್ಟದಲ್ಲಿದ್ದೀರಾ ? ಹಾಗಾದರೆ ಚಿಂತೆ ಬಿಡಿ. ನಿಮ್ಮ ಬಳಿ ಇರುವ ಚಿನ್ನವನ್ನು ನಮ್ಮ ಬಳಿ ಅಡವಿಡಿ. ಕೇವಲ ಐದೇ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತೇವೆ. ನೀವು ಆರಾಮವಾಗಿರಿ…..” ” ನೀವು ನಿಮ್ಮ ಒಡವೆಗಳನ್ನು ಅಡವಿಟ್ಟಿರುವಿರಾ. ( ಗಿರವಿ ) ಹಾಗಾದರೆ ಚಿಂತೆ ಬಿಡಿ. ನಾವು ಅದನ್ನು ಬಿಡಿಸಿ ಇಂದಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚು ದರದಲ್ಲಿ ಕೊಂಡು ಉಳಿದ ಹಣವನ್ನು…

Read More

ಯಾವುದು ಮುಖ್ಯ

ವಿಜಯ ದರ್ಪಣ ನ್ಯೂಸ್…. ಯಾವುದು ಮುಖ್ಯ ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ ಆಂಗ್ಲ ಭಾಷಾ ಉಪನ್ಯಾಸಕರು ಸ ಪ ಪೂ ಕಾಲೇಜು ಹಿರೇಬಾಗೇವಾಡಿ – ೫೯೧೧೦೯ ತಾ:ಜಿ: ಬೆಳಗಾವಿ ಮೊ: ೯೪೪೯೨೩೪೧೪೨ ನಮ್ಮಲ್ಲಿ ಎಷ್ಟೆಲ್ಲ ಸಂಪತ್ತಿದೆ ಸೌಲಭ್ಯಗಳಿವೆ ಎನ್ನುವದು ಮುಖ್ಯವಲ್ಲ. ಬದಲಾಗಿ ನಾವು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎನ್ನುವದು ಮುಖ್ಯ. ಇರುವದೆಲ್ಲವನ್ನೂ ಸದ್ವಿನಿಯೊಗಪಡಿಸಿಕೊಳ್ಳುತ್ತಿದ್ದೇವೆಯೇ? ದುಡಿದ ಹಣ ಸತ್ಪಾತ್ರಕ್ಕೆ ಸಲ್ಲತ್ತಿದೆಯೇ? ಎಂಬ ಅಂಶ ಪ್ರಮುಖವಾದುದು. ಬಳಕೆಯ ವಿಧಾನ ಅತ್ಯುತ್ತಮ ರೀತಿಯಲ್ಲಿ ಇರುವದೆ? ಅಥವಾ ಬದಲಾಯಿಸಬೇಕೆ? ಎಂಬ ಪ್ರಶ್ನೆಗಳನ್ನು ನಮಗೆ…

Read More

ನಂಬಿಕೆಯೊಂದೇ ಸಾಕು

ವಿಜಯ ದರ್ಪಣ ನ್ಯೂಸ್…. ನಂಬಿಕೆಯೊಂದೇ ಸಾಕು ಶ್ರೀಕೃಷ್ಣನ ಪರಮಭಕ್ತನಾಗಿದ್ದ ಋಷಿಯೊಬ್ಬ ನದಿಯ ತೀರದಲ್ಲಿ ವಾಸವಾಗಿದ್ದನು. ಸುಮಾರು ವರ್ಷಗಳಿಂದ ನೀರಿನ ಮೇಲೆ ನಡೆಯುವ ಸಾಧನೆಯಲ್ಲಿ ತೊಡಗಿದ್ದನು. ಬಾಲಕಿ ತಂದುಕೊಡುತ್ತಿದ್ದ ಹಸುವಿನ ಹಾಲನ್ನು ಮಾತ್ರ ಸೇವಿಸುತ್ತಿದ್ದನು. ಒಂದು ದಿನ ಹುಡುಗಿಯ ತಾಯಿ ಮೋಡಗಳು ದಟ್ಟವಾಗಿವೆ. ಮಳೆಯಾಗಿ ನದಿ ತುಂಬಿ ಹರಿಯುವ ಸಾಧ್ಯತೆಯಿದೆ. ಹೀಗಾಗಿ ಹಾಲು ತರಲಾಗುವುದಿಲ್ಲವೆಂದು ಋಷಿಗಳಿಗೆ ತಿಳಿಸಲು ಹೇಳಿದಳು. ಬಾಲಕಿಗೆ ಋಷಿ ‘ಪ್ರವಾಹದ ಬಗ್ಗೆ ಯೊಚಿಸಬೇಡ. ನೀರಿನ ಮೇಲೆ ನಡೆಯುವ ಮಂತ್ರವನ್ನು ಕಲಿಸುತ್ತೇನೆ. ಕಣ್ಮುಚ್ಚಿ ‘ಕೃಷ್ಣ ಕೃಷ್ಣ’ ಅನ್ನು…

Read More

ಆಧುನಿಕ ವೈದ್ಯಕೀಯ ಕ್ಷೇತ್ರದ ದುಸ್ಥಿತಿ………

ವಿಜಯ ದರ್ಪಣ ನ್ಯೂಸ್… ಆಧುನಿಕ ವೈದ್ಯಕೀಯ ಕ್ಷೇತ್ರದ ದುಸ್ಥಿತಿ……… ” ಕೆಲ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಭಯಪಡುವಂತೆ ಆಗಿದೆ. ಹಲವಾರು ಅನಗತ್ಯ ತಪಾಸಣೆಗಳನ್ನು ಮಾಡಿಸಲಾಗುತ್ತದೆ. ಸುಮಾರು 10 ಲಕ್ಷದಿಂದ 20 ಲಕ್ಷಕ್ಕೂ ಹೆಚ್ಚು ಬಿಲ್ ಮಾಡಲಾಗುತ್ತದೆ. ವೈದ್ಯಕೀಯ ಸೇವೆ ವ್ಯಾಪಾರ ಆಗಿದೆ….” ದಿನೇಶ್ ಗುಂಡೂರಾವ್, ಆರೋಗ್ಯ ಸಚಿವರು ಕರ್ನಾಟಕ ಸರ್ಕಾರ…… ” ಭಾರತದಲ್ಲಿ ಮಧ್ಯಮ ವರ್ಗದ ಪರಿಸ್ಥಿತಿ ಕೇವಲ ಒಂದು ಆಸ್ಪತ್ರೆಯ ಬಿಲ್ ನ ಅಂತರದಲ್ಲಿ ನಿರ್ಧಾರವಾಗುತ್ತದೆ. ಒಂದೇ ಒಂದು ಖಾಯಿಲೆ ಅವರನ್ನು ಬಡತನಕ್ಕೆ ದೂಡಬಹುದು….” ವಿಶ್ವ…

Read More

ಅನ್ನದ ಮಹಿಮೆ ಅರಿಯೋಣ

ವಿಜಯ ದರ್ಪಣ ನ್ಯೂಸ್…. ಮನೋಲ್ಲಾಸ ಅನ್ನದ ಮಹಿಮೆ ಅರಿಯೋಣ   ಲೇಖನ :ಜಯಶ್ರೀ ಜೆ. ಅಬ್ಬಿಗೇರಿ ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನು ದರ್ಪದ ಮನುಷ್ಯ. ಆದರೆ, ಅವನ ಮನೆಯಲ್ಲಿ ಒಂದು ನೇಮವಿದ್ದಿತು. ಅದೆಂದರೆ, ಮನೆಯ ಆಳು ದಿನನಿತ್ಯ ಅಡುಗೆಯನ್ನು ಮೀಸಲಾಗಿ ತೆಗೆದುಕೊಂಡು, ಊರ ಹೊರಗಿನ ನದಿಯನ್ನು ದಾಟಿ, ಆ ದಂಡೆಗಿದ್ದ ಮನೆದೇವರು ಬಸವಣ್ಣನ ದೇವಸ್ಥಾನಕ್ಕೆ ಹೋಗಿ ಎಡೆ ಕೊಟ್ಟು ಬರುವುದು. ದೇವಸ್ಥಾನಕ್ಕೆ ಎಡೆ ಕೊಟ್ಟು ಬಂದ ನಂತರ ಎಲ್ಲರೂ ಪ್ರಸಾದವನ್ನು ಸ್ವೀಕರಿಸುತ್ತಿದ್ದರು. ಅದೊಂದು ದಿನ ಸೇವಕನಿಗೆ…

Read More

ಧಾರಾವಾಹಿಗಳು ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು…..

ವಿಜಯ ದರ್ಪಣ ನ್ಯೂಸ್….. ಧಾರಾವಾಹಿಗಳು ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು….. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ.,………… ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ. ಇದೊಂದು ಕೋಟ್ಯಾಂತರ ರೂಪಾಯಿಗಳ ಮನರಂಜನಾ ವ್ಯವಹಾರ. ಆದರೆ ಈಗ ಆ ವ್ಯವಹಾರ ನಮ್ಮ ಮನೆಗಳಿಗೇ ಮುಖ್ಯವಾಗಿ ಕೌಟುಂಬಿಕ ಮೌಲ್ಯಗಳಿಗೇ ಕೈ…

Read More

ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು

ವಿಜಯ ದರ್ಪಣ ನ್ಯೂಸ್…. ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು ನೆನಪುಗಳ ಓಣಿಯಲ್ಲಿ ಓಡಾಡುತಿರುವೆ. ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು. ನೀನಿಲ್ಲದೇ ನೆನಪಿನ ಆ ಓಣಿ ಕಳೆಗಟ್ಟುವುದಾದರೂ ಹೇಗೆ? ನಿನ್ನೊಂದಿಗಿದ್ದ ದಿನಗಳೇ ಅಪ್ಪಟ ಸ್ವರ್ಗದ ದಿನಗಳು. ಸ್ವರ್ಗವೊಂದು ಏನಾದರೂ ಭೂಮಿಯ ಮೇಲಿದ್ದರೆ ಅದು ನಿನ್ನೊಂದಿಗಿದ್ದಾಗ ಮಾತ್ರ ಗೋಚರಿಸುತ್ತದೆ. ಸ್ವರ್ಗ ಬೇರಲ್ಲ ನೀನು ಬೇರಲ್ಲ ಅಂತ ಎಷ್ಟೊಂದು ಸಲ ನನಗೆ ಅನಿಸಿದ್ದು ಸುಳ್ಳಲ್ಲ ಸುಮತಿ. ಪ್ರಾಣ ಸ್ನೇಹಿತೆಯಾದ ನಿನ್ನ ಬಗೆಗಿನ ವಿಚಾರಗಳೆಲ್ಲ ಗಾಣದಂತೆ ಸದಾ ಸುತ್ತುತ್ತಲೇ ಇರುತ್ತವೆ….

Read More