ರಾಮ ನಾಮವ ಜಪಿಸೋ, ಹೇ ಮನುಜ, ರಾಮ ನಾಮವ ಜಪಿಸೋ….
ವಿಜಯ ದರ್ಪಣ ನ್ಯೂಸ್ ರಾಮ ನಾಮವ ಜಪಿಸೋ, ಹೇ ಮನುಜ, ರಾಮ ನಾಮವ ಜಪಿಸೋ…. ರಾಮ ನಾಮ ಪಾಯಸಕ್ಕೆ, ಕೃಷ್ಣ ನಾಮ ಸಕ್ಕರೆ, ವಿಠಲನಾಮ ತುಪ್ಪವ ಬೆರೆಸಿ, ಬಾಯಿ ಚಪ್ಪರಿಸೋ…… ಹೀಗೆ ರಾಮ ಭಕ್ತಿಯ ಭಾವ ಗೀತೆಗಳು ಜನಮಾನಸದಲ್ಲಿ ಪ್ರಚಲಿತವಾಗಿದೆ. ಇಂದು ರಾಮನವಮಿ. ಇದೇ ವರ್ಷದಲ್ಲಿ ಬಹಳ ದೀರ್ಘ ವಿವಾದಾತ್ಮಕ ಹೋರಾಟದ ನಂತರ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ….. ಕೆಲವು ಸಂಪ್ರದಾಯವಾದಿಗಳಲ್ಲಿ ಇದು ಒಂದು ಹೆಮ್ಮೆ ಎಂಬಂತೆ ಬಿಂಬಿತವಾಗಿದೆ. ಕೆಲವರಿಗೆ ಮಸೀದಿ ಒಡೆದು ನಿರ್ಮಿಸಿರುವುದು…