ಸ್ವಾತಂತ್ರ್ಯ ಹೋರಾಟಗಾರರು ಸಂವಿಧಾನ ನಿರ್ಮಾತೃಗಳ ತ್ಯಾಗ ಸ್ಮರಿಸಬೇಕು: ವಿ ನಂದಕುಮಾರ್
ವಿಜಯ ದರ್ಪಣ ನ್ಯೂಸ್….
ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ನಿರ್ಮಾತೃಗಳ ತ್ಯಾಗ ಸ್ಮರಿಸಬೇಕು: ವಿ ನಂದಕುಮಾರ್

ವಿಜಯಪುರ, ‘ಭಾರತದ ಸಂವಿಧಾನ ಜ.27-ಜಾರಿಗೆ ಬಂದ ನೆನಪಿಗಾಗಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸುತ್ತಾ, ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಪಾಲಿಸಿ, ದೇಶದ ಏಕತೆಗಾಗಿ ಶ್ರಮಿಸಲು ಈ ದಿನ ನಮಗೆ ಸ್ಪೂರ್ತಿ ನೀಡುತ್ತದೆ’ ಎಂದು ಪುರಸಭಾ ಅಧ್ಯಕ್ಷೆ ಭವ್ಯ ಮಹೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ 77ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನವು ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಮತ್ತು ದೇಶದ ಪ್ರಗತಿಯನ್ನು ಖಚಿತಪಡಿಸುತ್ತದೆ ನಾವೆಲ್ಲರೂ ನಮ್ಮ ಹಕ್ಕುಗಳ ಜೊತೆಗೆ, ಮೂಲಭೂತ ಕರ್ತವ್ಯಗಳನ್ನು ಪಾಲಿಸಿ, ಉತ್ತಮ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ. ಈ ದಿನದಂದು ದೇಶದ ಸೈನಿಕರು ಮತ್ತು ಅನ್ನದಾತರಿಗೆ ಗೌರವ ಸಲ್ಲಿಸೋಣ’ ಎಂದು ಹೇಳಿದರು.
ಪುರಸಭಾ ಸದಸ್ಯ ವಿ.ನಂದಕುಮಾರ್ ಮಾತನಾಡಿ, ‘ಭಾರತದ ಸಂವಿಧಾನವು ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವಾಗಿದ್ದು, ನಮಗೆ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವ ಎಂಬ ಅಮೂಲ್ಯ ಮೌಲ್ಯಗಳನ್ನು ನೀಡಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಈ ಸಂವಿಧಾನವು ನಮ್ಮ ದೇಶದ ಏಕತೆ ಮತ್ತು ಅಖಂಡತೆಯ ಆಧಾರಸ್ತಂಭವಾಗಿದೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮತ್ತು ಅನೇಕ ವೀರರ ತ್ಯಾಗವನ್ನು ಇಂದು ನಾವು ಗೌರವದಿಂದ ಸ್ಮರಿಸಬೇಕು. ಅವರ ಕನಸಿನ ಭಾರತವನ್ನು ನಿರ್ಮಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಶಾಲೆಗಳಿಂದ ಧ್ವಜಕ್ಕೆ ವಂದಿಸಿದರು ಹಾಗೂ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಊರಿನ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ್, ಪುರಸಭಾ ಸದಸ್ಯರು, ಮಾಜಿ ಪುರಸಭಾ ಸದಸ್ಯರು, ಪುರಸಭಾ ಸಿಬ್ಬಂದಿ ವರ್ಗ ಹಾಗೂ ಮಹಾದೇವ ಸ್ವಾಮೀಜಿ ಹಾಜರಿದ್ದರು. ಮತ್ತಿತರರು
