ಮಾದಕ ವಸ್ತು ಮಾರಾಟ ಯತ್ನ ನಾಲ್ವರ ಬಂಧನ ಸುಮಾರು 10 ಲಕ್ಷ ಕ್ಕೂ ಹೆಚ್ಚು ಮೌಲ್ಯದ ಮಾದಕ ವಸ್ತು ವಶ

ವಿಜಯ ದರ್ಪಣ ನ್ಯೂಸ್…..

ಮೈಸೂರಿನಲ್ಲಿ  ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಾದಕ ವಸ್ತು ಮಾರಾಟ ಯತ್ನ ನಾಲ್ವರ ಬಂಧನ ಸುಮಾರು 10 ಲಕ್ಷ ಕ್ಕೂ ಹೆಚ್ಚು ಮೌಲ್ಯದ ಮಾದಕ ವಸ್ತು ವಶ

ತಾಂಡವಪುರ, ಮೈಸೂರು ಫೆಬ್ರವರಿ 23: ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ಮೇಲೆ ಮೈಸೂರು ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಮೈಸೂರಿನಲ್ಲಿ ಸೋಮವಾರವೂ ಕಾರ್ಯಾಚರಣೆ ಮುಂದುವರೆದಿದ್ದು ನಾಲ್ವರು ಡ್ರಗ್ಸ್ ಪೆಡ್ಲರ್ ಗಳ ಎಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಸಿವಿ ಪೊಲೀಸ್ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ನಗರದ ಮಂಡಿ ಪೋಲಿಸ್ ಠಾಣಾ ವ್ಯಾಪ್ತಿಯ ಉಮರ್ ಖಾಯಂ ರಸ್ತೆಯಲ್ಲಿ ನಿಂತಿದ್ದ KA 05-NK7805 ನಂಬರಿನ ಇನೋವಾ ಕಾರಿನ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದ ಸಂದರ್ಭದಲ್ಲಿ ನಿಷೇಧಿತ 103 ಗ್ರಾ ಎಂಡಿಎಂಎ ಸಿಕ್ಕಿದ್ದು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ಗೌಸಿಯಾನಗರದ ಜಿಯಾಉಲ್ಲ(28),ಲಷ್ಕರ್ ಮೊಹಲ್ಲಾದ ಜಾವೇದ್ ಅಹಮದ್(46),ಗೌಸಿಯಾ ನಗರದ ಸುಹೇಲ್ ಪಾಷ(19) ಮತ್ತು ಬೆಂಗಳೂರಿನ ನುಹೈದ್ ಖಾನ್(23) ಬಂಧಿತ ಆರೋಪಿಗಳು.

ಕಾರ್ಯಾಚರಣೆಯಲ್ಲಿ ಪಿಎಸ್ಐ ಲೇಪಾಕ್ಷಾ,ಸಿಬ್ಬಂದಿ ರೇವಣ್ಣ ಸಿದ್ದಪ್ಪ, ಮಧುಕುಮಾರ್,ಚೇತನ್,ಅಧಮ್ ಕಿರಣ್,ರಾಥೋಡ್ ಸೇರಿದಂತೆ ಹಲವರು ಭಾಗವಹಿಸಿದ್ದರು.

###################################

“ದಾಸ ಗಾನ ವೈಭವ”

ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 24, ಮಂಗಳವಾರ ಸಂಜೆ 7-00ಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವದ ಅಂಗವಾಗಿ “ದಾಸ ಗಾನ ವೈಭವ”. ಗಾಯನ : ಕುಮಾರಿ ಅವನಿ ಭಟ್, ಕೀಬೋರ್ಡ್ : ಶ್ರೀ ರಾಜೇಂದ್ರ ಬೆಂಡೆ, ತಬಲಾ : ಶ್ರೀ ಸರ್ವೋತ್ತಮ.

ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021