--Ads--

ಬೆಂಗಳೂರು ಭೇಟಿಗಾಗಿ ಆಗಮಿಸಿದ ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿ ಗೌರವಾನ್ವಿತ ಡಿಕ್ ಶೂಫ್ ಅವರಿಗೆ ಆತ್ಮೀಯವಾಗಿ ಸ್ವಾಗತ

On: February 20, 2026 9:34 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಬೆಂಗಳೂರು ಭೇಟಿಗಾಗಿ ಆಗಮಿಸಿದ ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿ ಗೌರವಾನ್ವಿತ ಡಿಕ್ ಶೂಫ್ ಅವರಿಗೆ ಆತ್ಮೀಯವಾಗಿ ಸ್ವಾಗತ

​ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ , ಫೆಬ್ರವರಿ 19,  :

ಬೆಂಗಳೂರು ಭೇಟಿಗಾಗಿ ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಡಿಕ್ ಶೂಫ್ (H.E. Mr. Dick Schoof) ಅವರು ತಮ್ಮ ನಿಯೋಗದೊಂದಿಗೆ ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು

ಗೌರವಾನ್ವಿತ ನೆದರ್ ಲ್ಯಾಂಡ್ಸ್ ಪ್ರಧಾನಿಗಳನ್ನು ಎಸಿಎಸ್ ಗೌರವ ಗುಪ್ತ ಅವರು ಹೂ ಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.

​ಗೌರವಾನ್ವಿತ‌ ನೆದರ್ ಲ್ಯಾಂಡ್ಸ್ ಪ್ ಪ್ರಧಾನ ಮಂತ್ರಿಗಳು ನಾಳೆ ಫೆಬ್ರವರಿ 20 ರಂದು ಆರ್.ಟಿ. ನಗರದಲ್ಲಿರುವ ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್ (Philips Innovation Campus), ಇನ್ಫೆಂಟ್ರಿ ರಸ್ತೆಯಲ್ಲಿರುವ ಬೆಂಗಳೂರು ಸಂಚಾರ ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ (BTP Control Centre), ಭಾರತೀಯ ವಿಜ್ಞಾನ ಸಂಸ್ಥೆ (IISc) ಗೆ ಭೇಟಿ ನೀಡಲಿದ್ದಾರೆ.‌ ನಂತರ ಬೆಂಗಳೂರಿನ ಉದ್ಯಮಿಗಳೊಂದಿಗೆ ಹೋಟೆಲ್ ಫೋರ್ ಸೀಸನ್ಸ್‌ನಲ್ಲಿ ಮಧ್ಯಾಹ್ನದ ಭೋಜನ ಸಭೆ ನಡೆಸಿ, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಆಮ್‌ಸ್ಟರ್‌ಡ್ಯಾಮ್‌ಗೆ ಪ್ರಯಾಣಿಸಲಿದ್ದಾರೆಈ ಸಂದರ್ಭದಲ್ಲಿ ಬೆಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಇದ್ದರು.

ಶೇಷಾದ್ರಿಪುರದ ರಾಯರ ಮಠದಲ್ಲಿ
ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ

ಬೆಂಗಳೂರು : ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ಆದೇಶಾನುಸಾರ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 405ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಬೆಳಗ್ಗೆ ಗುರುರಾಯರ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ತೊಟ್ಟಿಲು ಸೇವೆ, ಶ್ರೀರಾಘವೇಂದ್ರ ಅಷ್ಟಾಕ್ಷರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು ಎಂದು ಶ್ರೀಮಠದ ವಿಚಾರಣಾಕರ್ತ ಶ್ರೀ ಸುಬ್ಬುನರಸಿಂಹ ಅವರು ತಿಳಿಸಿದರು.

ಹರಿನಾಮ ಸಂಕೀರ್ತನೆ”

ಬೆಂಗಳೂರು : ವಿದ್ಯಾರಣ್ಯಪುರದ ಅಲಸೂರಮ್ಮ ಸೇವಾ ಟ್ರಸ್ಟಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿ ಉತ್ಸವದ ಅಂಗವಾಗಿ ಫೆಬ್ರವರಿ 22, ಭಾನುವಾರ ಸಂಜೆ 5-30ಕ್ಕೆ ವಿದುಷಿ ಶ್ರೀಮತಿ ರಮ್ಯಾ ಸುಧೀರ್ ಇವರಿಂದ “ಹರಿನಾಮ ಸಂಕೀರ್ತನೆ”. ವಾದ್ಯ ಸಹಕಾರ : ಕೀಬೋರ್ಡ್-ಶ್ರೀ ಅಮಿತ್ ಶರ್ಮಾ, ತಬಲಾ-ಶ್ರೀ ಸೋಮಶೇಖರ್. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಮುಖ್ಯರಸ್ತೆ, ಬಿಇಎಲ್ ಲೇಔಟ್, 3ನೇ ಬ್ಲಾಕ್, ವಿದ್ಯಾರಣ್ಯಪುರ, ಬೆಂಗಳೂರು-560097

 

WhatsApp

Join Now

Telegram

Join Now

Instagram

Join Now