ವಿಜಯ ದರ್ಪಣ ನ್ಯೂಸ್….
ಹರಿಕಥೆ ದಾಸರೊಳಗೊಬ್ಬ ಸಮಾಜ ಚಿಕಿತ್ಸಕ!

ಜನ ಕೆಡುಕು ಮಾಡದಿರಲಿ ಹಾಗೂ ಅವರು ಸದ್ಗುಣ ಸಂಪನ್ನತೆ ಬೆಳೆಸಿಕೊಳ್ಳಲಿ ಎಂದು ಈ ಪುರಾಣ, ಪುಣ್ಯ ಕಥೆಗಳನ್ನು ಪ್ರಾಯಶಃ ಹೆಣೆಯ ಲಾಗಿದ್ದಿರಬಹುದು. ಅಂದಿನ ಸಮಾಜಕ್ಕೆ ಇವು ನೀಡಿರುವ ಕೊಡುಗೆ ಅಪಾರವಾದು ದ್ದಾದರೂ, ಅದೇ ಕಾಲಕ್ಕೆ ಈ ಕಥೆಗಳು ಮೌಡ್ಯ ಕಂದಾಚಾ ರಗಳನ್ನು ಬಿತ್ತಿ ಬೆಳೆಸುವಲ್ಲಿಯೂ ತಮ್ಮ ಪಾಲು ನೀಡಿವೆ. ಅದೇನೇ ಆದರೂ ಬಲು ಹಿಂದಿನಿಂ ದಲೂ ಎಲ್ಲ ರೀತಿಯ ‘ಕಥೆ’ಗಳು ನಮ್ಮ ಜನ ಜೀವನದಲ್ಲಿ ಹಾಸುಹೊಕ್ಕಿವೆ. ಅದರಲ್ಲೂ ಒಂದು ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ‘ಹರಿ ಕಥೆ’ ಮಾಡಿಸುವ ಪರಿಪಾಠ ಪ್ರಸಿದ್ದಿ ಪಡೆದಿತ್ತು. ಇದೀಗ, ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಈ ಹರಿಕಥೆ ಹಾಗೂ ಪೌರಾಣಿಕ ನಾಟಕಗಳಲ್ಲು ಕೆಲವೆಡೆ ಅಸಭ್ಯ ವರ್ತನೆ ರಂಗದ ಮೇಲೆಯೇ ನಡೆಯುತ್ತಿರುವುದು ವಿಪರ್ಯಾಸ! ಆದರೆ ಅದಕ್ಕೆ ಅಪವಾದವೆಂಬಂತೆ ಎಲ್ಲರೊಳ ಗೊಂದಾಗಿ, ಸಾಮಾಜಿಕ ಮೌಲ್ಯಗಳನ್ನು ಬಿತ್ತು ತಾ, ಸಮ ಸಮಾಜ ಕಟ್ಟಲು ಈ ‘ಹರಿಕಥೆ’ ಯನ್ನೇ ಸಾಧನ ಮಾಡಿಕೊಂಡು, ಜನ ಜಾಗೃತಿ ಮೂಡಿಸುತ್ತಿರುವವರು ಶ್ರೀ ಶಿವಾರ ಉಮೇಶ್ ಎನ್ನುವ ಕೀರ್ತನಕಾರರು.
ಅರಳು ಹುರಿದಂತೆ ಪಟಪಟನೆ ಸ್ಪುಟವಾಗಿ ಮಾತನಾಡುವ ಈ ಹರಿಕಥೆ ದಾಸರ ಕಥಾ ವಾಚನ ಕೇಳುತ್ತಿದ್ದಂತೆ ಮೈ ರೋಮಗಳೆಲ್ಲ ಎದ್ದು ನಿಲ್ಲತ್ತವೆ. ಅಷ್ಟರಮಟ್ಟಿಗೆ ಇವರು ಕಥೆಗೆ ಜೀವ ತುಂಬುತ್ತಾರೆ; ಅಷ್ಟೇ ಅಲ್ಲ ಜನರ ಮನ ಸ್ಸನ್ನೂ ಸೂಜಿಗಲ್ಲಿನಂತೆ ಸೆಳೆದು ಬಿಡುತ್ತಾರೆ. ಇವರ ಉಪಕಥೆಗಳು ಕಣ್ಣಂಚನ್ನು ಒದ್ದೆಯಾಗಿ ಸುತ್ತವೆ; ತುಟಿಯಂಚುಗಳು ಬಿರಿಯುವಂತೆ ಮಾಡುತ್ತವೆ. ಅಂಥ ಅದ್ಭುತವಾದ ವಸ್ತು ವಿಷ ಯಗಳನ್ನು ಇವರು ಆರಿಸಿಕೊಳ್ಳುತ್ತಾರೆ. ಇವರ ಹಾವ-ಭಾವ, ಅಭಿನಯ, ಹಾಡು, ಕಂದ, ಮಾತು, ಕಥೆ, ವಿಡಂಬನೆ, ಹಾಸ್ಯ ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ. ತಾವು ಬೆಳೆದು ಬಂದ ಹಾದಿಯನ್ನು ಮರೆಯದೆ, ಈಗಲೂ ಕೂಡು ಕುಟುಂಬದಲ್ಲಿ ಬದುಕುತ್ತಿರುವ, ಶಿವಾರ ಉಮೇಶ್ ಅವರು ರೇಷ್ಮೆ ಕೃಷಿಯಲ್ಲಿ ಡಿಪ್ಲೋ ಮಾ ಗಳಿಸಿದ್ದಾರೆ. ಆದರೂ ಈ ಕೀರ್ತನೆ ಕಲೆ ಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಆರಾಧಿ ಸುತ್ತಿದ್ದಾರೆ; ಅದರೊಳಗಿನ ಮೌಡ್ಯದ ಕಳೆಯನ್ನು ಕಿತ್ತು ಹಾಕುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ಅಂತೆಯೇ ಈ ಹರಿಕಥೆ ಎಂದಾಗ ಥಟ್ಟನೆ ನೆನಪಾಗುವುದು ದಿವಂಗತ ಶ್ರೀ ಗುರುರಾಜುಲು ನಾಯ್ಡು ಎನ್ನುವ ದೈತ್ಯ ಪ್ರತಿಭೆ. 80ರ ದಶಕದಲ್ಲಿ ಎಲ್ಲೆಡೆ ಇವರದ್ದೇ ಅಬ್ಬರವಿತ್ತು. ಆ ಕಾಲದಲ್ಲಿ ಇವರು ”ಶುಕ್ಲಾಂ ಭರದರಂ, ಶಶಿ ವರ್ಣಂ, ಚತುರ್ಭುಜಂ, ಪ್ರಸನ್ನ ವದನಂ, ಜ್ಯಾಯೇ, ಸರ್ವ ವಿಘೋಪ ಶಾಂತಯೇ….!” ಎಂದು ಕೀರ್ತನೆ ಆರಂಭಿಸಿದರೆ ಸುತ್ತಮುತ್ತಲಿನವರ ಕಿವಿ ನಿಮಿರುತ್ತಿದ್ದವು. ಜೊತೆಗೆ “ಮೆರೆದ ಪುರದೊಳಗೆ ಹಿರಿಯವನೆನಿಸಿದ, ಪರಶಿವ….” ಎನ್ನುವ ಇವರ ಸುಶ್ರಾವ್ಯ ಸಂಗೀತವನ್ನು ಅಂದು ಕೇಳುವುದೇ ಚೆಂದವಿತ್ತು ಆನಂತರ ಇವರು ಕಥಾ-ಕಾಲ ಕ್ಷೇಪಕ್ಕೆ ತೊಡಗಿ, ಕಥೆ, ಉಪಕಥೆ ಹಾಗೂ ಹಾಸ್ಯ ಸನ್ನಿವೇಶಗಳ ಮೂಲಕ ಮನರಂಜನೆ ನೀಡುತ್ತಲೇ ಜ್ಞಾನದ ಬೆಳಕನ್ನೂ ಬೀರುತ್ತಿದ್ದರು. ಅಂಥ ಹಲವು ದಿಗ್ಗಜರ ಪ್ರೇರಣೆಯ ನೆರಳಲ್ಲಿ ಬೆಳೆದು ಹರಿಕಥೆ ಮಾಡುವುದನ್ನು ಇಂದು ವೃತ್ತಿಯನ್ನಾಗಿ ಮಾಡಿ ಕೊಂಡಿರುವವರು ಶ್ರೀಯುತ ಶಿವಾರ ಉಮೇಶ್, ಇವರು ಕಲೆಯನ್ನು ತಂದೆಯಿಂದ ಬಳುವಳಿ ಪಡೆದಿದ್ದರೂ ಅದಕ್ಕೆ ಇಂದು ಹೊಸ ಭಾಷ್ಯ ಬರೆದಿದ್ದಾರೆ. ಅದ್ಭುತವಾದ ಕಂಠಸಿರಿ ಹೊಂದಿ ರುವ ಇವರು ಸ್ವಯಂ ಆಸಕ್ತಿಯಿಂದ ಓದಿನ ಅಭಿರುಚಿ ಹತ್ತಿಸಿಕೊಂಡು, ಬಯಲು ವಿದ್ಯಾಲ ಯದಲ್ಲೇ ಹೆಚ್ಚು ಕಲಿತು, ತಮ್ಮ ಹರಿಕಥೆಯ ಮೂಲಕವೇ ಸಾಮಾಜಿಕ ಮೌಲ್ಯಗಳನ್ನು ಸಮಾ ಜದಲ್ಲಿ ಬಿತ್ತುತ್ತಿದ್ದಾರೆ. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ, ತಾವು ಕಾರ್ಯಕ್ರಮ ನೀಡಲು ಹೋದಲ್ಲೆಲ್ಲಾ ಆ ಸಂದರ್ಭ ಸನ್ನಿವೇಶಕ್ಕೆ ಅನು ಗುಣವಾಗಿ ತಾವೇ ಕಥೆ, ಉಪಕಥೆ, ಹಾಡು, ಹಾಸ್ಯ ಸನ್ನಿವೇಶಗಳನ್ನು ಹೆಣೆದು ಅವುಗಳ ಮೂಲಕವೇ ಮೌಡ್ಯವನ್ನು ಕಿತ್ತೊಗೆಯುವ ಪುಣ್ಯದ ಕೆಲಸವನ್ನು ತುಂಬಾ ಚಾಣಾಕ್ಷತೆಯಿಂದ ಮಾಡುತ್ತಾ ಬಂದಿದ್ದಾರೆ.
ಅಂತೆಯೇ ಅಪ್ಪು ಅವರು ವಿಧಿವಶರಾದಾಗ ಅವರ ಸ್ನೇಹಿತರ ಒತ್ತಾಯದ ಮೇರೆಗೆ ತಾವೇ ಕಟ್ಟಿ ಹಾಡಿದ “ನಾಲ್ಕು ಜನರ ಹೆಗಲಲ್ಲಿ, ಕರುನಾಡ ಬೀದಿಯಲಿ, ಯಾರದಪ್ಪ ಮೆರವಣಿಗೆ, ಅಪ್ಪುರವರ ಮೆರವಣಿಗೆ” ಎನ್ನುವ ಹಾಡು ಇವರಿಗೆ ತುಂಬಾ ಪ್ರಸಿದ್ದಿಯನ್ನು ತಂದುಕೊಟ್ಟಿದೆ. ಇದನ್ನು ಉಮೇ ಶ್ ಅವರೇ ತಮ್ಮ ಸಂದರ್ಶನ ಒಂದರಲ್ಲಿ ಮನ ಬಿಚ್ಚಿ ಹೇಳಿಕೊಂಡಿದ್ದಾರೆ. ಹಾಗೆಯೇ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಅವರು ಹಾಡಿದ “ಕೋಟಿ ಕೋಟಿ ಜನರ ಹೃದಯ ಮಂದಿರ, ಅಯೋಧ್ಯೆಯ ಶ್ರೀರಾಮ ಮಂದಿರ” ಎನ್ನುವ ಹಾಡಿನ ಮೂಲಕ “ಎಲ್ಲರ ಮನದಲ್ಲಿ ನೆಲೆಸಿರುವ ರಾಮ ನಮ್ಮೊಳಗಿನ ಧರ್ಮ ದ್ವೇಷ ನನ್ನ ನಾಶಮಾಡಿ, ಭರತ ಮಾತೆಯ ಮಕ್ಕಳೆಲ್ಲರೂ ಅಕ್ಕರೆಯಿಂದ ಒಂದುಗೂಡಿ ಬದುಕುವಂತೆ ಮಾಡಲಿ, ನಾವೆಲ್ಲರೂ ಒಂದೇ ಎನ್ನುವ ಭಾವನೆ ಬರುವಂತೆ ಮಾಡಲಿ” ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಕಾರ್ಯಕ್ರಮ ನೀಡುತ್ತಿರುವ ಇವರಿಂದ ಕಾರ್ಯಕ್ರಮ ಮಾಡಿಸಲು ಜನ ಇಂದು ಮುಗಿಬೀಳುತ್ತಿದ್ದಾರೆ. ಅಷ್ಟರಮಟ್ಟಿಗೆ ಇವರ ಕಾರ್ಯಕ್ರಮ ಜನಮನ ತಟ್ಟಿದೆ
ನಮ್ಮ ಪುರಾಣ ಪುಣ್ಯ ಕಥೆ, ಆಚಾರ ವಿಚಾರಗಳು ಸೇರಿದಂತೆ ಎಲ್ಲ ಒಳಿತನ್ನು ಪೋಷಿಸುತ್ತಾ ಬಂದಿರುವ ಇವರು “ನಮ್ಮ ಭವ್ಯ ಭಾರತದ ಭದ್ರ ಬುನಾದಿ ಸಂವಿಧಾನ. ಇವತ್ತು ನಾವೆಲ್ಲ ನೆಮ್ಮದಿ ಯಾಗಿ ಬದುಕಲಿಕ್ಕೆ ಈ ಸಂವಿಧಾನವೇ ಕಾರಣ. ಈ ಸಂವಿಧಾ ನವನ್ನು ರಚಿಸಿ ಈ ಭವ್ಯ ಭಾರತಕ್ಕೆ ಹೊಸ ಭಾಷ್ಯ ಬರೆದವರು ಬಾಬಾಸಾಹೇಬ್ ಅಂಬೇಡ್ಕರ್. ಇವರ ಬಗ್ಗೆ ಇವತ್ತು ಸರಿಯಾಗಿ ತಿಳಿದುಕೊಂಡಿರುವವರಿಗಿಂತ ತಪ್ಪಾಗಿ ಅರ್ಥೈಸಿಕೊಂಡಿರುವವರ ಸಂಖ್ಯೆಯೇ ಹೆಚ್ಚು. ನೆಲ ಉತ್ತು ಬಿತ್ತೋ ರೈತನಿಗೆ, ಗಡಿ ಕಾಯೋ ಯೋಧನಿಗೆ, ಚರಂಡಿ ಗೋರುವ ಸಫಾಯಿ ಕರ್ಮಚಾರಿಗೆ, ದೇವಸ್ಥಾನದಲ್ಲಿ ಪೂಜೆ ಮಾಡುವ ಪೂಜಾರಪ್ಪನಿಗೆ, ಹೀಗೆ ಸರ್ವರಿಗೂ ಸಮಾನತೆ ಕಲ್ಪಿಸಿದಂತಹ ಜೀವ ಅದು. ಇಡೀ ಪ್ರಪಂಚವೇ ಗೌರವಿಸುವ ಈ ಪ್ರಬುದ್ಧ ಭಾರತದ ಒಂದೇ ಒಂದು ವ್ಯಕ್ತಿತ್ವ ಅಂದ್ರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್, ಅಂಥವರನ್ನು ಒಂದು ಕೇರಿಗೆ, ಒಂದು ಜನಾಂಗಕ್ಕೆ ಸೀಮಿತಗೊಳಿಸುವುದೇ ಅಕ್ಷಮ್ಯ ಅಪರಾಧ! ಅವರು ನಮಗೆ ಮಾತ್ರ ಸೇರಿದವರು ಅನ್ನುವುದು ಹೇಗೆ ತಪ್ಪೋ, ಹಾಗೆಯೇ ಅವರು ನಿಮಗೆ ಮಾತ್ರ ಸೇರಿದವರು ಅನ್ನೋದು ಕೂಡ ತಪ್ಪೇ! ಯಾಕೆ ಅಂದ್ರೆ ತನ್ನಿಡೀ ಕುಟುಂಬವನ್ನ ಬಲಿಕೊಟ್ಟು, ತನ್ನ ಸಂತೋಷವನ್ನು ಬದಿಗೊತ್ತಿ, ಎದೆಯ ತುಂಬ ನೋವು ತುಂಬಿಕೊಂಡಿದ್ರೂ ಜಗತ್ತಿಗೆ ನಗುವನ್ನು ಹಂಚಿದಂತಹ ಧೀಮಂತ ವ್ಯಕ್ತಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಅಂಥವರನ್ನು ಗೌರವಿಸುವ ಪ್ರಭುದ್ಧ ಮನಸ್ಸು ನಮಗೂ ಬೇಕಲ್ವಾ?!” ಎನ್ನುವ ಕಟುಸತ್ಯವನ್ನು ಒತ್ತಿ ಹೇಳುತ್ತಾರೆ. “ಬಸವ-ಬುದ್ದ ನಡೆದ ಹಾದಿ, ಪ್ರಬುದ್ಧತೆ ನೀವೂ…” ಎನ್ನುವ ಹಾಡನ್ನು ತಾವೇ ಸ್ಥಳದಲ್ಲಿ ಕಟ್ಟಿ ಹಾಡಿ ಅರಿವು ಮೂಡಿಸುತ್ತಾರೆ. “ಯಾರ ಹೊಲ, ಯಾರ ಮನೆ, ನೆಚ್ಚಿ ಕುಂತೆ ಸುಳ್ಳೇ ಎಲ್ಲಾ! ನಾನು ನನ್ನದು ಎನ್ನುತಿಯಲ್ಲ, ನೀ ಹೋಗುವುದೇ ಗೊತ್ತೇ ಇಲ್ಲಾ!” ಎನ್ನುವ ಜೀವನ ಪಾಠ ಹೇಳುವ ಶರಣರ ನೂರಾರು ತತ್ವ ಪದಗಳನ್ನೂ ಜನಮಾನಸದಲ್ಲಿ ಬಿತ್ತಿ ಬೆಳೆಯುತ್ತಿದ್ದಾರೆ. ಇವರ ಪ್ರತಿ ಮಾತು, ಹಾಡಿನಲ್ಲೂ ಇವರ ಅಧ್ಯಯನದ ಆಳ-ಅಗಲ ಗೋಚರಿಸುತ್ತದೆ. ಹರಿಕಥೆಯ ಮೂಲಕವೇ ಇವರು ಜೀವನದ ನೈಜ ಘಟನೆಯನ್ನು ಮನಮುಟ್ಟುವಂತೆ ಹೇಳುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಈ ಮಹನೀಯರನ್ನು ಈ ವರ್ಷದ ‘ಸಂಸ್ಕೃತಿ ಪುರಸ್ಕಾರ-2026’ ನೀಡಿ ಗೌರವಿಸಲು ನಮ್ಮ ರಾಮನಗರದ ‘ಸಂಸ್ಕೃತಿ ಸೌರಭ ಟ್ರಸ್ಟ್’ ನ ಅಧ್ಯಕ್ಷರಾದ ಡಾ.ರಾ.ಬಿ. ನಾಗರಾಜ್ ಮುಂದಾಗಿರುವುದು ತುಂಬಾ ಹೆಮ್ಮೆ ಹಾಗೂ ಸಂತಸ ತಂದಿದೆ. ಅವರಿಗೆ ಹಾಗೂ ಅವರ ತಂಡಕ್ಕೆ ಆನಂತ ವಂದನೆಗಳು.
ಕಳೆದ ಮೂವತ್ನಾಲ್ಕು ವರ್ಷಗಳಿಂದ ಕಲಾ ಲೋಕದಲ್ಲಿ ಸಂಚರಿಸುತ್ತಾ, ಗಾನ ಗಾರುಡಿಗ ಡಾ.ಪಿ.ಬಿ.ಶ್ರೀನಿವಾಸ್ ಆದಿಯಾಗಿ ನಾಡಿನ ನೂರಾರು ದಿಗ್ಗಜರೊಡಗೂಡಿ ಗಾಯನ ಕಾರ್ಯಕ್ರಮ ನಡೆಸಿರುವವರು ರಾ.ಬಿ.ನಾಗರಾಜ್. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಂಗೀತ ರಸಿಕರನ್ನು ಸಂತಸಪಡಿಸುತ್ತಿರುವ ಇವರು ಅಷ್ಟಕ್ಕೇ ತೃಪ್ತಿ ಪಡದೆ ಕಳೆದ ಹತ್ತೊಂಬತ್ತು ವರ್ಷಗಳಿಂದ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ನಾಡಿನ ವಿವಿಧ ಕ್ಷೇತ್ರದ ಕಲಾವಿದ ರನ್ನು ಗುರುತಿಸಿ ಅವರಿಗೆ ‘ಸಂಸ್ಕೃತಿ ಪುರಸ್ಕಾರ’ ನೀಡುವ ಮಹತ್ಕಾ ರ್ಯವನ್ನೂ ಪ್ರತಿ ವರ್ಷ ಮಾಡುತ್ತಾ ಬಂದಿದ್ದಾರೆ. ಅಂತೆಯೇ ಈ ವರ್ಷದ ಪುರಸ್ಕೃತರ ಪಟ್ಟಿಯಲ್ಲಿ ನಮ್ಮ ಶಿವಾರ ಉಮೇಶ್ ಎನ್ನುವ ಅಪರೂಪದ ಕೀರ್ತನಕಾರರು ಆಯ್ಕೆಯಾಗಿ ಪ್ರಶಸ್ತಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ರಾ.ಬಿ.ಯವರ ಈ ನಿಸ್ವಾರ್ಥ ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು! ಶರಣು ಶರಣಾರ್ಥಿ, ಎಲ್ಲರಿಗೂ ಒಳಿತಾಗಲಿ.












