ರಾಜೀವ್‍ ಗೌಡನಿಗೆ  ನ್ಯಾಯಾಂಗ ಬಂಧನ ವಿಧಿಸಿದ ಜೆಎಂಎಫ್‌ಸಿ ನ್ಯಾಯಾಲಯ

ವಿಜಯ ದರ್ಪಣ ನ್ಯೂಸ್…..

ನಗರಸಭೆ ಪೌರಾಯುಕ್ತೆ ಜಿ.ಅಮೃತ ಗೌಡ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿದ್ದ ಪ್ರಕರಣ

ರಾಜೀವ್‍ ಗೌಡನಿಗೆ  ನ್ಯಾಯಾಂಗ ಬಂಧನ ವಿಧಿಸಿದ ಜೆಎಂಎಫ್‌ಸಿ ನ್ಯಾಯಾಲಯ

ಶಿಡ್ಲಘಟ್ಟ : ಕಳೆದ ಹನ್ನೆರಡು ದಿನಗಳಿಂದ ಪೋಲೀಸರಿಗೆ ಸಿಗದೇ ಪರಾರಿಯಲ್ಲಿದ್ದ ರಾಜೀವ್ ಗೌಡರನ್ನು ಕೇರಳದ ಗಡಿಯ ಹೋಟೆಲ್‍ವೊಂದರಲ್ಲಿ ಅವರನ್ನು ಸೋಮವಾರ ಬಂಧಿಸಿದ್ದ ಶಿಡ್ಲಘಟ್ಟ ಪೊಲೀಸರು ಮಂಗಳವಾರ ನಗರದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.

ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್‍ಗೌಡ ಅವರಿಗೆ ಫೆ.9 ರವರೆಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಶಿಡ್ಲಘಟ್ಟದ ಜೆಎಂಎಫ್‍ಸಿ ನ್ಯಾಯಾಲಯ ಆದೇಶಿಸಿದೆ.

ಪೊಲೀಸರ ಬಂಧನದಿಂದ ಪಾರಾಗಲು ರಾಜೀವ್‍ಗೌಡಗೆ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಮೈಕೆಲ್‍ಗೆ ಕೆಲ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಹೆಚ್ಚಿನ ತನಿಖೆಗಾಗಿ ರಾಜೀವ್‍ಗೌಡ ಅವರನ್ನು ತಮ್ಮ ಕಷ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.

ಜತೆಗೆ ಸರಕಾರಿ ಸಹಾಯಕ ಅಭಿಯೋಜಕರು ಕೂಡ ಸರಕಾರದ ಪರ ತಮ್ಮ ವಾದ ಮಂಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸರ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು.
ಇತ್ತ ಜಾಮೀನು ನೀಡುವಂತೆ ರಾಜೀವ್‍ಗೌಡ ಪರ ವಕೀಲ ವಿವೇಕ್‍ಸುಬ್ಬಾರೆಡ್ಡಿ ಅರ್ಜಿ ಸಲ್ಲಿಸಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾ.ಸಿ.ಎಸ್.ಸುಕನ್ಯ ಅವರ ಪೀಠ ರಾಜೀವ್‍ಗೌಡ ಅವರಿಗೆ ಫೆ.9 ರವರೆಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ,

ನಾಳೆ ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ ಎಂದು ರಾಜೀವ್ ಗೌಡ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ,
ರಾಜೀವ್‍ಗೌಡರಿಗೆ ಆಶ್ರಯ ನೀಡಿದ ಆರೋಪ ಹೊತ್ತ ಮೈಕೆಲ್‍ಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.