ಆರ್ಟಿಕಲ್ 370 ಸಿನಿಮಾಗೆ ಬಂದ ಮುಸ್ಲಿಂ ಕುಟುಂಬಗಳು ಮಾಡಿದ್ದೇನು ಗೊತ್ತೇ?
ವಿಜಯ ದರ್ಪಣ ನ್ಯೂಸ್ ಆರ್ಟಿಕಲ್ 370 ಸಿನಿಮಾಗೆ ಬಂದ ಮುಸ್ಲಿಂ ಕುಟುಂಬಗಳು ಮಾಡಿದ್ದೇನು ಗೊತ್ತೇ? ಮೊನ್ನೆ ಶನಿವಾರ ನಮ್ಮ ತಂಡದೊಂದಿಗೆ ‘ಆರ್ಟಿಕಲ್ 370’ ಸಿನಿಮಾಗೆ ಹೋಗಿದ್ದೆ. ಜಮ್ಮು ಕಾಶ್ಮೀರವನ್ನು ಅಧಿಕೃತವಾಗಿ ಭಾರತದೊಂದಿಗೆ ಪೂರ್ಣ ಪ್ರಮಾಣದಲ್ಲಿ ಏಕೀಕರಣ ಮಾಡಿದ ಸಿನಿಮಾವಾದ್ದರಿಂದ ಓರಿಯನ್ ಮಾಲ್ ಮಲ್ಟಿಪ್ಲೆಕ್ಸ್ ಸಮುಚ್ಚಯದ ಸಿನಿಮಾ ಹಾಲ್ ಕಿಕ್ಕಿರಿದಿತ್ತು. ಸಿನಿಮಾ ಆರಂಭಕ್ಕೆ ಮುನ್ನ ಅತ್ತಂದಿತ್ತ ಕಣ್ಣಾಡಿಸುತ್ತಿದ್ದ ನನಗೆ ಸಾಲು ಸಾಲಾಗಿ ಬಂದ ಬುರ್ಖಾಧಾರಿ ಮುಸ್ಲಿಂ ಹೆಣ್ಣು ಮಕ್ಕಳು, ಅವರ ಪತಿಯರು, ಹಿರಿಯ ಮಹಿಳೆಯರು ಅಶ್ಚರ್ಯ ತಂದರು. ಅವರಲ್ಲಿ…