ತಾಯ ಗರ್ಭದಿಂದುದಿಸಿದ ಕ್ಷಣದಿಂದ, ಕರುಳು ಬಳ್ಳಿ ಕತ್ತರಿಸಿದ ಘಳಿಗೆಯಿಂದ, ಅಂತರಂಗದ ಅರಿವಿನೊಂದಿಗೆ ಬೆಳೆಯತೊಡಗಿದೆ…..
ವಿಜಯ ದರ್ಪಣ ನ್ಯೂಸ್…. ತಾಯ ಗರ್ಭದಿಂದುದಿಸಿದ ಕ್ಷಣದಿಂದ, ಕರುಳು ಬಳ್ಳಿ ಕತ್ತರಿಸಿದ ಘಳಿಗೆಯಿಂದ, ಅಂತರಂಗದ ಅರಿವಿನೊಂದಿಗೆ ಬೆಳೆಯತೊಡಗಿದೆ….. ಹಸಿವು ಅಳು ನಗು ಮೊದಲಿನಾ ಅನುಭವಗಳು, ತಾಯ ಅಪ್ಪುಗೆ ತಂದೆಯ ಧ್ವನಿ ಗ್ರಹಿಸತೊಡಗಿದೆ, ಮತ್ತಷ್ಟು ಚಲಿಸುವ ಆಕೃತಿಗಳನ್ನು ಕಂಡೆ, ಅಕ್ಕ ಅಣ್ಣ ಅಜ್ಜ ಅಜ್ಜಿ ಎಂದರಿವಾಗತೊಡಗಿತು, ಹಸು ಕರು ಕುರಿ ಕೋಳಿ ನಾಯಿ ಬೆಕ್ಕು ನನ್ನವೆಂದೇ ಭಾವಿಸಿದೆ, ಅಮ್ಮಾ…ಅಪ್ಪಾ…ಅಜ್ಜೀ…ತಾತಾ….ಅಣ್ಣಾ..ಅಕ್ಕಾ…ಎಂದು ತೊದಲತೊಡಗಿದೆ, ಹಾಲು ಅನ್ನ ಸಿಹಿ ಕಹಿ ಖಾರ ಒಗರು ರುಚಿಸತೊಡಗಿತು, ಅ ಆ ಇ ಈ A B…
