ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದಿದ್ದರೂ ಶೇ.76 ಪ್ರಗತಿ ಸಾಧಿಸಲಾಗಿದೆ
ವಿಜಯ ದರ್ಪಣ ನ್ಯೂಸ್…
ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದಿದ್ದರೂ ಶೇ.76 ಪ್ರಗತಿ ಸಾಧಿಸಲಾಗಿದೆ
ಶಿಡ್ಲಘಟ್ಟ : ಕೆಲ ತಾಂತ್ರಿಕ ಕಾರಣಗಳಿಂದಾಗಿ ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದಿದ್ದರೂ ಶೇ.76 ಪ್ರಗತಿ ಸಾಧಿಸಲಾಗಿದೆ ಇನ್ನುಳಿದ 2 ದಿನಗಳಲ್ಲಿ ಎಲ್ಲ ಮನೆಗಳ ಸಮೀಕ್ಷೆ ಕಾರ್ಯ ಮುಗಿಸಲಾಗುವುದು ಎಂದು ತಹಸೀಲ್ದಾರ್ ಎಸ್.ಗಗನ ಸಿಂಧು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಸಿದ್ದಾರ್ಥ ನಗರದಲ್ಲಿ ಖುದ್ದು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಪರಿಶೀಲಿಸಿ ಅವರು ಮಾತನಾಡಿದರು.
ರಜೆ ದಿನವಾದ ಭಾನುವಾರವೂ ಸಮೀಕ್ಷೆ ನಡೆಸಿದ್ದು, ಸೋಮವಾರ ಮತ್ತು ಮಂಗಳವಾರವೂ ಮುಂದುವರಿಯಲಿದೆ ಎಲ್ಲಾ ಕಾಲಂಗಳಿಗು ಕಡ್ಡಾಯವಾಗಿ ಉತ್ತರಿಸಬೇಕು ಎಂದೇನಿಲ್ಲಾ ,ನಿಮಗೆ ಇಷ್ಟವಿಲ್ಲ ಎಂದಾದರೆ ಆ ಪ್ರಶ್ನೆಗೆ ಉತ್ತರಿಸಬೇಡಿ ಎಂದು ಹೇಳಿದರು.
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಇನ್ನೂ ಎರಡು ದಿನಗಳ ಕಾಲ ನಡೆಯಲಿದ್ದು, ಗಣತಿದಾರರು ತಮ್ಮ ಮನೆ ಬಳಿ ಬಂದಾಗ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದರು.
ಮೊಬೈಲ್ ನೆಟ್ ಪಡೆಯಲು ವರ್ಕ್ ಸಿಗದಿರುವುದು, ಮನೆಯವರು ಸೂಕ್ತ ದಾಖಲೆಗಳನ್ನು ಒದಗಿಸದಿರುವುದು, ಓಟಿಪಿ ನಂಬರ್ ತಡವಾಗುವುದು ಸೇರಿ ಹಲವು ತಾಂತ್ರಿಕ ದೋಷಗಳು ಸಮೀಕ್ಷೆ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದವು, ಆರಂಭದಲ್ಲಿದ್ದ ಸಮಸ್ಯೆಗಳು ಈಗ ಕಡಿಮೆಯಾಗಿದ್ದು ಸಮೀಕ್ಷೆ ಭರದಿಂದ ಸಾಗಿದೆ ಎಂದರು.
ಮನೆಗೆ ಗಣತಿದಾರರು ಬಾರದಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ, ಸಂಬಂಧಿಸಿದ ಗಣತಿದಾರರನ್ನು ನಿಮ್ಮ ಮನೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಸಿಎಂ ಅಧಿಕಾರಿಗಳಾದ ವಿಜಯಕುಮಾರ್, ನವೀನ್ಕುಮಾರ್, ಮೇಲ್ವಿಚಾರಕರಾದ ದೇವರಾಜ್, ವೆಂಕಟೇಶ್, ಗಣತಿದಾರರಾದ ನಳಿನಾ ಹಾಜರಿದ್ದರು.

