--Ads--

ಸರ್ಕಾರದ ಯೋಜನೆಗಳನ್ನು ಫಲಾನುಭವಗಳಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ : ಶಾಸಕ ಬಿ ಎನ್ ರವಿಕುಮಾರ್ 

On: March 7, 2026 6:15 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸರ್ಕಾರದ ಯೋಜನೆಗಳನ್ನು ಫಲಾನುಭವಗಳಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ : ಶಾಸಕ ಬಿ ಎನ್ ರವಿಕುಮಾರ್ 

ಶಿಡ್ಲಘಟ್ಟ : ಶಾಸಕನಾಗಿ ನಾನು ೩೪ ತಿಂಗಳು ಕಳೆದಿವೆ ಈ ಕ್ಷೇತ್ರದ ಸ್ವಾಭಿಮಾನಿ ಮತದಾರರು ನೀಡಿದ ಅದಿಕಾರದ ಅವಧಿಯಲ್ಲಿ ನಾನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೆ ಯೋಜನೆಯಾಗಲಿ ಅವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ, ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಮೋಟಾರ್ ಪಂಪ್ ಕೇಬಲ್ ಇನ್ನಿತರೆ ಪರಿಕರಗಳು, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿ ಅವರು ಮಾತನಾಡಿದರು.

ಯೋಜನೆಗಳ, ಸವಲತ್ತನ್ನು ಅರ್ಹ ಫಲಾನುಭವಿಗೆ ತಲುಪಿಸುವ ಪ್ರಾಮಾಣಿಕ ಕೆಲಸವನ್ನು ಜನಪ್ರತಿನಿಗಳು,
ಅದಿಕಾರಿಗಳು ಮಾಡಬೇಕಿದೆ ,ರಾಜ್ಯ ಮತ್ತು ಕೇಂದ್ರ ಸರ್ಕಾರವು ಜಾರಿಗೆ ತರುವ ಪ್ರತಿ ಯೋಜನೆ, ಸವಲತ್ತು ಕೂಡ ಈ ದೇಶದ ಪ್ರತಿ ನಾಗರೀಕ ಕಟ್ಟುವ ತೆರಿಗೆ ಹಣದ್ದಾಗಿರುತ್ತದೆ ಎಂದು ಹೇಳಿದರು.

ಗಂಗಾಕಲ್ಯಾಣ ಯೋಜನೆ, ಸ್ವಯಂ ಉದ್ಯೋಗ ಯೋಜನೆ ಏನೇ ಆಗಲಿ ಎಲ್ಲವುಗಳಲ್ಲಿ ಪಾರದರ್ಶಕತೆ ಇರಬೇಕೆಂಬ ಉದ್ದೇಶದಿಂದ ಎಲ್ಲ ಅದಿಕಾರಿಗಳು, ಪಲಾನುಭವಿಗಳನ್ನು ಕರೆದು ಸ್ಥಳದಲ್ಲೆ ಪರಿಕರಗಳನ್ನು ವಿತರಿಸುತ್ತಿದ್ದೇನೆ ಇಲ್ಲಿ ಕೊಡುವ ಎಲ್ಲಾ ಪರಿಕರಗಳು ಗುಣಮಟ್ಟದವದಾಗಿದ್ದು ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲಾ ಎಂದರು.

ಈ ವೇಳೆ ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮೀಕಿ ಅಭಿವೃದ್ದಿ ನಿಗಮ,ವಿಶ್ವಕರ್ಮ ನಿಗಮ, ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ನಿಗಮ, ದೇವರಾಜ್ ಅರಸ್ ಅಭಿವೃದ್ದಿ ನಿಗಮ, ಆದಿಜಾಂಭವ ಅಭಿವೃದ್ದಿ ನಿಗಮದಿಂದ ೧೯ ಮಂದಿಗೆ ಪಂಪು ಮೋಟಾರ್ ಪೈಪ್ ಕೇಬಲ್ ಇನ್ನಿತರೆ ಪರಿಕರಗಳು, ಸ್ವಯಂ ಉದ್ಯೋಗ ಯೋಜನೆಯಡಿ ೩೧ ಮಂದಿಗೆ ತಲಾ ೧ ಲಕ್ಷದಂತೆ ೩೧ ಲಕ್ಷ ರೂ.ಸಾಲ ಹಾಗು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ವಾಲ್ಮೀಕಿ ಅಭಿವೃದ್ದಿ ನಿಗಮದ ಆಡಳಿತಾಧಿಕಾರಿ ಪ್ರಕಾಶ್, ಅಂಬೇಡ್ಕರ್ ಅಭಿವೃದ್ದಿ ನಿಗಮದ ವಿಕ್ರಮ್, ದೇವರಾಜ್ ಅರಸ್ ಅಭಿವೃದ್ದಿ ನಿಗಮದ ಭೀಮಪ್ಪ, ಶಿವು, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ,ಪುರಸಭಾ ಮಾಜಿ ಅದ್ಯಕ್ಷ ಜೆ.ವಿ.ಸದಾಶಿವ, ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್ ,ಗಂಜಿಗುಂಟೆ ಮೂರ್ತಿ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now