--Ads--

ಫೈಓವ‌ರ್, ರಸ್ತೆ ಅಗಲೀಕರಣಕ್ಕೆ 561 ಮರ ತೆರವು ಪ್ರಸ್ತಾಪ; ಸಾರ್ವಜನಿಕರಿಂದ ಆಕ್ಷೇಪಕ್ಕೆ ಅರ್ಜಿ

On: May 7, 2026 4:45 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಫೈಓವ‌ರ್, ರಸ್ತೆ ಅಗಲೀಕರಣಕ್ಕೆ 561 ಮರ ತೆರವು ಪ್ರಸ್ತಾಪ; ಸಾರ್ವಜನಿಕರಿಂದ ಆಕ್ಷೇಪಕ್ಕೆ ಅರ್ಜಿ

ತಾಂಡವಪುರ ಮೇ ಐದು: ಬೆಂಗಳೂರು ರಸ್ತೆಯ ಮೈಸೂರು ಮಣಿಪಾಲ್ ಆಸ್ಪತ್ರೆ ಬಳಿ ಪ್ರೈಓವ‌ರ್ ನಿರ್ಮಾಣ ಹಾಗೂ ನಂಜನಗೂಡು, ತಿ.ನರಸೀಪುರ ರಸ್ತೆಯ ಅಗಲೀಕರಣಕ್ಕಾಗಿ 561 ಮರಗಳ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮನವಿ ಮಾಡಿದ್ದು, ಈ ಸಂಬಂಧ ಅರಣ್ಯ ಇಲಾಖೆ ಮೇ.7ರಂದು ಸಂಜೆ 5 ಗಂಟೆಯೊಳಗೆ ಆಕ್ಷೇಪಣೆಯಿದ್ದರೆ ಇ-ಮೇಲ್ ಅಥವಾ ಅಂಚೆ ಮೂಲಕ ಸಲ್ಲಿಸುವಂತೆ ಕೋರಿದೆ.

ಮಣಿಪಾಲ್ ಆಸ್ಪತ್ರೆ ಕಡೆಯಿಂದ ಸಿದ್ದಿಕ್ಕಿ ನಗರ. ಬನ್ನಿಮಂಟಪ ಹಾಗೂ ಫೌಂಟೇನ್ ವೃತ್ತದ ಕಡೆಗೆ ಬರುವ ರಸ್ತೆಯಲ್ಲಿ ಕೆಲವು ಮರಗಳು ಫೈಓವರ್ ನಿರ್ಮಾಣಕ್ಕೆ ಅಡಚಣೆಯಾಗಿದ್ದು, ಅವುಗಳನ್ನು ತೆರವು ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮನವಿ ಮಾಡಿದೆ.

ಅಲ್ಲದೆ, ಮೈಸೂರು ಊಟಿ ನಂಜನಗೂಡು ರಸ್ತೆಯಲ್ಲಿ ಮಂಡಕಳ್ಳಿ, ಕಡಕೊಳ ಬಳಿ, ತಿ.ನರಸೀಪುರ ರಸ್ತೆ ಅಗಲೀಕರಣಕ್ಕೆ ವರುಣ ವೃತ್ತ, ದುದ್ದಗೆರೆ, ಪುಟ್ಟೇಗೌಡನಹುಂಡಿ, ಎಂ.ಸಿ.ಹುಂಡಿ ಬಳಿಯೂ ಕೆಲವು ಮರಗಳನ್ನು ತೆರವು ಮಾಡುವಂತೆ ಆರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಪುರಸ್ಕರಿಸಿರುವ ಅರಣ್ಯ ಇಲಾಖೆ ಸಾರ್ವಜನಿಕ ರಿಂದ ಆಕ್ಷೇಪಣೆಗೆ ಕಾಲಾವಕಾಶ ನೀಡಿದೆ.

ಫೈಓವರ್‌ಗೆ 350 ಮರ ಹನನ: ಮೈಸೂರು-ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ನಿರ್ಮಿಸುತ್ತಿರುವ ಫೈಓವರ್ ವಿಸ್ತರಣೆಗೆ 350 ಮರಗಳನ್ನು ತೆರವು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಪ್ರೈಓವರ್ ಕಾಮಗಾರಿಗೆ ಬೃಹತ್ ಫಿಲ್ಲರ್ ನಿರ್ಮಾಣ ಕಾರ್ಯ ಬಿರುಸಾಗಿ ಸಾಗಿದೆ. ರಿಂಗ್‌ ರಸ್ತೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಪ್ರೈಓವರ್‌ಗೆ ಬನ್ನಿಮಂಟಪದ ರಸ್ತೆ, ಸಿದ್ದಿಕ್ಕಿನಗರದ ರಸ್ತೆ ಹಾಗೂ ರಿಂಗ್ ರಸ್ತೆಯ ಎರಡೂ ಬದಿಯಲ್ಲಿರುವ ಮರಗಳನ್ನು ತೆರವು ಮಾಡಲು ಗುರುತಿಸಲಾಗಿದೆ.

ಫೈಓವರ್‌ಗೆ ಸಿದ್ದಿಕ್ಕಿನಗರದಿಂದ ಫೌಂಟೇನ್ ವೃತ್ತದ ಕಡೆಗೆ ಬರುವ ರಸ್ತೆಯಲ್ಲಿ 19 ಮರ, ಫೈಓವರ್ ನಿರ್ಮಾಣ ಕಾಮಗಾರಿಗೆ ತೆರವು ಮಾಡಲು ಗುರುತಿಸಿರುವ ಮರಗಳು.ಬನ್ನಿಮಂಟಪದ ರಸ್ತೆಯ ಪಾರ್ಕ್ ಆವರಣದಲ್ಲಿ ರುವ 256 ಗಿಡ, ಮರ, ಮಣಿಪಾಲ್ ಜಂಕ್ಷನ್ ನಿಂದ ಹುಣಸೂರು ಕಡೆಗೆ ಹೋಗುವ ರಿಂಗ್ ರಸ್ತೆಯ ವಿಭಜಕದಲ್ಲಿರುವ 52 ಮರ, ಮಣಿಪಾಲ್ ಜಂಕ್ಷನ್‌ ನಿಂದ ಮಹದೇವಪುರ(ಬನ್ನೂರು) ಕಡೆಗೆ ಹೋಗುವ ರಿಂಗ್ ರಸ್ತೆಯ ವಿಭಜಕದಲ್ಲಿರುವ 20 ಮರಗಳನ್ನು ತೆರವು ಮಾಡಲು ಗುರುತಿಸ ಲಾಗಿದೆ. ಈ 350 ಮರಗಳಲ್ಲಿ 3 ಶ್ರೀಗಂಧದ ಮರಗಳು ಸೇರಿದಂತೆ 347 ಜಾತಿಯ ಮರಗಳು ಸೇರಿವೆ. ಮೈಸೂರು-ನಂಜನಗೂಡು(ರಾಷ್ಟ್ರೀಯ ಹೆದ್ದಾರಿ 766) ಮುಖ್ಯರಸ್ತೆಯಲ್ಲಿ ಕಡಕೊಳದ ಟಿವಿಎಸ್ ಕಾರ್ಖಾನೆ ವೃತ್ತ ಹಾಗೂ ಮಂಡಕಳ್ಳಿ ಬಳಿ ರಸ್ತೆ ಅಗಲೀಕರಣಕ್ಕೆ 15 ಮರ ತೆರವಿಗೆ ಗುರುತಿಸಲಾಗಿದೆ. ಕಡಕೊಳದ ಟಿವಿಎಸ್ ಸರ್ಕಲ್ ಬಳಿ 11 ಮರ ಹಾಗೂ ಮಂಡಕಳ್ಳಿ ಬಳಿ 4 ಮರಗಳು ಸೇರಿವೆ.

ತಿ.ನರಸೀಪುರ(ರಾಷ್ಟ್ರೀಯ ಹೆದ್ದಾರಿ 766) ರಸ್ತೆಯ ಅಗಲೀಕರಣ ಕಾಮಗಾರಿಗಾಗಿ ವಿವಿಧೆಡೆ 196 ಮರಗಳನ್ನು ತೆರವು ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮನವಿ ಮಾಡಿದೆ. ಅದರಲ್ಲಿ ವರುಣ ವೃತ್ತದಲ್ಲಿ 26 ಮರ, ದುದ್ದಗೆರೆಯಿಂದ ಪುಟ್ಟೇಗೌಡನಹುಂಡಿವರೆಗೆ ರಸ್ತೆಯ ಎರಡೂ ಬದಿಯಲ್ಲಿರುವ 110 ಮರ ಹಾಗೂ ಎಂ.ಸಿ.ಹುಂಡಿ ಬಳಿ ರಸ್ತೆ ಬದಿಯಲ್ಲಿರುವ 60 ಮರಗಳನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

ಅರಣ್ಯ ಇಲಾಖೆ ಪ್ರತ್ಯೇಕ ಮೂರು ಸ್ಥಳಗಳಲ್ಲಿ 561 ಮರಗಳ ತೆರವು ಮಾಡಲು ಹೆದ್ದಾರಿ ಪ್ರಾಧಿಕಾರ ಕೋರಿರುವ ಮನವಿ ಮೇರೆಗೆ ಸಾರ್ವಜನಿಕರಿಂದ ಆಕ್ಷೇಪವಿದ್ದರೆ ಸಲ್ಲಿಸುವಂತೆ ಕೋರಿದೆ.ಇ-ಮೇಲ್ ಹಾಗೂ ಅಂಚೆ ಮೂಲಕವೂ ಮರಗಳ ಹನನಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೇ.7ರಂದು ಸಂಜೆ 5.30ರೊಳಗೆ ಆಕ್ಷೇಪಣೆ ಸಲ್ಲಿಸಲು ಗಡುವು ನೀಡಲಾಗಿದೆ.

ಸಭೆ ಕರೆಯಲು ಪರಿಸರಕ್ಕಾಗಿ ನಾವು ಸಂಘಟನೆ ಮನವಿ 561 ಮರಗಳನ್ನು ಕಡಿಯಲು ಮಾಹಿತಿ ನೀಡದಿರುವುದು ಸರಿಯಲ್ಲ. ಇದರಿಂದ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವುದಾದರೂ ಹೇಗೆ? ಇದು ತುಂಬಾ ಗಂಭೀರವಾದ ಲೋಪವಾಗಿದೆ. ಆದುದರಿಂದ 561 ಮರಗಳನ್ನು ಕಡಿಯಲು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅನುಕೂಲ ಆಗುವಂತೆ, ಈ ವಿಷಯದ ಬಗ್ಗೆ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸುತ್ತೇವೆ. ಕನಿಷ್ಠ 10 ದಿನಗಳು ಕಾಲಾವಕಾಶ ಕೊಡಲು ಮತ್ತು ನಿಮ್ಮ ವ್ಯಾಪ್ತಿಯಲ್ಲಿ ಇದುವರೆಗೆ ಮಾಡಿದಂತೆ ಸಾರ್ವಜನಿಕ ಅಹವಾಲು ಸಭೆ ಕರೆಯಬೇಕೆಂದು ಪರಿಸರಕ್ಕಾಗಿ ನಾವು ಸಂಘಟನೆಯ ಎ.ಟಿ.ರಾಮಸ್ವಾಮಿ, ಪರಶುರಾಮೇಗೌಡ, ಆಂಜನೇಯರೆಡ್ಡಿ, ಎ.ಎಸ್‌.ಕವಿತಾ, ಪಾರ್ವತಿ ಶ್ರೀರಾಮ್‌, ಲೀಲಾವೆಂಕಟೇಶ್‌, ಭಾಗ್ಯ ಶಂಕರ್‌, ಅಂಜನಾ, ಪ್ರಭಾ ನಂದೀಶ್‌, ಗಾಯಿತ್ರಿ, ಮಧುಶ್ರೀ, ಕುಸುಮಾ ಆಯರಹಳ್ಳಿ, ಭಾನುಮೋಹನ್‌ ಇನ್ನಿತರರು ಮನವಿ ಮಾಡಿದರ

WhatsApp

Join Now

Telegram

Join Now

Instagram

Join Now