ಫೆಬ್ರವರಿ11ರಂದು  ಶಿಡ್ಲಘಟ್ಟದಲ್ಲಿ  ಹಿಂದೂ ಸಮಾಜೋತ್ಸವ ಆಯೋಜನೆ:  ಎಸ್.ಪ್ರಕಾಶ್ 

ವಿಜಯ ದರ್ಪಣ ನ್ಯೂಸ್…

ಫೆಬ್ರವರಿ11ರಂದು  ಶಿಡ್ಲಘಟ್ಟದಲ್ಲಿ  ಹಿಂದೂ ಸಮಾಜೋತ್ಸವ ಆಯೋಜನೆ:  ಎಸ್.ಪ್ರಕಾಶ್

ಶಿಡ್ಲಘಟ್ಟ : ರಾಷ್ಟೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ದೇಶಾಧ್ಯಂತ ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು ಅದರ ಭಾಗವಾಗಿ ಫೆ-೦೧ ರ ಭಾನುವಾರ ನಗರದಲ್ಲಿ ಹಿಂದೂ ಸಮಾಜೋತ್ಸವವನ್ನು ಭಾರಿ ವಿಜೃಂಭಣೆಯಿಂದ ಆಯೋಜಿಸಲಾಗಿದೆ ಎಂದು ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಯಾವುದೇ ಅನ್ಯಧರ್ಮಗಳ ವಿರುದ್ದ ಮಾಡುವ ಶಕ್ತಿ ಪ್ರದರ್ಶನವಲ್ಲ ಬದಲಿಗೆ ಹಿಂದೂಗಳನ್ನೆಲ್ಲಾ ಒಗ್ಗೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ,ಮದ್ಯಾಹ್ನ ೨.೩೦ ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಮುಖ್ಯಭಾಷಣಕಾರರಾಗಿ ಕೋಲಾರ ಜಿಲ್ಲಾ ಮಾನ್ಯ ಸಂಘಚಾಲಕ್ ಗೋವಿಂದರಾಜ್ ಬಾಗವಹಿಸಲಿದ್ದಾರೆ,ಈ ಕಾರ್ಯಕ್ರಮದಲ್ಲಿ ಜಾತ್ಯಾತೀತ ಹಾಗು ಪಕ್ಷಾತೀತವಾಗಿ ಹಿಂದೂ ಬಾಂದವರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ ಮಾತನಾಡಿ ದೇಶದ ಸನಾತನ ಹಿಂದೂ ಧರ್ಮದ ಐಕ್ಯತೆ ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಬೇಕು. ಆ ನಿಟ್ಟಿನಲ್ಲಿ ಫೆ ೦೧ ರ ಭಾನುವಾರ ಬೆಳಗ್ಗೆ ೧೧ ಗಂಟೆಗೆ ನಗರದ ಬಸ್ ನಿಲ್ದಾಣದಿಂದ ನಗರದ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಸಾಗುವ ಬೃಹತ್ ಶೋಭಾಯಾತ್ರೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಜ-೩೦ ರ ಶುಕ್ರವಾರ ಮದ್ಯಾಹ್ನ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಹಿಂದೂ ಸಮಾಜೋತ್ಸವ ಸಮಿತಿ ಉಪಾಧ್ಯಕ್ಷ ಪಿ.ವಿ.ಶ್ರೀನಿವಾಸ್ ಮಾತನಾಡಿ ವಿಶ್ವವೇ ಒಂದು ಕುಂಟುಂಬ ಎಂಬ ಚಿಂತನೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ನೀಡಿದ ಕೀರ್ತಿ ಹಿಂದೂ ಸಮಾಜಕ್ಕಿದೆ, ಇಂತಹ ಹಿಂದೂ ಸಮಾಜದ ಬಗ್ಗೆ ಇಂದಿನ ತಲಮಾರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು ೪-೫ ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ನರೇಶ್, ಹಿಂದೂ ಸಮಾಜೋತ್ಸವ ಸಮಿತಿ ಪದಾಧಿಕಾರಿಗಳಾದ ಮುಖೇಶ್, ರಘು, ರಾಮಕೃಷ್ಣ, ಅಶ್ವತ್ಥ್, ಮಣಿ, ಚೆಲುವರಾಜ್
ಮುಂತಾದವರು ಹಾಜರಿದ್ದರು.