--Ads--

ಯಶಸ್ವಿಯಾಗಿ ನಡೆದ ಜೆಡಿಎಸ್ ಬಿಎಲ್‌ಎ 2 ಕಾರ್ಯಾಗಾರ

On: February 19, 2026 11:22 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಯಶಸ್ವಿಯಾಗಿ ನಡೆದ ಜೆಡಿಎಸ್ ಬಿಎಲ್‌ಎ 2 ಕಾರ್ಯಾಗಾರ

1950 ಜನತಾ ಪ್ಯ್ದೆರಾತಿನಿಧ್ಯ ಕಾಯ್ದಯ  ಸೆಕ್ಷನ್ 13ಬಿ (2) ರ ಅಡಿಯಲ್ಲಿ ಬಿಎಲ್‌ಒ ಗಳನ್ನು ಸರ್ಕಾರಿ/ಅರೆ ಸರ್ಕಾರಿ/ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಂದ ನೇಮಿಸಲಾಗುತ್ತದೆ, ಸಾಮಾನ್ಯವಾಗಿ, ಒಬ್ಬ ಬಿಎಲ್‌ಒ ಮತದಾರರ ಪಟ್ಟಿಯ ಒಂದು ಭಾಗಕ್ಕೆ ಜವಾಬ್ದಾರರಾಗಿರುತ್ತಾರೆ, 2006 ರಿಂದ ಆಯೋಗವು ಮತದಾರರ ಪಟ್ಟಿಯ ನಿಷ್ಠೆಯನ್ನು ಖಚಿತಪಡಿಸಿಕೊಳ್ಳಲು ಜವಾಬ್ದಾರ ರಾಗಿರುವ ಬಿಎಲ್‌ಒ ಗಳನ್ನು ನೇಮಿಸುವ ಪರಿಕಲ್ಪನೆ ಯನ್ನು ಪರಿಚಯಿಸಿದೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಚ್.ಎನ್.ದೇವರಾಜ್ ತಿಳಿಸಿದರು.

ಅವರು ದೇವನಹಳ್ಳಿ ತಾಲೂಕಿನ ಚಪ್ಪರಕಲ್ ಬಳಿಯಿರುವ ಮನ್ವಂತರ ಪಾರ್ಟಿ ಹಾಲ್‌ನಲ್ಲಿ ನಡೆದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಿಎಲ್‌ಒ-2 ಕಾರ್ಯಾಗಾರದಲ್ಲಿ ಮಾತನಾಡಿ, ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆ ಸಮಯದಲ್ಲಿ ತಳಮಟ್ಟದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸಲುವಾಗಿ, ಚುನಾವಣಾ ಆಯೋಗವು ಬೂತ್ ಮಟ್ಟದ ಏಜೆಂಟ್ ನೇಮಕಾತಿ ವ್ಯವಸ್ಥೆಯನ್ನು ಪರಿಚಯಿಸಿತು.

ಆಯಾ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳಿಗೆ ಪೂರಕವಾಗಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ನಿರ್ದಿಷ್ಟ ಮತಗಟ್ಟೆ ಪ್ರದೇಶಗಳಿಗೆ ಬೂತ್ ಮಟ್ಟದ ಏಜೆಂಟ್‌ಗಳನ್ನು ನೇಮಿಸಲಾಗುತ್ತದೆ.

ಸಭೆಯಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮಂಜುನಾಥ್, ದೇವನಹಳ್ಳಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ವಿಧಾನಸಭಾ ಕ್ಷೇತ್ರದ ಬಿಎಲ್‌ಎ 1 ಟಿ.ರವಿ, ಕುಂದಾಣ ಹೋಬಳಿ ಅಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್ ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಬೂತ್ ಮಟ್ಟದ ಕಾರ್ಯಕರ್ತರು ಉಪಸ್ಥಿತರಿದ್ದರು

ಏಜೆಂಟ್‌ ಗಳಿಗೆ ಮಾರ್ಗದರ್ಶನ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ  ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಎಸ್ ಆರ್ ಕುರಿತಾದ ಬೂತ್ ಮಟ್ಟದ ವಿಜೆಂಟ್‌ಗಳ ಬಿಎಲ್‌ಒ 2 ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಚ್.ಎನ್.ದೇವರಾಜ್ ಅವರು, ಮತದಾರರ ಪಟ್ಟಿ ಪರಿಷ್ಕರಣೆಯ ಮಹತ್ವ ಹಾಗೂ ತಾಂತ್ರಿಕ ಅಂಶಗಳ ಬಗ್ಗೆ ವಿಜೆಂಟ್‌ಗಳಿಗೆ ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರು ಎಂದು ತಿಳಿಸಿದರು.

WhatsApp

Join Now

Telegram

Join Now

Instagram

Join Now