--Ads--

ಅದ್ದೂರಿಯಾಗಿ ನಡೆದ ಕರಗ, ಊರಹಬ್ಬ , ಶ್ರೀನಿವಾಸ ಕಲ್ಯಾಣೋತ್ಸವ

On: May 12, 2026 4:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಅದ್ದೂರಿಯಾಗಿ ನಡೆದ ಕರಗ, ಊರಹಬ್ಬ , ಶ್ರೀನಿವಾಸ ಕಲ್ಯಾಣೋತ್ಸವ

ಶಿಡ್ಲಘಟ್ಟ : ಕಲ್ಯಾಣೋತ್ಸವವನ್ನು ದಿಬ್ಬೂರಹಳ್ಳಿ ಬ್ರಾಹ್ಮಣರ ಸಂಘದ ಸಹಕಾರದಿಂದ ಅನಂತಪುರದ ಶ್ರೀನಾಗರಾಜಶಾಸ್ತ್ರಿ ಅವರ ತಂಡ ಪೂಜಾ ಕಾರ್ಯ ನೆರವೇರಿಸಿತು.

ದಿಬ್ಬೂರಹಳ್ಳಿ ಹಾಗು ತಾಲ್ಲೂಕಿನಾದ್ಯಂತ ಸಕಾಲದಲ್ಲಿ ಮಳೆ ಬೆಳೆಗಳಾಗಿ ರೈತರು, ಜನರು ಸಮೃದ್ಧಿಯಿಂದ ಜೀವನ ನಡೆಸಬೇಕು ಎಂದು ಪ್ರಾರ್ಥಿಸಿದರು.

ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, 3ನೇ ವರ್ಷದ ಊರಹಬ್ಬ, ಅದ್ದೂರಿ ಕರಗ ಮಹೋತ್ಸವ ಆಚರಿಸಲಾಯಿತು.

ಗ್ರಾಮದಲ್ಲಿ ನಡೆದ 3 ದಿನಗಳ ಊರಹಬ್ಬ, ಕರಗಮಹೋತ್ಸವ, ಕಲ್ಯಾಣೋತ್ಸವಕ್ಕಾಗಿ ಇಡೀ ಊರು ಶೃಂಗಾರಗೊಂಡಿತ್ತು ಗ್ರಾಮದಲ್ಲಿರುವ ಬೀದಿಗಳನ್ನು ವಿದ್ಯುತ್‌ ದೀಪಗಳ ಅಲಂಕಾರದಿಂದ ಕಂಗೊಳಿಸಿತ್ತು.

ದಿಬ್ಬೂರಹಳ್ಳಿ ಗ್ರಾಮದಲ್ಲಿರುವ ಶ್ರೀಭಕ್ತಾಂಜನೇಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು ,ಕರಗವನ್ನು ಈ ಬಾರಿ ಬಂಗಾರಪೇಟೆಯ ಚರಣ್ ರಾಜ್ ಅವರು ಹೊತ್ತಿದ್ದರು. ಕಲ್ಯಾಣೋತ್ಸವಕ್ಕೆ ಗ್ರಾಮ, ಸುತ್ತಮುತ್ತಲ ಗ್ರಾಮಗಳಿಂದ ಭಕ್ತಾದಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಮಾಜಿ ಸದಸ್ಯ ಬಿ.ಚಿಕ್ಕಪ್ಪಯ್ಯ, ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಸಿ.ರಾಮಚಂದ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ಪಿ.ನಾಗರಾಜ್, ತಿಮ್ಮನಾಯಕನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಶ್ರೀಲತಾ, ಮಂಜುನಾಥ್,
ಮುಖಂಡ ಶ್ರೀರಂಗಪ್ಪ, ತಲಕಾಯಲಬೆಟ್ಟ ದೇವಸ್ಥಾನದ ಶಿವಣ್ಣ, ತಾಲ್ಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಆಂಜಿನಪ್ಪ, ದಿಬ್ಬೂರಹಳ್ಳಿ ಬ್ರಾಹ್ಮಣರ ಸಂಘದ ಅಧ್ಯಕ್ಷ ಶಂಕ‌ರ್, ಕಾರ್ಯದರ್ಶಿ ಎಂ.ವಿ.ಹರೀಶ್ ಬಾಬು ಮುಂತಾದವರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now