ಕೂರ್ಗಳ್ಳಿ ಪಬ್ಲಿಕ್ ಶಾಲೆ ಕೊಠಡಿ ಶಾಸಕ ಜಿಟಿ ದೇವೇಗೌಡ ಭೂಮಿ ಪೂಜೆ
ವಿಜಯ ದರ್ಪಣ ನ್ಯೂಸ್…..
ಕೂರ್ಗಳ್ಳಿ ಪಬ್ಲಿಕ್ ಶಾಲೆ ಕೊಠಡಿ ಶಾಸಕ ಜಿಟಿ ದೇವೇಗೌಡ ಭೂಮಿ ಪೂಜೆ

ತಾಂಡವಪುರ ಮಾರ್ಚ್ 2 ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೈಸೂರ್ ತಾಲೂಕು ಕೂರ್ಗಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎರಡು ಶಾಲಾ ಕೊಟ್ಟಡಿಯ ಕಟ್ಟಡದ ಪೂಜೆ, ಶಾಲೆಯ ಮುಖ್ಯ ದ್ವಾರದ ಭೂಮಿ ಪೂಜೆಯನ್ನು ಶಾಸಕ ಜಿ.ಟಿ.ದೇವೇಗೌಡ ನೇರವೇರಿಸಿದರು.
ಯೋಗ ನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಶ್ರೀನಿವಾಸ್, ಉಪನಿರ್ದೇಶಕ ಉದಯ್ ಕುಮಾರ್, ಗ್ರಾಮದ ಮುಖಂಡರಾದ ಜಿ.ಪಂ ಮಾಜಿ ಅಧ್ಯಕ್ಷ ಮಹದೇವು, ಗ್ರಾ.ಪಂ. ಮಾಜಿ ಸದಸ್ಯ ನಂಜುಂಡೇಗೌಡ, ಚೆನ್ನಪ್ಪ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ರೇವಣ್ಣ, ಆಕಾಶ್ ಪ್ಯಾಕೇಜಿಂಗ್ ಮಾಲೀಕ ಗುರುರಾಜ್, ಬಿಆರ್ ಸಿ ಗೀತಾ, ಇಸಿಓ ಸುಬ್ಬಾಶೆಟ್ಟಿ, ಸಿಆರ್ ಪಿ ದನಂಜಯ್, ಮುಖ್ಯಶಿಕ್ಷಕ ನಾಗರಾಜು, ರಿಟೈರ್ಡ್ ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಸತೀಶ್, ಪಂಚಾಯಿತಿ ಮಾಜಿ ಸದಸ್ಯ ಜಿಮ್ ರಾಮು, ಮಾದೇಶ್, ರಕ್ತದಾನಿ ಮಂಜು, ಪಂಚಾಯತಿ ಮಾಜಿ ಅಧ್ಯಕ್ಷೆ ನಾಗರತ್ನ, ಭೈರಪ್ಪ, ಧನಂಜಯ, ಜಿಮ್ ಪ್ರಕಾಶ್, ಮುದ್ದಪ್ಪ, ರಾಮಪ್ಪ, ಕೃಷ್ಣಪ್ಪ, ಕೃಷ್ಣ, ನಿಂಗೇಗೌಡ, ಮೀಸೆ ಇನ್ನಿತರರು ಉಪಸ್ಥಿತರಿದ್ದರು.
###############@@@@###############
ಒಳಮೀಸಲು: ಸರ್ಕಾರದ ನಿಲುವಿಗೆ ಮೈಸೂರು ಜಿಲ್ಲಾದಸಂಸ ಸ್ವಾಗತ
ತಾಂಡವಪುರ ಮಾರ್ಚ 3 ಒಳ ಮೀಸಲಾತಿ ವಿವಾದ ಈಗಾಗಲೇ ಹೈಕೋರ್ಟ್ನಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ಸುಮಾರು ೫೬ ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ವೇಳೆ ಹಳೇ ಮೀಸಲಾತಿ ಅನುಸರಿಸುವುದನ್ನು ಸ್ವಾಗತಿಸುತ್ತೇವೆ ಎಂದು ಲಕ್ಷ್ಮಿನಾರಾಯಣ ನಾಗವಾರ ಸ್ಥಾಪಿತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಸಂಚಾಲಕ ಭುಗತಗಳ್ಳಿ ಮಣಿಯಯ್ಯ ತಿಳಿಸಿದರು.
ಅವರು ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಒಳ ಮೀಸಲಾತಿ ವಿಚಾರದಲ್ಲಿ ಪರ ವಿರೋಧಗಳು ವ್ಯಕ್ತವಾಗುತ್ತಿವೆ. ಅಲ್ಲದೆ, ಜರಿಗೆ ತಂದಿರುವ ರೋಸ್ಟರ್ ಬಿಂದು ವಿರೋಧಿಸಿ ಹಾಗೂ ಇದು ಜಾರಿ ಆದರೆ ಬಲಗೈ ಸಮುದಾಯಕ್ಕೆ ಅನ್ಯಾಯ ಆಗಲಿದೆ ಎಂಬ ಕೂಗು ಕೇಳಿ ಬಂದಿದೆ. ಹೀಗಾಗಿ ಈಗ ಸರ್ಕಾರ ನೇಮಕಾತಿ ವೇಳೆ ಹಳೇ ಮೀಸಲಾತಿ ಪದ್ಧತಿ ಜಾರಿಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಹೈಕೋರ್ಟ್ ತೀರ್ಪು ಬಂದ ನಂತರ ಸರ್ಕಾರ ೧೦೧ ಜಾತಿಗಳಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆಲಗೂಡು ಶಿವಣ್ಣ, ಈಶ್ವರ್ ಬೊಮ್ಮನಹಳ್ಳಿ, ಬೊಕ್ಕಳ್ಳಿ ಲಿಂಗಯ್ಯ, ವಿ.ಎಸ್. ಮೋಹನ್ ಕುಮಾರ್, ಎಸ್.ಬಿ. ಸಣ್ಣಸ್ವಾಮಿ, ಶಾಂತಕುಮಾರ್ ಚೌಹಳ್ಳಿ, ಕಿರಣ್ಕುಮಾರ್, ರಾಜಶೇಖರ್, ಕಾಂತರಾಜ್ ಸಿ.ಭುಗತಗಳ್ಳಿ ಇದ್ದರು.

