--Ads--

ಧರ್ಮಸ್ಥಳ ಸಂಸ್ಥೆ ಯಿಂದ  ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದ ಜೀರ್ಣೋದ್ಧಾರ ಅಭಿವೃದ್ಧಿ ಕಾಮಗಾರಿಗೆ ಒಂದು ಲಕ್ಷ ರೂ ಕೊಡುಗೆ 

On: July 10, 2026 5:53 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಧರ್ಮಸ್ಥಳ ಸಂಸ್ಥೆ ಯಿಂದ  ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದ ಜೀರ್ಣೋದ್ಧಾರ ಅಭಿವೃದ್ಧಿ ಕಾಮಗಾರಿಗೆ ಒಂದು ಲಕ್ಷ ರೂ ಕೊಡುಗೆ 

ತಾಂಡವಪುರ ಜುಲೈ 10 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಚಿಕ್ಕಯ್ಯನ ಛತ್ರ ಗ್ರಾಮದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದ ಜೀರ್ಣೋಧರ ಮತ್ತು ಅಭಿವೃದ್ಧಿ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸುಮಾರು ಒಂದು ಲಕ್ಷ ರೂಗಳ ಧನಸಹಾಯದ ಚೆಕ್ಕನ್ನು ಸಂಸ್ಥೆಯ ಅಧಿಕಾರಿಗಳು ದೇವಾಲಯದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳಿಗೆ ಅಸ್ತಾಂತರ ಮಾಡುವ ಮೂಲಕ ವಿತರಣೆ ಮಾಡಿದರು

ಬಳಿಕ ಶ್ರೀ ಕತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಜಿಲ್ಲಾ ಯೋಜನಾಧಿಕಾರಿಗಳಾದ ವಿಜಯಕುಮಾರ್ ನಾಗನಾಳ್ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ವೀರೇಂದ್ರ ಹೆಗಡೆ ಹಾಗೂ ಅವರ ಪತ್ನಿ ಹೇಮ ರವರು ಧರ್ಮಸ್ಥಳ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಬಡವರಿಗೆ ಹಲವಾರು ಸಂಘ-ಸಂಸ್ಥೆಗಳ ಆಸರೆಯಾಗಿದ್ದಾರೆ
ಸಂಘ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಶಾಲಾ ವಿತರಿಸಿ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಿದ್ದಾರೆ

ಅದೇ ರೀತಿ ನಮ್ಮ ಸಂಸ್ಥೆಯಿಂದ ಅಂಗನವಾಡಿ ಕಟ್ಟಡಕ್ಕೆ ಶಾಲಾ ಕಟ್ಟಡಕ್ಕೆ ದೇವಾಲಯದ ಜೀರ್ಣೋದ್ಧಾರ ಅಭಿವೃದ್ಧಿ ಕಾಮಗಾರಿಗೆ ಧನ ಸಹಾಯ ನೀಡುವ ಮೂಲಕ ಗ್ರಾಮೀಣ ಭಾಗದ ಸಂಘ ಸಂಸ್ಥೆಗಳಿಗೆ ಸಾರ್ವಜನಿಕರಿಗೆ ಆಸರೆಯಾಗಿದ್ದಾರೆ ಎಂದು ವಿಜಯ್ ಕುಮಾರ್ ರವರು ಸಂಸ್ಥೆಯ ಕಾರ್ಯವೈಕರಿಯನ್ನು ವಿವರವಾಗಿ ವಿವರಿಸಿದರು

ಇದೇ ವೇಳೆ ಮಾತನಾಡಿದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಎನ್ ಚಂದ್ರುರವರು ಧರ್ಮಸ್ಥಳ ಗ್ರಾಮಾ ಅಭಿವೃದ್ಧಿ ಸಂಸ್ಥೆ ವತಿಯಿಂದ ನಮ್ಮ ಗ್ರಾಮದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯಕ್ಕೆ ಸುಮಾರು ಒಂದು ಲಕ್ಷ ರೂಗಳ ಧನ ಸಹಾಯವನ್ನು ಮಾಡಿದ್ದಾರೆ

ಅದೇ ರೀತಿ ಶಿಕ್ಷಕ ಧರ್ಮಸ್ಥಳ ಸಂಸ್ಥೆಯವರು ಇಡೀ ರಾಜ್ಯದಲ್ಲಿ ಎಲ್ಲೆಲ್ಲಿ ಶಿಥಿಲ ವ್ಯವಸ್ಥೆಯಲ್ಲಿರುವ ದೇವಾಲಯಗಳು ಅಂಗನವಾಡಿ ಕಟ್ಟಡಗಳು ಶಾಲಾ ಕಥೆಗಳನ್ನು ಗುರುತಿಸಿ ಅದರ ಜೇಡೋಧರಕ್ಕೆ ತಮ್ಮ ಕರೆದ ಮಟ್ಟಿಗೆ ಧನ ಸಹಾಯ ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಆಸರೆಯಾಗಿದ್ದಾರೆ ಎಂದು ಧರ್ಮಸ್ಥಳ ಸಂಸ್ಥೆಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿಗಳಾದ ಕೆ ಧರ್ಮರಾಜ್ ದೇವಾಲಯದ ಟ್ರಸ್ಟಿನ ಅಧ್ಯಕ್ಷ ಸಿಎನ್ ಮಂಜುನಾಥ್ ಉಪಾಧ್ಯಕ್ಷರಾದ ಟಿ ಬಂಗಾರ ರಾಜು ಖಜಾಂಚಿ ಬಿ ಶ್ರೀನಿವಾಸ್ ಕಾರ್ಯದರ್ಶಿಗಳಾದ ಹರೀಶ್ ಚಂದ್ರಶೇಖರ್ ಮಾಜಿ ಗ್ರಾಮಪಂಚ ಸದಸ್ಯ ಸಿಎನ್ ಚಂದ್ರು ಭಾಸ್ಕರ್ ಮುಖಂಡರಾದ ಗಾಣಿಗ ಮಹದೇವು ಪುಟ್ಟರಾಜು ರವಿ ಮಹದೇವ್ ಸಂಸ್ಥೆಯ ಮೇಲ್ವಿಚಾರಕರಾದ ಕೆಬಿ ಮರು ಳಶ ಶಿವ ಪ್ರತಿನಿಧಿ ರೇಖಾ ವಾಣಿ ಸೇರದಂತೆ ಧರ್ಮಸ್ಥಳ ಸಂಸ್ಥೆಯ ಮಹಿಳಾ ಸಂಘದ ಸದಸ್ಯರುಗಳು ಹಾಗೂ ಮುಂತಾದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ