ವಿಜಯ ದರ್ಪಣ ನ್ಯೂಸ್…
ವಿಶ್ವ ಪರಿಸರ ದಿನಾಚರಣೆ- ಹಸಿರು ಕರ್ನಾಟಕ
ಪರಿಸರ ಸಮತೋಲನ ಕಾಪಾಡಿ :ಸಚಿವ ಕೆ ಹೆಚ್ ಮುನಿಯಪ್ಪ

ಬೆಂ.ಗ್ರಾ.ಜಿಲ್ಲೆ ಜೂ.05:
ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಗಿಡ ಮರ ಬೆಳೆಸಿ ಅರಣ್ಯ ಉಳಿಸಿ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದೇವನಹಳ್ಳಿ ಟೌನ್ ನಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಮಾರು 40-50 ವರ್ಷಗಳ ಹಿಂದೆ ಕಾಲಕಾಲಕ್ಕೆ ಮಳೆ ಆಗುತ್ತಿತ್ತು, ಅರಣ್ಯ ಪ್ರದೇಶ ಹೆಚ್ಚಾಗಿತ್ತು. ಜನಸಂಖ್ಯೆ 30 ರಿಂದ 35 ಕೋಟಿ ಇತ್ತು. ಈಗ ಭಾರತದ ಜನಸಂಖ್ಯೆ 150 ಕೋಟಿ ಆಗಿದೆ. ಕೈಗಾರಿಕೆಗಳು ಹೆಚ್ಚಾಗಿದೆ. ಅರಣ್ಯ, ಪರಿಸರ ಕಡಿಮೆ ಆಗಿದೆ.
ಆಧುನೀಕರಣ, ಕೈಗಾರಿಕೀಕರಣ, ಜನಸಂಖ್ಯೆ ಬೆಳೆದಂತೆಲ್ಲ ಪರಿಸರ ನಾಶ ಆಗುತ್ತಿದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಭೂಮಿ ಮೇಲೆ ಮೂರನೇ ಎರಡು ಭಾಗದಷ್ಟು ಪರಿಸರ ಇರಬೇಕು. ನಾವೆಲ್ಲರೂ ಗಿಡ, ಮರ ಬೆಳೆಸಿ ಪರಿಸರ ಉಳಿಸಬೇಕು. ಇದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯ, ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಗೆ ನಮ್ಮ ಸರ್ಕಾರವು ಅತಿ ಹೆಚ್ಚು ಗಿಡಗಳನ್ನು ಬೆಳೆಸಲು ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಸಿಇಒ ಡಾ. ವಾಸಂತಿ ಅಮರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷ ಜಗನ್ನಾಥ, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಂಜುನಾಥ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.









